wedding menu printed on ruler :ಮದುವೆ ಎಂದರೆ ಅದೊಂದು ದೊಡ್ಡ ಸಂಭ್ರಮ. ಪ್ರತಿಯೊಬ್ಬ ವಧು ವರನಿಗೂ ತಮ್ಮ ಮದುವೆ ಎಲ್ಲರಿಗಿಂತ ಭಿನ್ನವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ಹಲವು ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮದುವೆ ಮಂಟಪದ ಅಲಂಕಾರವನ್ನು ಡಿಫರೆಂಟ್ ಆಗಿ ಮಾಡಿದರೆ, ಇನ್ನು ಕೆಲವರು ತಮ್ಮ ಧಿರಿಸಿನಲ್ಲಿ ವಿಶೇಷತೆಯನ್ನು ತೋರುತ್ತಾರೆ. ಮತ್ತಷ್ಟು ಮಂದಿ ತರಹೇವಾರಿ ಅಡುಗೆಗಳನ್ನು ಮಾಡಿ ತಮ್ಮ ವಿಭಿನ್ನತೆಯನ್ನು ಪ್ರದರ್ಶಿಸುವುದುಂಟು. ಆದರೆ ಇಲ್ಲೊಂದು ನವಜೋಡಿ ತಮ್ಮ ಮದುವೆಯಲ್ಲಿ ಮಾಡಿದ ಈ ಡಿಫರೆಂಟ್ ಕಾರ್ಯ ಎಷ್ಟರ ಮಟ್ಟಿಗೆ ಸೌಂಡ್ ಮಾಡ್ತಿದೆ ಅಂದರೆ ಸೋಶಿಯಲ್ ಮೀಡಿಯಾದಲ್ಲೆಲ್ಲ ವೈರಲ್ ಆಗಿದೆ.
ಮದುವೆ ಮನೆ ಅಂದಮೇಲೆ ಅಲ್ಲಿ ಒಳ್ಳೊಳ್ಳೆ ಅಡುಗೆಗಳು ಇರಲೇಬೇಕು. ಕೆಲವು ಕಡೆಗಳಲ್ಲಿ ಮದುವೆ ಮನೆಯ ಮೆನುವನ್ನು ಪ್ರಿಂಟ್ ಮಾಡಲಾಗುತ್ತದೆ. ಇದನ್ನು ಅವರು ಕಾರ್ಡ್ನಲ್ಲಿ ಪ್ರಿಂಟ್ ಮಾಡಬಹುದು. ಅಥವಾ ಅದು ಕರ ಪತ್ರದ ರೂಪದಲ್ಲಿಯೂ ಇರಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಮೆನುವನ್ನು ಸ್ಕೇಲ್ ಅಂದರೆ ಅಳತೆ ಪಟ್ಟಿಯ ಮೇಲೆ ಮುದ್ರಿಸಲಾಗಿದೆ..! ಈ ಫೋಟೋವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿದ್ದರು ಸೋಶಿಯಲ್ ಮೀಡಿಯಾದಲ್ಲಿ ಈ ಫೊಟೋ ಹಾಟ್ ಕೇಕ್ನಂತೆ ಸೇಲ್ ಆಗ್ತಿದೆ.
মেপে খাবেন, সেই জন্য। #tradition #WeddingMenu pic.twitter.com/F4C3R98Hhq
— Stereotypewriter (@babumoshoy) January 9, 2022
ಅಂದಹಾಗೆ ಇದು ನಿನ್ನೆ ಮೊನ್ನೆ ನಡೆದ ಮದುವೆಯಲ್ಲ. ಬದಲಾಗಿ 2013ರಲ್ಲಿ ನಡೆದ ಒಂದು ಮದುವೆ ಕಾರ್ಯಕ್ರಮವಾಗಿದೆ. ಈ ಮದುವೆ ಮನೆಯಲ್ಲಿ ಅತಿಥಿಗಳಿಗೆ ನೀಡಬೇಕಾದ ಆಹಾರದ ಪಟ್ಟಿಯನ್ನು ಅಳತೆ ಪಟ್ಟಿಗಳ ಮೇಲೆ ಮುದ್ರಿಸಲಾಗಿತ್ತು. ಈ ಅಳತೆ ಪಟ್ಟಿಯ ಮೇಲೆ ಬಂಗಾಳದ ಫೇಮಸ್ ಆಹಾರ ಪದಾರ್ಥಗಳಾದ ಫಿಶ್ ಕಾಲಿಯಾ, ಫ್ರೈಡ್ ರೈಸ್, ಮಟನ್ ಮಸಾಲಾ, ಮಾವಿನಕಾಯಿ ಚಟ್ನಿ ಹೀಗೆ ಹಲವು ಹೆಸರುಗಳನ್ನು ಮುದ್ರಿಸಲಾಗಿದೆ. ಸುಶ್ಮಿತಾ ಹಾಗೂ ಅನಿಮೇಷ್ ಎನ್ ಸಿಲ್ಗುರಿ ಎಂಬವರ ವಿವಾಹದ ಮದುವೆ ಮೆನು ಇದಾಗಿದೆ.
ಇದನ್ನು ಓದಿ :How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?
Bengali wedding menu printed on ruler makes netizens go ROFL. Viral pics