Legends Questions Virat Kohli : ಗಂಗೂಲಿ, ಸೆಹ್ವಾಗ್, ಯುವಿಗೊಂದು ನ್ಯಾಯ.. ಕೊಹ್ಲಿಗೊಂದು ನ್ಯಾಯನಾ..? ಗಂಭೀರ ಪ್ರಶ್ನೆ ಎತ್ತಿದ್ದ ಕರ್ನಾಟಕದ ದಿಗ್ಗಜ

ಲಂಡನ್: ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಎಂಬ ಮಾತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಈಗ ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವೈಫಲ್ಯಗಳ ಮೇಲೆ ವೈಫಲ್ಯಗಳನ್ನು ಎದುರಿಸುತ್ತಿರುವ ಕೊಹ್ಲಿ (Legends Questions Virat Kohli) ವಿರುದ್ಧ ಮಾಜಿ ಕ್ರಿಕೆಟಿಗರು ಟೀಕಾ ಪ್ರಹಾರಗಳನ್ನೇ ನಡೆಸುತ್ತಿದ್ದರೆ.

ಸದ್ಯ ವೃತ್ತಿಜೀವನದ ಅತ್ಯಂತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿರುವ ಕೊಹ್ಲಿ (Virat Kohli), ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಹಾಗೂ ಟಿ20 ಸರಣಿಯಲ್ಲೂ (India Tour of Engalnd) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದಾರೆ. ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್”ಗಳು ಸೇರಿ ಕೇವಲ 31 ರನ್ ಗಳಿಸಿದ್ದ ಕೊಹ್ಲಿ, 2 ಟಿ20 ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್ 12. ಇದು ಮತ್ತೆ ಕ್ರಿಕೆಟ್ ಪಂಡಿತರ ಕೆಂಗಣ್ಣಿಗೆ ಗುರಿಯಾಗಿದ್ದು, ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕೆಂದು ಆಗ್ರಹಿಸುತ್ತಿದ್ದಾರೆ. ಕೊಹ್ಲಿ ಟೀಕಾಕಾರರ ಪಟ್ಟಿಗೆ ಹೊಸ ಸೇರ್ಪಡೆ ಭಾರತ ತಂಡದ ಮಾಜಿ ಮಧ್ಯಮ ವೇಗಿ, ಕರ್ನಾಟಕದ ಬೌಲಿಂಗ್ ದಿಗ್ಗಜ ವೆಂಕಟೇಶ್ ಪ್ರಸಾದ್ (Venkatesh Prasad).

ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ರೂ, ಖ್ಯಾತಿ ಮತ್ತು ಹೆಸರಿನ ಕಾರಣದಿಂದಲೇ ತಂಡದಲ್ಲಿ ಸತತ ಅವಕಾಶ ಪಡೆಯುತ್ತಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವೆಂಕಿ, ಈ ಹಿಂದೆ ದಿಗ್ಗಜ ಆಟಗಾರರು ಫಾರ್ಮ್ ಕಳೆದುಕೊಂಡಾಗ ಏನಾಗಿತ್ತು ಎಂಬುದನ್ನು ಉದಾಹರಣೆಯಾಗಿ ನೀಡಿದ್ದಾರೆ.

“ಖ್ಯಾತಿ ಮತ್ತು ಹೆಸರಿನ ಹೊರತಾಗಿಯೂ ಫಾರ್ಮ್ ಕಳೆದುಕೊಂಡಾಗ ಆಟಗಾರರನ್ನು ತಂಡದಿಂದ ಕೈಬಿಡುವ ಕಾಲವೊಂದಿತ್ತು. ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಫಾರ್ಮ್”ನಲ್ಲಿಲ್ಲದಿದ್ದಾಗ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ತಂಡದಿಂದ ಹೊರ ಬಿದ್ದಾಗ ದೇಶೀಯ ಕ್ರಿಕೆಟ್’ಗೆ ಮರಳಿದ್ದ ಈ ಆಟಗಾರರು ಮತ್ತೆ ಫಾರ್ಮ್ ಕಂಡುಕೊಂಡು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ತುಂಬಾ ಬದಲಾದಂತೆ ಕಾಣುತ್ತಿದೆ. ಫಾರ್ಮ್ ಕಳೆದುಕೊಂಡವರನ್ನು ತಂಡದಿಂದ ಕೈಬಿಡುವ ಬದಲು ವಿಶ್ರಾಂತಿ ನೀಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ದೇಶದಲ್ಲಿ ತುಂಬಾ ಪ್ರತಿಭೆಗಳು ಅವಕಾಶಕ್ಕಾಗಿ ಕಾಯತ್ತಿದ್ದಾರೆ. ಕೇವಲ ಖ್ಯಾತಿಯ ಕಾರಣದಿಂದಲೇ ಭಾರತ ತಂಡದಲ್ಲಿ ಆಡಲು ಸಾಧ್ಯವಿಲ್ಲ. ಭಾರತದ ಶ್ರೇಷ್ಠ ಮ್ಯಾಚ್ ವಿನ್ನರ್ ಅನಿಲ್ ಕುಂಬ್ಳೆಯವರೇ ಸಾಕಷ್ಟು ಬಾರಿ ತಂಡದಿಂದ ಹೊರಗೆ ಕೂತಿದ್ದಾರೆ. ಭಾರತ ತಂಡದ ಹಿತಾಸಕ್ತಿಯ ದೃಷ್ಠಿಯಿಂದ ನಿರ್ಧಾರ ತೆಗೆದುಕೊಳ್ಳಬೇಕಿದೆ’’.

  • ವೆಂಕಟೇಶ್ ಪ್ರಸಾದ್, ಮಾಜಿ ಕ್ರಿಕೆಟಿಗ.

ಟೀಮ್ ಇಂಡಿಯಾದ ಒಂದು ಕಾಲದ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಶತಕ ಬಾರಿಸಲು ವಿಫಲರಾಗಿರುವ ವಿರಾಟ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ದಯನೀಯ ವೈಫಲ್ಯ ಎದುರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 1 ರನ್ನಿಗೆ ಔಟಾಗಿದ್ದ ಕೊಹ್ಲಿ, 2ನೇ ಪಂದ್ಯದಲ್ಲಿ ಒಂದು ಬೌಂಡರಿ, ಮತ್ತೊಂದು ಸಿಕ್ಸರ್ ಬಾರಿಸಿದ ಮುಂದಿನ ಎಸೆತದಲ್ಲೇ ಕೇವಲ 11 ರನ್ನಿಗೆ ವಿಕೆಟ್ ಒಪ್ಪಿಸಿದ್ದಾರೆ. ಔಟ್ ಆಫ್ ಫಾರ್ಮ್ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕು ಎಂದು ಮಾಜಿ ಕ್ರಿಕೆಟಿಗರು ಆಗ್ರಹಿಸ್ತಿದ್ದಾರೆ. ಸ್ವತಃ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ (Kapil Dev) ಅವರೇ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದರು.

ಆದರೆ ಮಾಜಿ ಕ್ರಿಕೆಟಿಗರ ಟೀಕೆಗಳಿಗೆ ಉತ್ತರ ಕೊಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (India Cricket Team Captain Rohit Sharma), ಔಟ್ ಆಫ್ ಫಾರ್ಮ್ ವಿರಾಟ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.

“ಹೊರಗಿನ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ ಕೊಹ್ಲಿಯನ್ನು ಟೀಕಿಸುವ ಕ್ರಿಕೆಟ್ ತಜ್ಞರು ಯಾರು ಎಂದು ನನಗೆ ತಿಳಿದಿಲ್ಲ. ಅವರನ್ನು ತಜ್ಞರು ಎಂದು ಏಕೆ ಕರೆಯುತ್ತಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಾವು ಉತ್ತಮ ತಂಡವನ್ನು ನಿರ್ಮಿಸುತ್ತಿದ್ದೇವೆ, ನಮಗೆ ನಮ್ಮದೇ ಆದ ಆಲೋಚನೆಗಳಿವೆ. ಆಟಗಾರರಿಗೆ ತಂಡದ ಸಂಪೂರ್ಣ ಬೆಂಬಲವಿದೆ, ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗುತ್ತದೆ. ಹೊರಗಿನ ಜನರಿಗೆ ಇದೆಲ್ಲಾ ಅರ್ಥವಾಗುವುದಿಲ್ಲ, ಹೊರಗೆ ಏನು ಮಾತನಾಡುತ್ತಾರೆ ಎಂಬುದು ನಮಗೆ ಮುಖ್ಯವಾಗುವುದಿಲ್ಲ. ನಾನೂ ಕೂಡ ಫಾರ್ಮ್ ಕಳೆದುಕೊಂಡಿದ್ದೆ, ನನಗೂ ಇದೇ ರೀತಿಯ ಅನುಭವ ಆಗಿದೆ. ಎಲ್ಲಾ ಆಟಗಾರರ ವೃತ್ತಿಬದುಕಿನಲ್ಲಿ ಏರಿಳಿತ ಸರ್ವೇ ಸಾಮಾನ್ಯ ಇದು ಹೊಸದೇನೂ ಅಲ್ಲ, ಕೆಲ ಆಟಗಾರರು ಇಷ್ಟು ವರ್ಷಗಳ ಕಾಲ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವಾಗ, ಒಂದೆರಡು ಸರಣಿ, ಪಂದ್ಯಗಳಲ್ಲಿ ಅವರ ಸಾಮರ್ಥ್ಯವನ್ನು ನಿರ್ಧರಿಸುವುದು ಸರಿಯಲ್ಲ. ಕೊಹ್ಲಿಯನ್ನು ಟೀಕಿಸುವವರು ಮೊದಲು ಇದನ್ನು ಅರ್ಥ ಮಾಡಿಕೊಳ್ಳಲಿ, ತಂಡವನ್ನು ನಡೆಸುತ್ತಿರುವವರಿಗೆ ಕೊಹ್ಲಿ ಆಟದ ಗುಣಮಟ್ಟ ತಿಳಿದಿದೆ’’.

  • ರೋಹಿತ್ ಶರ್ಮಾ, ಟೀಮ್ ಇಂಡಿಯಾ ನಾಯಕ.

ಇದನ್ನೂ ಓದಿ : Suryakumar Yadav Life Story : ಉತ್ತರ ಪ್ರದೇಶದ ಹುಡುಗ ಮುಂಬೈನಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡ, ಇದು ಸೂರ್ಯನ ಲೈಫ್ ಸ್ಟೋರಿ !

ಇದನ್ನೂ ಓದಿ : Rohit backs Kohli : ಔಟ್ ಆಫ್ ಫಾರ್ಮ್ ಕೊಹ್ಲಿಯನ್ನು ಡ್ರಾಪ್ ಮಾಡ್ಬೇಕಾ..? ಕ್ಯಾಪ್ಟನ್ ರೋಹಿತ್ ಏನಂದ್ರು ಕೇಳಿ

Team India Legends Questions Virat Kohli

Comments are closed.