Karex : ಕೊರೋನಾ ಎಫೆಕ್ಟ್ : ಕಾಂಡೋಮ್ ಬಿಟ್ಟು ಗ್ಲೌಸ್ ಮೊರೆ ಹೋದ ಕರೆಕ್ಸ್‌ಕಂಪನಿ

ಕೊರೋನಾದಿಂದ ಎಲ್ಲ‌ ಉದ್ಯಮಗಳು ನಷ್ಟಕ್ಕೆ ಸಿಲುಕಿದ್ದು, ಜಗತ್ತಿನ ಅದೆಷ್ಟೋ ಉದ್ಯಮಿಗಳು ನಷ್ಟ ತಡೆಯಲಾಗದೇ ಆತ್ಮಹತ್ಯೆಯಂಥಹ ನಿರ್ಧಾರ ಕೈಗೊಂಡಿದ್ದು, ಕಾರ್ಖಾನೆಗಳು ಬಾಗಿಲು‌ಮುಚ್ಚಿದ್ದು ಈಗ ಇತಿಹಾಸ. ಆದರೆ ಈ ಕೊರೋನಾದಿಂದ ಉದ್ಯಮವೊಂದು ತನ್ನ ಉತ್ಪಾದನೆಯ ಸರಕನ್ನೇ ಬದಲಿಸಿದ ಅಚ್ಚರಿಯ ಸಂಗತಿ ನಡೆದಿದೆ. ಕಾಂಡೋಮ್‌ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಕರೆಕ್ಸ್‌ ಕಂಪನಿ (Karex) ನಷ್ಟದಿಂದ ಹೊರಬರಲು ಕಾಂಡೋಮ್‌ ಉತ್ಪಾದನೆ ಬಿಟ್ಟು ಗ್ಲೌಸ್ ಉತ್ಪಾದನೆಗೆ ಮುಂದಾಗಿದೆ.

ಈ ವಿಚಾರವನ್ನು ಸ್ವತಃ ಕರೆಕ್ಸ್‌ ಕಂಪನಿಯ ಸಿಇಒ ಗೊ ಮಿಯಾ ಕಿಯಾತ್ ವಿವರಣೆ ನೀಡಿದ್ದು, ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದ ಜನರು ಮನೆಯಲ್ಲೇ ಉಳಿದರು. ಜನರು ಮನೆಯಿಂದ ಆಚೆ ಬಾರದೇ ಉಳಿದಿದ್ದರಿಂದ ನೀರಿಕ್ಷಿತ ಪ್ರಮಾಣದಲ್ಲಿ ಲೈಂಗಿಕ ಚಟುವಟಿಕೆ ಹೆಚ್ಚಲಿಲ್ಲ. ಹೀಗಾಗಿ ಕಾಂಡೋಮ್ ಮಾರಾಟದಲ್ಲಿ ಕುಸಿತವಾಯಿತು.

ಇದರಿಂದ ಅನಿವಾರ್ಯವಾಗಿ ಕಾಂಡೋಮ್ ಉತ್ಪಾದನೆ ಬಿಟ್ಟು ಗ್ಲೌಸ್ ತಯಾರಿಕೆಗೆ ಮುಂದಾಗಿದ್ದೇವೆ ಎಂದು ಕಿಯಾತ್ ಮಾಹಿತಿ‌ ನೀಡಿದ್ದಾರೆ.‌ಕೊರೋನಾ ವೇಳೆ ಗ್ಲೌಸ್ ಮಾರಾಟ ದಲ್ಲೂ ಏರಿಕೆಯಾಗಿದ್ದು ಈ ನಿರ್ಧಾರಕ್ಕೆ ಕಾರಣವಾಗಿರಬಹುದು. ವಿಶ್ವದಾದ್ಯಂತ ಕೊರೋನಾ ಅಬ್ಬರಿಸಿದ್ದರಿಂದ ಪ್ರವಾಸಿ ತಾಣಗಳು, ಮನೋರಂಜನಾ ಕ್ಷೇತ್ರ, ಲಾಡ್ಜ್, ರೆಸಾರ್ಟ್, ಹೊಟೇಲ್ ಗಳು ಮುಚ್ಚಿದ್ದವು. ಅಲ್ಲದೇ ಯಾವುದೇ ಕ್ರೀಡಾಕೂಟಗಳು,ಕ್ರಿಕೆಟ್ ಪಂದ್ಯಾವಳಿಗಳು ಕೂಡ ನಡೆಯಲಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಚಟುವಟಿಕೆಗಳು ನಡೆಯದೇ ಇದ್ದಿದ್ದರಿಂದ ವಿಶ್ವದಲ್ಲಿ 40 ಶೇಕಡಾದಷ್ಟು ಕಾಂಡೋಮ್ ಮಾರಾಟ ಕುಸಿದಿದೆ ಎಂದು ಪ್ರಪಂಚದ ಅತಿ ದೊಡ್ಡ ಫೈನಾನ್ಸಿಯಲ್ ನ್ಯೂಸ್ ಪೇಪರ್ ನಿಕ್ಕಿ ಏಷ್ಯಾ ವರದಿ ಮಾಡಿದೆ.

ಇದು ಕೇವಲ ಕರೆಕ್ಸ್ ಕಂಪನಿ ಮಾತ್ರವಲ್ಲ ಹಲವು ಕಾಂಡೋಮ್ ಉತ್ಪಾದನಾ ಸಂಸ್ಥೆಗಳ ಸ್ಥಿತಿಯಾಗಿದ್ದು, ಕೊರೋನಾ ಎರಡು ಅಲೆಗಳ ಪ್ರಭಾವದಿಂದ ಕಾಂಡೋಮ್ ಕಂಪನಿಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿದೆ ಎನ್ನಲಾಗುತ್ತಿದೆ. ಸದ್ಯ ಕೊರೋನಾ ಭಯದಿಂದ ಜನರು ಹೊರಗೆ ಬರುತ್ತಿದ್ದರೂ ಕೂಡ ಅಸುರಕ್ಷಿತ ಲೈಂಗಿಕ ಸಂಪರ್ಕ ಅಥವಾ ಮೋಜು‌ಮಸ್ತಿಗೆ ತೊಡಗಲು ರೋಗ ಭಯ ಕಾಡುತ್ತಲೇ ಇರೋದರಿಂದ ಸದ್ಯ ಕಾಂಡೋಮ್ ಗೆ ಬೇಡಿಕೆ ಹೆಚ್ಚೋದು ಕೂಡ ಅನುಮಾನವಾಗಿದೆ.

ಹೀಗಾಗಿ ಕರೆಕ್ಸ್ ನಂತಹ ಕಂಪನಿಗಳೇ ಕಾಂಡೋಮ್ ಉತ್ಪಾದನೆ ಬಿಟ್ಟು ಕೈಗವಸು ಉತ್ಪಾದನೆಗೆ ಮನಸ್ಸು ಮಾಡಿದೆ. ಕರೆಕ್ಸ್ ಕಂಪನಿ ಕೊರೋನಾಕ್ಕೂ ಮುನ್ನ ಪ್ರತಿ ವರ್ಷ 500 ಕೋಟಿ ಕಾಂಡೋಮ್ ಉತ್ಪಾದಿಸಿ ವಿಶ್ವದ 100 ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿತ್ತು.

ಇದನ್ನೂ ಓದಿ : ಡೊನಾಲ್ಡ್ ಟ್ರಂಪ್ ಆರಂಭಿಸಲಿರುವ ಟ್ರುತ್ ಸೋಷಿಯಲ್ ಆ್ಯಪ್ ಬಿಡುಗಡೆಗೆ ಸಕಲ ಸಿದ್ಧತೆ; ಟ್ವಿಟರ್‌ಗೆ ಕೊಡಲಿದೆಯಾ ಟಕ್ಕರ್?

ಇದನ್ನೂ ಓದಿ : ಕೊರೊನಾ ಸೋಂಕಿಗೊಳಗಾದ ಸಿಎಂ ಬೊಮ್ಮಾಯಿಯಿಂದ ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ..?

(Corona Effect, a Karex company that left a condom with gloss)

Comments are closed.