ತಾಯಿ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಮಾಡಿದ ಕಿಚ್ಚ

0

ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಈ ಬಾರಿಯ ತಾಯಿ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಕೂಡ ಬಿಡುವುದು ಅಮ್ಮನ ಹುಟ್ಟು ಹಬ್ಬಕ್ಕೆ ಬಿಡುವು ಮಾಡಿಕೊಂಡಿದ್ದಾರೆ. ಇಡೀ ದಿನ ತಾಯಿಯೊಂದಿಗೆ ಕಳೆಯುವ ಮೂಲಕ ದಿನವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ಅದ್ರಲ್ಲೂ ತಾಯಿಗೆ ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.

ಕಿಚ್ಚನಿಗೆ ತಾಯಿಯ ಮೇಲೆ ಎಲ್ಲಿಲ್ಲದ ಅಕ್ಕರೆ ಪ್ರೀತಿ. ಹೀಗಾಗಿಯೇ ತನ್ನ ತಾಯಿಯ ಹುಟ್ಟುಹಬ್ಬವನ್ನು ಸುದೀಪ್ ವರ್ಷಂಪ್ರತಿ ವಿಭಿನ್ನವಾಗಿ ಆಚರಿಸುತ್ತಾರೆ. ಅದ್ರಲ್ಲೂ ಈ ಬಾರಿ ಫ್ಯಾಂಟಮ್ ಹಾಗೂ ಕೋಟಿಗೊಬ್ಬ-3 ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದು, ಲಾಕ್‍ಡೌನ್ ಬಳಿಕ ಹೈದರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರೀಕರಣವನ್ನು ಆರಂಭಿಸಿದ್ದಾರೆ.

ಈ ಕುರಿತು ಅಪ್‍ಡೇಟ್‍ಗಳನ್ನು ಸಹ ನೀಡುತ್ತಿದ್ದಾರೆ. ಅಲ್ಲದೆ ಇನ್ನೊಂದೆಡೆ ಕೋಟಿಗೊಬ್ಬ-3 ಚಿತ್ರೀಕರಣ ಸಹ ನಡೆಯುತ್ತಿದೆ. ಆದರೂ ಕೂಡ ತಾಯಿಯ ಹುಟ್ಟಹಬ್ಬದ ದಿನದಂದು ತನ್ನಿಡಿ ದಿನವನ್ನು ತಾಯಿಯೊಂದಿಗೆ ಕಳೆದಿದ್ದಾರೆ. ಈ ಬಾರಿ ಸುದೀಪ್ ಭಾವನಾತ್ಮಕವಾಗಿ ಹಾಗೂ ಸವಿ ನೆನಪಿನ ಶುಭಾಶಯವನ್ನು ತಿಳಿಸಿದ್ದಾರೆ.

ಅಮ್ಮನಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಕಿಚ್ಚ, ಎಲ್ಲರೂ ನನ್ನನ್ನು ಬಿಟ್ಟು ಹೋಗುತ್ತಿದ್ದಾಗ ನೀನು ನನ್ನಲ್ಲಿ ನಂಬಿಕೆ ಇಟ್ಟಿದ್ದೆ. ಶಾಲೆಯಲ್ಲಿ ನಾನು ಪ್ರಶಸ್ತಿ ಪಡೆದು, ಬೊಕ್ಕೆಯನ್ನು ತಂದಾಗ ತುಂಬಾ ಹರ್ಷ ವ್ಯಕ್ತಪಡಿಸುತ್ತಿದು ಇನ್ನೂ ನೆನಪಿದೆ.

ಇಂದಿಗೂ ನಿನ್ನಲ್ಲಿ ಅದೇ ರೀತಿಯ ಸಂತಸವನ್ನು ಕಾಣುತ್ತಿದ್ದೇನೆ. ಇದು ನನ್ನ ಕಡೆಯಿಂದ ಒಂದು ಸಣ್ಣ ಪೋಸ್ಟ್ ಆಗಿರಬಹುದು. ಹ್ಯಾಪಿ ಬರ್ತ್‍ಡೇ ಅಮ್ಮಾ…ನಮ್ಮೊಂದಿಗೆ ನೀನು ಇನ್ನೂ ಹೆಚ್ಚು ವರ್ಷ ಕಾಲ ಕಳೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Leave A Reply

Your email address will not be published.