ಜೀವ ತೆಗೆಯಿತು ಆತನ ಕನಸು, ಪ್ರಾಣಿಗಳನ್ನು ಸಾಕೋ ಮುಂಚೆ ಹುಷಾರ್

0
  • ವಂದನಾ ಕೊಮ್ಮುಂಜೆ

ಮನುಷ್ಯ ಮನಸ್ಸು ಮಾಡಿದ್ರೆ ಯಾರನ್ನಾದ್ರೂ ಪಣಗಿಸಬಲ್ಲ ಅನ್ನೋ ಮಾತಿದೆ. ನಾಯಿಯನ್ನು ಬೆಕ್ಕು ಅಥವಾ ಸಾಕು ಪ್ರಾಣಿಗಳನ್ನೂ ಸಾಕೋದು ಒಂದು ತರಹ. ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಸಾಕೋದು ಇನ್ನೊಂದು ತರಹ . ಆದ್ರೆ ಕೆಲವರು ಹುಲಿ ಸಿಂಹ ಆನೆ ಯನ್ನೂ ಕೆಲವರು ಪಳಗಿಸಿ ಸಾಕು ಪ್ರಾಣಿಗಳ ಹಾಗೆ ಸಾಕುತ್ತಾರೆ. ಇದನ್ನೂ ನೀವು ವಿಡಿಯೋಗಳಲ್ಲಿ ಕೂಡಾ ನೋಡಿರುತ್ತೀರಿ.

ಸಣ್ಣ ಪ್ರಾಣಿಗಳಾಗಿರೋವಾಗಲೇ ಸಾಕೋದ್ರಿಂದ ಅವುಗಳ ಜೊತೆಗೆ ಸಲುಗೆನೂ ಬೆಳೆದಿರುತ್ತೆ. ಹಾಗಂದ ಮಾತ್ರಕ್ಕೆ ಅವು ನಮಗೇನೂ ಮಾಡಲ್ಲ ಅನ್ನೋ ಭ್ರಮೆಯಲ್ಲಿ ಮಾತ್ರಾ ಇರಬೇಡಿ. ಯಾಕಂದ್ರೆ ಇಲ್ಲಿ ಅಂತಹದೇ ಒಂದು ಘಟನೆ ನಡೆದು ಹೋಗಿದೆ.

ಇದು ನಡೆದಿರೋದು ಸೌತ್ ಆಫ್ರಿಕಾದಲ್ಲಿ. ಮಾಥ್ಯೂಸನ್ ಎಂಬಾತನಿಗೆ ಸಿಂಹಗಳೆಂದರೆ ತುಂಬಾ ಪ್ರೀತಿ. ಸಿಂಹ ಸಾಕೋದು ಆತನ ಕನಸು ಕೂಡಾ ಆಗಿತ್ತು. ಅದರಂತೆ ತನ್ನ ಮನೆಗೆ ಎರಡು ಬಿಳಿ ಸಿಂಹ ಮರಿಗಳನ್ನೂ ಸಾಕೋಕೆ ತಂದಿದ್ದ.

ಅವುಗಳು ಸಹಾ ಅವನನ್ನು ಎಷ್ಟು ಹಚ್ಚಿಕೊಂಡಿದ್ದವು ಎಂದರೆ ಅವನ ಜೊತೆ ಆಟವಾಡುವುದನ್ನು ಮಾಡುತ್ತಿದ್ದವು. ಅವನ ಮಾತನ್ನು ಚಾಚೂ ತಪ್ಪದೆ ಪಾಲಿಸ್ತಾ ಕೂಡಾ ಇದ್ದವು. ಆತ ತಾನು ಎರಡು ಸಿಂಹಗಳ ಜೊತೆ ಸ್ನೇಹ ಬೆಳೆಸುತ್ತಿದ್ದೇನೆ ಎಂದು ಎಲ್ಲರ ಬಳಿ ಹೇಳ್ತಿದ್ದ.

ಆತನಿಗೆ ಇನ್ನೊಂದು ಕನಸೆಂದರೆ ಸಿಂಹಗಳ ಜೊತೆ ವಾಕಿಂಗ್ ಹೋಗೋದು. ಅವನು ದಿನಕ್ಕೆ 3 ಗಂಟೆಗಳ ಕಾಲ ಸಿಂಹದ ಜೊತೆ ವಾಕಿಂಗ್ ಹೋಗ್ತಿದ್ದ. ಇದು ಹಲವಾರು ವರ್ಷಗಳಿಂದ ನಡೆದು ಬರ್ತಿತ್ತು. ಅವು ಕೂಡಾ ಯಾವುದೇ ತೊಂದರೆ ಮಾಡದೇ ವಾಕಿಂಗ್ ಗೆ ಹೊಗುತ್ತಿದ್ದವು. ಆದ್ರೆ ಆ ದಿನ ಮಾತ್ರ ಆವನ ಟೈಮ್ ಕೆಟ್ಟಿತ್ತು ಅನಿಸುತ್ತೆ.

ಅವನು ಎಂದಿನಂತೆ ಸಿಂಹಗಳನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ. ಪತ್ನಿಯೂ ಕಾರಿನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದಳು. ಸ್ವಲ್ಪ ದೂರ ಹೋಗುತ್ತಿದಂತೆ ಸಿಂಹಗಳು ಆತನ ಮೇಲೆ ದಾಳಿ ಮಾಡಿವೆ. ಪತ್ನಿಯ ಎದುರೇ ಆತನನ್ನು ಕರೆದುಕೊಂಡು ಹೋಗಿವೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಿಡದೇ ಕೊಂದು ಹಾಕಿವೆ.

ಇದಕ್ಕೂ ಮುನ್ನ ಈ ಸಿಂಹಗಳು 2017 ರಲ್ಲಿ ಬೇಲಿ ಹಾರಿ ಪಕ್ಕದ ಜಾಗದಲ್ಲಿದ್ದ ವ್ಯಕ್ತಿಯನ್ನು ಕೊಂದು ಹಾಕಿದ್ದವು. ಆಗಲೇ ಮಾಥ್ಯೂಸನ್ ಕುಟುಂಬ ಸಿಂಹಗಳನ್ನು ಝೂಗೆ ನೀಡುವಂತೆ ಸೂಚಿಸಿದ್ರೂ. ಆದ್ರೆ ಮಾಥ್ಯೂಸನ್ ಮಾತ್ರ ತನಗೆ ಸಿಂಹ ಏನೂ ಮಾಡಲ್ಲ ಅಂತ ಹೇಳಿದ್ದ. ಝೂಗೆ ನೀಡಲು ನಿರಾಕರಿಸಿದ್ದ. ಆದ್ರೆ ಈಗ ಇದೇ ಸಿಂಹಗಳು ಆತನನ್ನು ಬಲಿ ಪಡೆದಿವೆ.

ಅದಕ್ಕೆ ಹೇಳೋದಿರಬೇಕು ಅತಿಯಾದ್ರೆ ಅಮೃತವೂ ವಿಷ ಅಂತ . ಪ್ರಾಣಿಗಳಿಗೂ ಅದರದ್ದೇ ಆದ ಬದುಕಿದೆ ಅದರಂತೆ ಅದನ್ನು ಬದುಕಲು ಬಿಟ್ರೆ ಒಳಿತು ಅಲ್ವಾ ?

Leave A Reply

Your email address will not be published.