ಲಂಡನ್ : ಜಗತ್ತಿನಾದ್ಯಂತ ಪ್ರಧಾನ ಆಹಾರವಾಗಿರುವುದು ಅಕ್ಕಿ. ಅಕ್ಕಿಯಲ್ಲಿರುವ ಕ್ಯಾಲೋರಿ ಹಾಗೂ ಪೋಷಕಾಂಶಗಳಿಂದಾಗಿ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅನ್ನವನ್ನೇ ಪ್ರಮುಖ ಆಹಾರವಾಗಿ ಬಳಕೆ ಮಾಡಲಾಗುತ್ತಿದೆ. ಆದ್ರೆ ಅನ್ನ ಸೇವನೆ ಮಾಡುವುದರಿಂದ ಜಗತ್ತಿನಾದ್ಯಂತ ವರ್ಷಂಪ್ರತಿ 50 ಸಾವಿರ ಮಂದಿ ಸಾವಿಗೆ ತುತ್ತಾಗುತ್ತಿದ್ದಾರೆ ಅನ್ನೋ ಆಘಾತಕಾರಿ ಮಾಹಿತಿ ಬಯಲಾಗಿದೆ.

ಬ್ರಿಟನ್ ವಾಸಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ ಮತ್ತು ಸಾಲ್ಫೋರ್ಡ್ ಯೂನಿವರ್ಸಿಟಿಯ ಸಂಶೋಧಕರು ಇಂಗ್ಲೆಂಡ್ ಮತ್ತು ವೇಲ್ಸ್ ವಾಸಿಗಳ ಮೇಲೆ ಸಂಶೋಧನೆಯೊಂದನ್ನು ನಡೆಸಲಾಗಿತ್ತು. ಈ ಸಂಶೋಧನೆ ನಿಜಕ್ಕೂ ಸಂಶೋಧಕರಿಗೂ ಆಘಾತವನ್ನುಂಟು ಮಾಡಿತ್ತು.

ಅಕ್ಕಿಯಲ್ಲಿರುವ ಆರ್ಸೆನಿಕ್ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು, ಅನ್ನದ ಸೇವೆಯಿಂದ ವರ್ಷದಲ್ಲಿ ಸರಾಸರಿ 50 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಅತಿಯಾಗಿ ಅನ್ನ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವ ತೊಂದರೆ ಅಧಿಕವಾಗಲಿದೆ ಎಂದು ನೂತನ ಸಂಶೋಧನೆಯೊಂದು ಎಚ್ಚರಿಸಿದೆ. ಬೆಳೆಯಲ್ಲಿ ನೈಸರ್ಗಿಕವಾಗಿ ಸಂಭವಿಸುವ ಆರ್ಸೆನಿಕ್ (ರಾಸಾಯನಿಕ ಅಂಶ) ಇದಕ್ಕೆ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಅಂದಹಾಗೆ ಆರ್ಸೆನಿಕ್ ಸ್ವಾಭಾವಿಕವಾಗಿ ಮಣ್ಣಿನಲ್ಲಿಯೇ ಉತ್ಪತ್ತಿಯಾಗುತ್ತದೆ. ಆರ್ಸೆನಿಕ್ ಆಧಾರಿತ ಸಸ್ಯನಾಶಕಗಳು ಅಥವಾ ನೀರಾವರಿ ಉದ್ದೇಶಕ್ಕೆ ಬಳಸುವ ಟಾಕ್ಸಿನ್ಯುಕ್ತ ನೀರಿನಲ್ಲಿ ಅರ್ಸೆನಿಕ್ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಭತ್ತ ಬೆಳೆಯಲು ನೀರಿನ ಪ್ರಮಾಣ ಅಧಿಕವಾಗಿ ಬೇಕಾಗಿರುವುದರಿಂದ ಬೆಳೆಯು ಮಣ್ಣಿನಲ್ಲಿರುವ ಆರ್ಸೆನಿಕ್ ಅನ್ನು ಹೀರಿಕೊಳ್ಳುತ್ತದೆ.

ವಿಶೇಷವಾಗಿ ಅಕ್ಕಿ ದುರ್ಬಲವಾಗಿರುತ್ತದೆ. ಏಕೆಂದರೆ ಸಸ್ಯವು ಅದರ ಬೇರಿನ ಮೂಲಕ ಹೀರಿಕೊಳ್ಳುವ ಇತರ ರಾಸಾಯನಿಕಗಳನ್ನು ಆರ್ಸೆನಿಕ್ ಸುಲಭವಾಗಿ ಅನುಕರಿಸುತ್ತದೆ. ಇದರಿಂದಾಗಿಯೇ ಟಾಕ್ಸಿನ್ ಸಸ್ಯದ ರಕ್ಷಣೆಯನ್ನು ಕಡೆಗಣಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಬ್ರಿಟನ್ ನಲ್ಲಿ ಶೇ.25ರಷ್ಟು ಪ್ರಮಾಣದಲ್ಲಿ ಅನ್ನ ಸೇವನೆ ಮಾಡುವ ಮೂಲಕ ಅಗ್ರಸ್ಥಾನವನ್ನು ಕಾಯ್ಡುಕೊಂಡಿದೆ. ಬ್ರಿಟನ್ ವಾಸಿಗಳ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವೂ ಸಹ ಶೇ. 6 ರಷ್ಟು ಹೆಚ್ಚಿದೆ. ಭತ್ತವನ್ನು ಬೆಳೆಯುವ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಒಟ್ಟುಗೂಡುವ ಕೆಮಿಕಲ್ಗಳು ಅನಾರೋಗ್ಯ, ಆಹಾರ ಸಂಬಂಧಿತ ಕ್ಯಾನ್ಸರ್ ಮತ್ತು ಲಿವರ್ ಕ್ಯಾನ್ಸರ್ ಹುಟ್ಟಿಗೆ ಕಾರಣವಾಗುತ್ತಿದೆ. ಮಾತ್ರವಲ್ಲ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆಂದು ಸಂಶೋಧಕರು ತಿಳಿಸಿದ್ದಾರೆ.

ಅಕ್ಕಿಯ ಸೇವೆಯ ಕುರಿತು ಈಗಾಗಲೇ ಅಧ್ಯಯನ ನಡೆದಿದ್ದು, ಇದರಲ್ಲಿನ ಯಾವುದೇ ಲಿಂಕ್ ನ್ನು ದೃಢೀಕರಿಸಲು ಈಗಲೇ ಸಾಧ್ಯವಿಲ್ಲ. ಅನ್ನದಿಂದ ನಿಜಕ್ಕೂ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಜನರು ಸಾಯುತ್ತಿದ್ದಾರೆನ್ನುವ ಕುರಿತು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ.

ಆದರೆ ಹೆಚ್ಚಾಗಿ ಅಕ್ಕಿ ಸೇವೆಯನ್ನು ಮಾಡಬೇಡಿ. ಒಂದೊಮ್ಮೆ ಅನ್ನವನ್ನೇ ತಿನ್ನಬೇಕು ಅಂತಾ ಅಂದುಕೊಂಡ್ರೆ ಬಾಸ್ಮ ತಿಯಂತಹ ಆರ್ಸೆನಿಕ್ ಮಟ್ಟ ಕಡಿಮೆ ಇರುವ ಅಕ್ಕಿ ಪ್ರಭೇದಗಳನ್ನು ಆರಿಸಿಕೊಳ್ಳಿ ಎಂದು ಜನರಿಗೆ ಸಂಶೋಧಕರು ಶಿಫಾರಸು ಮಾಡಿದ್ದಾರೆ.

ಒಟ್ಟಿನಲ್ಲಿ ಬ್ರಿಟನ್ ಸಂಶೋಧಕರು ಅಕ್ಕಿಯ ಮೇಲಿನ ತಮ್ಮ ಸಂಶೋಧನೆಯನ್ನು ಮುಂದುವರಿಸಿದ್ದಾರೆ. ಆರಂಭದಲ್ಲಿ ಅನ್ನದಿಂದಲೇ ಹೃದಯಾಘಾತವಾಗುತ್ತೆ ಅನ್ನೋ ವರದಿ ಇದೀಗ ಬಹುತೇಕ ರಾಷ್ಟ್ರಗಳಿಗೆ ಆತಂಕವನ್ನು ತಂದೊಡ್ಡಿದೆ. ಆದರೆ ಸಂಶೋಧಕರ ಅಂತಿಮ ವರದಿ ಬರುವವರೆಗೂ ಅನ್ನ ಸೇವನೆಯ ಬಗ್ಗೆ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.