Chiranjeevi Sarja Birthday : ಚಿರಂಜೀವಿ ಸರ್ಜಾ ಬರ್ತಡೇ: ಭಾವನಾತ್ಮಕ ಪೋಸ್ಟ್ ಶೇರ್‌ಮಾಡಿದ ಮೇಘನಾ

ಮನುಷ್ಯರಿಗೆ ಸಾವಿರಬಹುದು. ಆದರೆ ಎರಡು ಹೃದಯಗಳ ನಡುವಿನ ಪ್ರೀತಿಗೆ ಸಾವಿಲ್ಲ. ಅದು ಅಜರಾಮರ. ಪ್ರೀತಿ ಹುಟ್ಟು ಸಾವಿನ ಹಂಗು ಮೀರಿದ್ದು, ಇಂತಹುದೇ ಪ್ರೀತಿಯೊಂದನ್ನು ನಟಿ ಮೇಘನಾ ಸರ್ಜಾ ಭಾವುಕ ಬರಹ ದೊಂದಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಎನ್ನಿಸಿದ್ದ ಚಿರು ಸರ್ಜಾ ಹುಟ್ಟುಹಬ್ಬದಂದು (Chiranjeevi Sarja Birthday) ಪತ್ನಿ ಮೇಘನಾ (Meghana Raj sarja) ವಿಭಿನ್ನವಾಗಿ ಶುಭಹಾರೈಸಿದ್ದಾರೆ.

ಚಿರಂಜೀವಿ ಸರ್ಜಾ. ಸ್ಯಾಂಡಲ್ ವುಡ್ ಕಂಡ ಪ್ರತಿಭಾನ್ವಿತ ನಟ. ತಮ್ಮದೇ ವಿಶಿಷ್ಟ ನಟನೆಯ ಮೂಲಕ ಹಾಗೂ ಅತ್ಯಂತ ಸರಳ ವ್ಯಕ್ತಿತ್ವದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದವರು. ಬದುಕಿದ್ದರೇ ಮೂವತ್ತೆಂಟನೇ ವಸಂತಕ್ಕೆ ಕಾಲಿಡುತ್ತಿದ್ದ ಚಿರು ಸರ್ಜಾ, ಕಾರ್ಡಿಕ್ ಅಟ್ಯಾಕ್ ನಿಂದ ಇಹಲೋಕ ತ್ಯಜಿಸಿ ಈಗಾಗಲೇ ಎರಡು ವರ್ಷ ಸಂದಿದೆ.
ಅಕ್ಟೋಬರ್ 17 ರಂದು ಚಿರು ಸರ್ಜಾ ಹುಟ್ಟುಹಬ್ಬ. ಈ ಸಂಭ್ರಮವನ್ನು ಗೆಳೆಯರು,ಪತ್ನಿಯ ಜೊತೆ ಪ್ರತಿವರ್ಷ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡ್ತಿದ್ದ ಚಿರು ಈ ಸರ್ಜಾ ಇನ್ನಿಲ್ಲ.‌ ಚಿರು ಇಲ್ಲದ ಎರಡನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ಕೇವಲ ಕುಟುಂಬದ ಜೊತೆ ಸರಳವಾಗಿ ಆಚರಿಸುತ್ತಿದ್ದಾರೆ.

ಆದರೆ ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಭಾವುಕ ಸಂದೇಶ ನೀಡಿದ್ದಾರೆ. ನನ್ನ ಖುಷಿಗೆ ಹ್ಯಾಪಿ ಬರ್ತಡೇ ಎಂದಿರೋ ಮೇಘನಾ, ವಿಷಯ ಯಾವುದೇ ಇರಲಿ, ವ್ಯಕ್ತಿ ಯಾರೇ ಇರಲಿ, ಒಂದಲ್ಲ ಎರಡಲ್ಲ ನನ್ನ ಎಲ್ಲ ನಗುವಿನ ಕಾರಣ ನೀನೇ. ನಿನಗಾಗಿ ನಾನು‌ ನಗೋದು. ನನ್ನ ಪ್ರೀತಿಯ ಪತಿಗೆ ಹುಟ್ಟುಹಬ್ಬದ ಶುಭಾಶಯ ಎಂದಿದ್ದಾರೆ.

ಮೇಘನಾ ಈ ಎಮೋಶನಲ್ ಪೋಸ್ಟ್ ಗೆ ಅಭಿಮಾನಿಗಳು ಅಷ್ಟೇ ಭಾವುಕರಾಗಿ ರಿಪ್ಲೈ ಮಾಡಿದ್ದು, ಚಿರುಗೆ ಶುಭಹಾರೈಸಿದ್ದಾರೆ. ಕೇವಲ ಮೇಘನಾ ಸರ್ಜಾ ಮಾತ್ರವಲ್ಲ, ನಿರ್ದೇಶಕ ಪನ್ನಗಾಭರಣ ಕೂಡ ಭಾವುಕರಾಗಿ ಚಿರು ಜೊತೆಗಿನ ಪೋಟೋ ಶೇರ್ ಮಾಡಿದ್ದು, ನಿನ್ನ ನಮ್ಮ ಪ್ರಾರ್ಥನೆ,ಪ್ರೀತಿ ಹಾಗೂ ಕೊನೆಯಾಗದ ಸ್ನೇಹದಲ್ಲಿ ಸದಾ ಜೀವಂತ ಎಂದಿದ್ದಾರೆ.

ಸದ್ಯ ಚಿರು ಸರ್ಜಾ ಕನಸುಗಳನ್ನು‌ ನನಸು ಮಾಡೋ ಪ್ರಯತ್ನದಲ್ಲಿರೋ ಮೇಘನಾ ಸರ್ಜಾ ನಟನೆಗೆ ಮರಳಿದ್ದಾರೆ. ಕೇವಲ ನಟನೆ ಮಾತ್ರವಲ್ಲ ಜಾಹೀರಾತು, ರಿಯಾಲಿಟಿ ಶೋದಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಅಕ್ಟೋಬರ್ ತಿಂಗಳು ಸರ್ಜಾ ಕುಟುಂಬಕ್ಕೆ ವಿಶೇಷವಾಗಿದ್ದು, ಅಕ್ಟೋಬರ್ 22 ರಂದು ಚಿರು ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬವಿದೆ.

ಇದನ್ನೂ ಓದಿ : Vaishali Takkar Suicide : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ : ಡೆತ್ ನೋಟ್ ನಲ್ಲಿದೆ ಸಾವಿನ ಅಸಲಿ ಕಾರಣ

ಇದನ್ನೂ ಓದಿ : Kantara: ‘ಕಾಂತಾರ’ ಸಿನಿಮಾವನ್ನು ಹಾಡಿಹೊಗಳಿದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

Chiranjeevi Sarja Birthday Meghana Raj sarja Emotional Tweet

Comments are closed.