ಬಾಲ್ಯ ವಿವಾಹದ (Child Marriage) ವಿರುದ್ಧ ಸರ್ಕಾರವು ಎಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಸಹ ದೇಶದ ಕೆಲವೆಡೆ ಇನ್ನೂ ಈ ಅನಿಷ್ಟ ಪದ್ಧತಿ ಜೀವಂತವಾಗಿದೆ. ಓದುವ ಮಕ್ಕಳನ್ನು ಮದುವೆಯ ಬಂಧನದ ಹೆಸರಿನಲ್ಲಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುವ ಈ ಪದ್ಧತಿಗೆ ಇನ್ನೂ ಅದೆಷ್ಟೋ ಮುಗ್ದ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ..!
ರಾಜಸ್ಥಾನದ ಚಿತ್ತೋರಗಢದಲ್ಲಿ ಮಾತ್ರ ಬಾಲ್ಯವಿವಾಹಕ್ಕೆ ಒಳಗಾಗಬೇಕಾಗಿದ್ದ ಬಾಲಕಿ ದಿಟ್ಟತನ ತೋರುವ ಮೂಲಕ ಅನೇಕರಿಗೆ ಮಾದರಿ ಎನಿಸಿದ್ದಾಳೆ. ಮನೆಯ ಹಿರಿಯರು ನಿಶ್ಚಯಿಸಿದ್ದ ಬಾಲ್ಯವಿವಾಹದಿಂದ ಪಾರಾಗುವ ಸಲುವಾಗಿ ಬಾಲಕಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಡಿಸೆಂಬರ್ 11ರಂದು ಬಾಲಕಿಯ ವಿವಾಹ ಆಕೆಯ ಅತ್ತೆಯ ಮಗನೊಂದಿಗೆ ನಿಶ್ಚಯವಾಗಿತ್ತು. 9ನೇ ತರಗತಿ ಓದುತ್ತಿದ್ದ ಬಾಲಕಿ ಹಾಗೂ ಆಕೆಯ ಪೋಷಕರು ಈ ಮದುವೆಗೆ ಒಪ್ಪದೇ ಇದ್ದರೂ ಸಹ ಶಾಸ್ತ್ರ ಹಾಗೂ ಸಂಪ್ರದಾಯದ ಹೆಸರಿನಲ್ಲಿ ಬಾಲಕಿಯ ತಾತ ಹಾಗೂ ಅತ್ತೆ ಮದುವೆ ಬಗ್ಗೆ ವಿಪರೀತ ಉತ್ಸಾಹ ತೋರಿದ್ದರು.
ಪರಿಸ್ಥಿತಿ ಬಿಗಡಾಯಿಸುತ್ತಿರೋದು ಬಾಲಕಿಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಬಾಲಕಿ ಈ ಮದುವೆ ತನಗಿಷ್ಟವಿಲ್ಲವೆಂದೂ ಹಾಗೂ ತಾನು ಶಿಕ್ಷಣ ಮುಂದುವರಿಸಲು ಬಯಸುತ್ತೇನೆಂದು ಮಾಹಿತಿ ನೀಡಿದ್ದಾಳೆ. ಕೂಡಲೇ ಅಲರ್ಟ್ ಆದ ರಾಜಸ್ಥಾನದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಚಿತ್ತೋರಗಢ ಬಡಿ ಸಬ್ರಿ ಠಾಣಾಧಿಕಾರಿ ಕೈಲಾಶ್ ಚಂದ್ರ ಸೋನಿ, ರಾಜ್ಯ ಮಕ್ಕಳ ರಕ್ಷಣಾ ಆಯೋಗವು ನೀಡಿದ ಮಾಹಿತಿಯನ್ನು ಆಧರಿಸಿ 14 ವರ್ಷದ ಬಾಲಕಿ, ಆಕೆಯ ಪೋಷಕರು ಹಾಗೂ ತಾತನನ್ನು ಠಾಣೆಗೆ ಕರೆಸಿದ್ದೇವೆ. ವಿಚಾರಣೆ ವೇಳೆ ಪೋಷಕರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂಬುದು ತಿಳಿದುಬಂದಿದೆ. ಹಳೆಯ ಶಾಸ್ತ್ರವೊಂದನ್ನು ನಂಬಿ ಈ ಮದುವೆ ನಡೆಸಲು ಬಾಲಕಿಯ ತಾತ ಹಾಗೂ ಅತ್ತೆ ಮುಂದಾಗಿದ್ದರು. ಆದರೆ ಈಗ ಈ ಬಾಲ್ಯ ವಿವಾಹ ಕಾಯ್ದೆಯ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲವೆಂದು ಬಾಲಕಿಯ ಕುಟುಂಬಸ್ಥರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ರು.
ಇದನ್ನು ಓದಿ : Become an IAS officer :ಹನಿಮೂನ್ ದಿನವೇ ಪತ್ನಿಯ ಎದುರು ವಿಚಿತ್ರ ಬೇಡಿಕೆ ಇಟ್ಟ ಪತಿರಾಯ..! ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ
Child Marriage : Class 9 girl in Rajasthan stops her wedding with SOS message to child helpline