
ನವದೆಹಲಿ : ಕ್ಷುದ್ರ ಗ್ರಹಗಳು ಆಕಾಶದೆಲ್ಲೆಡೆ ಹರಡಿಕೊಂಡಿರುತ್ತದೆ. ಆದ್ರೆ ಅದು ಭೂಮಿಯ ಹತ್ತಿರ ಬಂದ್ರೆ ಮಾತ್ರ ತೊಂದರೆ. ಆದ್ರೆ ಇದೀಗ ಅಂತಹದೊಂದು ಘಟನೆ ನಡೆಯಲಿದೆ. ಆಕಾಶ ಕಾಯವೊಂದು ಭೂಮಿಯ ಬಳಿ ಬರಲಿದೆ ಅಂತ ನಾಸಾ ಹೇಳಿದೆ.

ನಾಸಾದ ಪ್ರಕಾರ ಸೆಪ್ಟಂಬರ್ 1 ರಂದು ಈ ಕ್ಷುದ್ರ ಗೃಹ ಭೂಮಿಯ ಹತ್ತಿರಕ್ಕೆ ಬರಲಿದೆ. 22 ರಿಂದ 29 ಮೀಟರ್ ನಷ್ಟು ಸುತ್ತಳೆಯನ್ನು ಹೊಂದಿದ್ದು, ಈ ಕ್ಷುದ್ರ ಗ್ರಹ ಸೆಕೆಂಡಿಗೆ ಸುಮಾರು 8.16 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ಬರಲಿದೆ.

ಈ ಕ್ಷುದ್ರ ಗ್ರಹವನ್ನು 2011ರಲ್ಲಿ ಉಪಗ್ರ್ರಹ ಪತ್ತೆಹಚ್ಚಿತ್ತು. ಈ ಬಗ್ಗೆ ಹೇಳಿರುವ ನಾಸಾ ಇದು ಭೂಮಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಹಾದು ಹೋಗಲಿದೆ.

ಅದರೆ ಭೂಮಿಯಿಂದ 12 ಸಾವಿರ ಕಿಲೋ ಮೀಟರ್ ದೂರದಲ್ಲಿ ಇದು ಹಾದು ಹೋಗಲಿದೆ ಅಂತ ಹೇಳಿದೆ. ಇದರಿಂದ ಭೂಮಿಗೆ ಯಾವುದೇ ತೊಂದರೆ ಇಲ್ಲ ಅಂತ ಹೇಳಿದೆ. ಒಂದೊಮ್ಮೆ ಭೂಮಿಯ ಕಕ್ಷೆಯ ಒಳಗೆ ಕ್ಷುದ್ರಗ್ರಹ ಎಂಟ್ರಿಕೊಟ್ರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.