IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಭೂ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ , ಅವರ ಸಿಬ್ಬಂದಿ ಹಾಗೂ ಕೆಲ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್​(IAF’s Mi-17V-5 helicopter crash) ತಮಿಳುನಾಡಿನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತಕ್ಕೊಳಗಾದ Mi-17V-5ನ್ನು ಮಧ್ಯಮ ಲಿಫ್ಟರ್​ ಚಾಪರ್​ ಎಂದು ಗುರುತಿಸಲಾಗಿದೆ. ಇದು ವಿಶ್ವದ ಅತ್ಯಂತ ಸುಧಾರಿತ ಹಾಗೂ ಬಹುಮುಖ್ಯ ಹೆಲಿಕಾಪ್ಟರ್​ಗಳಲ್ಲಿ ಒಂದಾಗಿದೆ. ಆದರೂ ಸಹ ಈ ಹಿಂದೆ ಕೂಡ ಎಂಐ ಸರಣಿಯ ಕೆಲ ಹೆಲಿಕಾಪ್ಟರ್​ಗಳು ದುರಂತಕ್ಕೆ ಈಡಾಗಿದ್ದವು. ವಿಶ್ವದ ಇತರೆ ಕಾರ್ಗೊ ಹೆಲಿಕಾಪ್ಟರ್​ಗಳಿಗೆ ಹೋಲಿಕೆ ಮಾಡಿದರೆ ಈ ಹೆಲಿಕಾಪ್ಟರ್​ನ ಸುರಕ್ಷತಾ ದಾಖಲೆಯು ಉತ್ತಮವಾಗಿದೆ. Mi-17V-5 ಹೆಲಿಕಾಪ್ಟರ್​ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು ಇಲ್ಲಿವೆ ನೋಡಿ.

Mi-17V-5 ಇತಿಹಾಸ :

Mi-17V-5 ಹೆಲಿಕಾಪ್ಟರ್​ Mi-8/17 ಸರಣಿಗೆ ಸೇರಿದ ಮಿಲಿಟರಿ ಸಾರಿಗೆ ರೂಪಾಂತರವಾಗಿದೆ. ಇದು ವರ್ಸಟೈಲ್​, ವಿಶ್ವಾಸಾರ್ಹ ಹಾಗೂ ಮೌಲ್ಯಯುತ ಎಂಬ ಕಾರಣಕ್ಕೆ ಜಾಗತಿಕವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ಹೆಲಿಕಾಪ್ಟರ್​ಗಳನ್ನು ರಷ್ಯಾದ ಕಜಾನ್​ನಲ್ಲಿರುವ ರಷ್ಯಾದ ಹೆಲಿಕಾಪ್ಟರ್ ಅಂಗಸಂಸ್ಥೆಯಾದ ಕಜನ್​ ಹೆಲಿಕಾಪ್ಟರ್​ಗಳು ಉತ್ಪಾದಿಸುತ್ತವೆ. ಈ ಹೆಲಿಕಾಪ್ಟರ್​ಗಳನ್ನು ಸೈನ್ಯ, ಶಸ್ತ್ರಾಸ್ತ್ರ ಸಾರಿಗೆ, ಅಗ್ನಿಶಾಮಕ ವಿಭಾಗ, ಬೆಂಗಾವಲು ಪಡೆ, ಪಾರುಗಾಣಿಕಾ ಪಡೆ , ಗಸ್ತು ಕಾರ್ಯಾಚರಣೆ ಸೇರಿದಂತೆ ವಿವಿಧ ರೀತಿಯ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಬಹುದಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯವು 2008ರ ಡಿಸೆಂಬರ್​ ತಿಂಗಳಲ್ಲಿ ರಷ್ಯಾದ ಬಳಿ 80 ಹೆಲಿಕಾಪ್ಟರ್​ ಬೇಕೆಂದು ಹೇಳಿತ್ತು. 2011ರಲ್ಲಿ ಹೆಲಿಕಾಪ್ಟರ್​ ಪೂರೈಕೆ ಆರಂಭಿಸಿದ ರಷ್ಯಾ 2018ರಲ್ಲಿ ಕೊನೆಯ ಹೆಲಿಕಾಪ್ಟರ್​ನ್ನು ಹಸ್ತಾಂತರಿಸಿದೆ.

Mi-17V-5 ಇಂಜಿನ್​ ಸಾಮರ್ಥ್ಯ :

Mi-17V-5 ಹೆಲಿಕಾಪ್ಟರ್​ಗಳನ್ನು Klimov TV3-117VM ಅಥವಾ VK-2500 ಟರ್ಬೊ-ಶಾಫ್ಟ್ ಎಂಜಿನ್‌ನ ಸಹಾಯದಿಂದ ನಿಯಂತ್ರಿಸಲಾಗುತ್ತದೆ. TV3-117VM ಗರಿಷ್ಟ 2100 ಹೆಚ್​ಪಿ ಶಕ್ತಿಯನ್ನು ಅಭಿವೃದ್ಧಿ ಪಡಿಸಿದರೆ VK-2500 2700 ಹೆಚ್​ಪಿ ವಿದ್ಯುತ್​ ಉತ್ಪಾದನೆಯನ್ನು ಒದಗಿಸುತ್ತದೆ. ಹೊಸ ಜನರೇಷನ್​​ ಹೆಲಿಕಾಪ್ಟರ್​ಗಳು VK-2500 ಇಂಜಿನ್​ಗಳನ್ನು ಹೊಂದಿವೆ. ಇದು 250 kmph ವೇಗವನ್ನು ಹೊಂದಿದೆ. 580ಕಿಲೋಮೀಟರ್​ ವ್ಯಾಪ್ತಿಯನ್ನು ಹೊಂದಿದೆ. ಎರಡು ಸಹಾಯಕ ಇಂಧನ ಟ್ಯಾಂಕ್​ಗಳನ್ನು ಅಳವಡಿಸಿದ ಸಂದರ್ಭದಲ್ಲಿ ಇದನ್ನು 1065 ಕಿಲೋಮೀಟರ್​ಗೆ ವಿಸ್ತರಿಸಬಹುದು.ಹೆಲಿಕಾಪ್ಟರ್​ಗಳು ಗರಿಷ್ಟ 6000 ಮೀಟರ್​ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯವನ್ನು ಹೊಂದಿವೆ.

ಸೌಲಭ್ಯಗಳು :

ಎಂಐ 17 ಸಾರಿಗೆ ಹೆಲಿಕಾಪ್ಟರ್​​ ಪ್ರಯಾಣಿಕರಿಗೆ ಸ್ಟಾಂಡರ್ಡ್​ ಪೋರ್ಟ್​ಸೈಡ್​ ಬಾಗಿಲಿನ ಜೊತೆಯಲ್ಲಿ ದೊಡ್ಡ ಕ್ಯಾಬಿನ್​ನ್ನು ನೀಡುತ್ತದೆ. ಸರಕು ಸಾಗಣೆ ಮಾಡುವ ಸಲುವಾಗಿ ಹಿಂಭಾಗದಲ್ಲಿ ರ್ಯಾಂಪ್​ ಇಡಲಾಗಿದೆ. ಈ ಹೆಲಿಕಾಪ್ಟರ್​ಗಳು ಗರಿಷ್ಠ 13 ಸಾವಿರ ಕೆಜಿಯನ್ನು ಟೇಕಾಫ್​ ಮಾಡಬಲ್ಲವು. 36 ಶಸ್ತ್ರಸಜ್ಜಿತ ಸೈನಿಕರು ಅಥವಾ 4500 ಕೆಜಿ ಭಾರವನ್ನು ಸ್ಲಿಂಗ್​ ಮೇಲೆ ಸಾಗಿಸಬಹುದು. ಉಷ್ಣ ವಲಯ, ಕರಾವಳಿ ಭಾಗ ಹಾಗೂ ಮರಭೂಮಿ ಹವಾಮಾನಗಳನ್ನು ಆಧರಿಸಿ ಈ ಹೆಲಿಕಾಪ್ಟರ್​ಗಳನ್ನು ಬಳಕೆ ಮಾಡಬೇಕು.

ಇದನ್ನು ಓದಿ : Bipin Rawat : Army Helicopter Crash: ತುರ್ತು ಸಚಿವ ಸಂಪುಟ ಸಭೆ ಕರೆದ ಮೋದಿ, ದುರಂತ ಸ್ಥಳಕ್ಕೆ ಹೊರಟ ರಾಜನಾಥ್‌ ಸಿಂಗ್‌

ಇದನ್ನೂ ಓದಿ : Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ : ಬಿಪಿಎನ್‌ ರಾವತ್‌ ಪ್ರಯಾಣಿಸುತ್ತಿದ್ದ ವಿಮಾನ !

IAF’s Mi-17V-5 helicopter crash: All you need to know about Russia-made chopper – Safety, weapons & more

Comments are closed.