Five Planets In One Line: ಮಾರ್ಚ್‌ 28 ರಂದು ನಭೋಮಂಡಲದಲ್ಲಿ ಜರಗುಲಿದೆ ಚಮತ್ಕಾರ! ಒಂದೇ ರೇಖೆಯಲ್ಲಿ ಬರಲಿದೆ 5 ಗ್ರಹಗಳು

ನಮ್ಮ ಬ್ರಹ್ಮಾಂಡ (Universe) ಕೌತುಕಗಳ ಆಗರ. ಅಲ್ಲಿ ನಡೆಯುವ ವಿದ್ಯಮಾನಗಳು ಅಷ್ಟೇ ನೋಡುವವರಿಗೆ ಚಮತ್ಕಾರದಂತೆ ಕಾಣಿಸುತ್ತದೆ. ಸೂರ್ಯನ (Sun) ಸುತ್ತ ತಿರುಗುವ ಗ್ರಹ, ಉಪಗ್ರಹಗಳು (Planets and Satellite) ತಮ್ಮ ನಿರಂತರ ಚಲನೆಯಿಂದ ನಭದಲ್ಲಿ ಹೊಸ ವಿದ್ಯಮಾನಗಳು ಜರಗುವಂತೆ ಮಾಡುತ್ತವೆ. ಇದೇ ಮಾರ್ಚ್‌ 28 ರಂದು ಆಗಸದಲ್ಲಿ ಮತ್ತೊಂದು ಚಮತ್ಕಾರ ನಡಯಲಿದೆಯಂತೆ. ಅದೇನೆಂದರೆ ನಮ್ಮ ಸೌರಮಂಡಲದಲ್ಲಿ ಚಂದ್ರನೂ ಸೇರಿ 5 ಗ್ರಹಗಳು ಒಂದೇ ರೇಖೆಯಲ್ಲಿ ಬರಲಿವೆ (Five Planets In One Line). ನೋಡುಗರಿಗೆ ಅದು ಕಮಾನಿನಂತೆ (Arc) ಗೋಚರಿಸಲಿದೆ ಎಂದು ವಿವಿಧ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. ಇದೊಂದು ಅಪರೂಪದ ಖಗೋಳ ಘಟನೆ ಎಂದು ಹೇಳಿದೆ.

ಫಾಕ್ಸ್‌ ನ್ಯೂಸ್‌ ವರದಿಯ ಪ್ರಕಾರ ಬುಧ, ಶುಕ್ರ, ಮಂಗಳ, ಗುರು ಮತ್ತು ಯುರೇನಸ್‌ ಗ್ರಹಗಳು ಮಾರ್ಚ್‌28 ರ ಸೂರ್ಯಾಸ್ತದ ನಂತರ ಹೀಗೆ ಗೋಚರಿಸಲಿದೆ. ಇಡೀ ಗುಂಪಿನಲ್ಲಿ ಶುಕ್ರವು ಪ್ರಕಾಶಮಾನವಾದ ಗ್ರಹವಾಗಿದೆ. ಸೌರಮಂಡಲದ ದೊಡ್ಡ ಗ್ರಹ ಗುರು, ಬುಧ ಗ್ರಹಕ್ಕಿಂತ ಪ್ರಕಾಶಮಾನವಾಗಿ ಕಾಣಿಸಲಿದೆ. ಗುರು ಮತ್ತು ಬುಧ ಗ್ರಹದ ಮೇಲಿನ ಎಡಭಾಗದಲ್ಲಿ ಶುಕ್ರ ಗ್ರಹವು ಪ್ರಕಾಶಮಾನವಾಗಿರುತ್ತದೆ.

ಶುಕ್ರ ಗ್ರಹವು ಉಳಿದ ಎಲ್ಲಾ ಗ್ರಹಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಬರಿಗಣ್ಣಿಗೆ ಗೋಚರಿಸುತ್ತದೆ. ಯುರೇನಸ್‌ ಅನ್ನು ಯಾವುದೇ ಸಾಧನಗಳಲ್ಲಿದೇ ನೋಡುವುದು ಅತ್ಯಂತ ಕಷ್ಟವಾಗಿದೆ. ಯುರೇನಸ್‌ ಶುಕ್ರನ ಬಳಿ ಕಾಣಿಸಿಕೊಳ್ಳುತ್ತದೆ ಆದರೆ, ಅದು ಬಹಳ ದುರ್ಬಲವಾಗಿದೆ. ಆಕಾಶದಲ್ಲಿ ಮಂಗಳನು ಬಹಳ ಎತ್ತರದಲ್ಲಿ ಗಮನಾರ್ಹವಾದ ಬಣ್ಣದಿಂದ ಕಾಣಿಸಿಕೊಳ್ಳುಲಿದೆ.

ಮಾರ್ಚ್‌ 1 ರಂದು ಒಟ್ಟಿಗೆ ಕಾಣಿಸಿಕೊಂಡ ಶುಕ್ರ ಮತ್ತು ಗುರು ಗ್ರಹಗಳು :
ಫೆಬ್ರವರಿ ತಿಂಗಳಿನುದ್ದಕ್ಕೂ ಗುರು ಮತ್ತು ಶುಕ್ರ, ಚಂದ್ರನೊಂದಿಗೆ ಒಟ್ಟಿಗೆ ಕಾಣಿಸಿಕೊಂಡವು. ಮತ್ತು ಅವು ಪರಸ್ಪರ ಹತ್ತಿರವಾಗುತ್ತದಂತೆ ಕಂಡವು. ಸೌರ ಮಂಡಲದಲ್ಲಿ ಗ್ರಹದ ನಡುವಿನ ಸಂಯೋಗವು ಆಗಾಗ್ಗೆ ಸಂಭಿಸುತ್ತದೆ. ಏಕೆಂದರೆ ಗ್ರಹಗಳು ಸೂರ್ಯನ ಸುತ್ತ ಸರಿಸುಮಾರು ಒಂದೇ ಸಮತಲದಲ್ಲಿ (ಎಕ್ಲಿಪ್ಟಿಕ್ ಪ್ಲೇನ್) ಸುತ್ತುತ್ತವೆ ಮತ್ತು ಹೀಗೆ ನಮ್ಮ ಆಕಾಶದಾದ್ಯಂತ ಇದೇ ರೀತಿಯ ಮಾರ್ಗಗಳನ್ನು ಪತ್ತೆಹಚ್ಚುತ್ತವೆ” ಎಂದು ನಾಸಾ ಹೇಳಿದೆ.

ಹೊಸ ಧೂಮಕೇತುವಿನ ಪತ್ತೆ:
ಖಗೋಳಶಾಸ್ತ್ರಜ್ಞರು ಕಳೆದ ವಾರ ಹೊಸ ಧೂಮಕೇತು C/2023 A3 (Tsuchinshan-ATLAS) ಅನ್ನು ಕಂಡುಹಿಡಿದರು. ಧೂಮಕೇತುವನ್ನು ಖಗೋಳಶಾಸ್ತ್ರಜ್ಞರು ಚೀನಾದಲ್ಲಿನ ಪರ್ಪಲ್ ಮೌಂಟೇನ್ ಅಬ್ಸರ್ವೇಟರಿ ಮತ್ತು ಕ್ಷುದ್ರಗ್ರಹ ಟೆರೆಸ್ಟ್ರಿಕಲ್-ಇಂಪ್ಯಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಮ್, ATLAS ನಲ್ಲಿ ಕಂಡುಹಿಡಿದಿದ್ದಾರೆ. ಇದು ಪ್ರಸ್ತುತ ಭೂಮಿಯಿಂದ ಶತಕೋಟಿ ಕಿಲೋಮೀಟರ್ ದೂರದಲ್ಲಿರುವ ಗುರು ಮತ್ತು ಶನಿಯ ಕಕ್ಷೆಗಳ ನಡುವೆ ಇದೆ.

ಇದನ್ನೂ ಓದಿ : Ugadi 2023 : ಯುಗಾದಿ 2023; ಹಿಂದೂ ವರ್ಷಾರಂಭ; ತಿಥಿ, ಆಚರಣೆ, ಮಹತ್ವ

ಇದನ್ನೂ ಓದಿ : Honda Shine 100: ಹೊಂಡಾ ಶೈನ್‌ 100 ಬೈಕ್‌ನ 5 ವಿಶೇಷತೆಗಳು

(Five Planets In One Line. A cosmic spectacle appear on March 28, 2023)

Comments are closed.