Friendship Day Movies: ಫ್ರೆಂಡ್ಶಿಪ್ ಡೇಗೆ ನಾಸ್ಟಾಲ್ಜಿಕ್ ಅನಿಸುವ ಟಾಪ್ ಮಲಯಾಳಂ ಚಲನಚಿತ್ರಗಳನ್ನ ಮಿಸ್ ಮಾಡ್ದೆ ನೋಡಿ

ಭಾರತದಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ‘ಫ್ರೆಂಡ್ ಶಿಪ್ ಡೇ’ ಎಂದು ಆಚರಿಸಲಾಗುತ್ತದೆ. ಜೀವನದ ಪ್ರತಿ ಕ್ಷಣಗಳಲ್ಲೂ ನಮ್ಮ ಸ್ನೇಹಿತರು ನಮ್ಮ ಜೊತೆ ಆಧಾರಸ್ತಂಭವಾಗಿ ಇದ್ದೇ ಇರುತ್ತಾರೆ. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅಥವಾ ಸಹಾಯ ಪಡೆಯಲು ಯಾರಾದರೂ ನಮಗೆ ಬೇಕಾದಾಗ, ಸ್ನೇಹಿತರು ಸದಾ ಜೊತೆಗೆ ಇದ್ದೇ ಇರುತ್ತಾರೆ. ಸ್ನೇಹದ ಬಂಧವನ್ನು ಆಚರಿಸಲು ನಮಗೆ ನಿರ್ದಿಷ್ಟ ದಿನಾಂಕದ ಅಗತ್ಯವಿಲ್ಲದಿದ್ದರೂ, ಈ ದಿನವು ನಮಗೆ ಸ್ನೇಹದ ಉಡುಗೊರೆಯನ್ನು ನೀಡಿದ್ದಕ್ಕಾಗಿ ಜೀವನಕ್ಕೆ ಧನ್ಯವಾದ ಹೇಳುವ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ(Friendship Day Movies).

ನೀವು ಚಲನಚಿತ್ರ ಪ್ರೇಮಿ ಆಗಿದ್ದರೆ, ಈ ಸುಂದರ ದಿನವನ್ನು ಆಚರಿಸಲು ನಿಮ್ಮ ಪ್ರೀತಿಪಾತ್ರರ ಜೊತೆ ಚಲನಚಿತ್ರವನ್ನು ನೋಡುವುದಕ್ಕಿಂತ ಉತ್ತಮವಾದ ಮಾರ್ಗ ಬೇರೆ ಇಲ್ಲ ಅನ್ನಬಹುದು. ಫ್ರೆಂಡ್‌ಶಿಪ್ ಡೇಗೆ ಮಿಸ್ ಮಾಡದೇ ನೋಡಬೇಕಾದ ಮಲಯಾಳಂ ಚಲನಚಿತ್ರಗಳ ಆಯ್ಕೆ ಇಲ್ಲಿದೆ.

ಪ್ರೇಮಂ (2015)
ಅಲ್ಫೋನ್ಸ್ ಪುತ್ರನ್ ನಿರ್ದೇಶನದ ಚಿತ್ರವು ನಿವೀನ್ ಪೌಲಿ ನಟನೆಯ ಈ ಚಿತ್ರ ಜಾರ್ಜ್ ಜೀವನದ ಸುತ್ತ ಸುತ್ತುತ್ತದೆ. ಚಿತ್ರವು ಹದಿಹರೆಯದಿಂದ ಪ್ರೌಢಾವಸ್ಥೆಯವರೆಗಿನ ಅವನ ಪ್ರಯಾಣವನ್ನು ಅವನ ಸ್ನೇಹಿತರು ಅವನ ಜೀವನದಲ್ಲಿ ಹೇಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ ಎಂಬುದನ್ನು ತೋರಿಸುತ್ತದೆ.


ಸ್ವಪ್ನಕೂಡು (2003)
ನಿರ್ದೇಶಕ ಕಮಲ್ ಅವರ ಸ್ವಪ್ನಕೂಡು ವಿಭಿನ್ನ ವ್ಯಕ್ತಿತ್ವ ಹೊಂದಿರುವ ಮೂವರು ಯುವಕರ ಬಗ್ಗೆ ಕಥೆ ಹೇಳುತ್ತದೆ. ಜೀವನವು ಹೇಗೆ ಪರಸ್ಪರ ಸಂಬಂಧ ಹೊಂದಿದೆ ಮತ್ತು ಅದರಿಂದ ಉದ್ಭವಿಸುವ ಸಂದರ್ಭಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂದು ಚಿತ್ರ ತೋರಿಸುತ್ತದೆ.

ಕ್ಲಾಸ್ ಮೇಟ್ಸ್ (2006)
ಈ ಚಿತ್ರವು ಕಾಲೇಜಿನ ಕೊನೆಯ ವರ್ಷದಲ್ಲಿ ಅದೇ ರಸಾಯನಶಾಸ್ತ್ರ ತರಗತಿಗೆ ಹಾಜರಾಗಿದ್ದ ಸಹಪಾಠಿಗಳ ಗುಂಪಿನ ಜೀವನವನ್ನು ಆಧರಿಸಿದೆ. ಲಾಲ್ ಜೋಸ್ ನಿರ್ದೇಶನವು ಅದರ ಕಥೆಯ ಮೂಲಕ ರಹಸ್ಯ, ಕ್ಷಮೆ ಮತ್ತು ಪ್ರೀತಿಯ ವಿಷಯವನ್ನು ಒಳಗೊಂಡಿದೆ.

ಧೋಸ್ತ್ (2001)
ಈ ಚಿತ್ರವು ಇಬ್ಬರು ಕಾಲೇಜು ಹುಡುಗರ ನಡುವಿನ ಸ್ನೇಹವನ್ನು ಪರಿಶೋಧಿಸುತ್ತದೆ, ಇದರಲ್ಲಿ ಒಬ್ಬರು ಇನ್ನೊಬ್ಬರ ಸಹೋದರಿಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಮತ್ತು ಅದರ ಬಗ್ಗೆ ಅವರು ಏನು ಮಾಡುತ್ತಾರೆ ಎಂಬುದು ಕಥೆಯ ಕಥಾವಸ್ತುವನ್ನು ರೂಪಿಸುತ್ತದೆ. ಈ ಯೋಜನೆಯನ್ನು ನಿರ್ದೇಶಕ ತುಳಸಿದಾಸ್ ಅವರು ನಿರ್ದೇಶಿಸಿದ್ದಾರೆ.

ಆನಂದಂ (2016)
ಈ ಕಥಾವಸ್ತುವು ಏಳು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮೊದಲ ಕಾಲೇಜು ಪ್ರವಾಸವನ್ನು ತೆಗೆದುಕೊಳ್ಳುವಾಗ ಅವರ ಜೀವನ ದಲ್ಲಿ ಏನೆಲ್ಲಾ ಸಂಭವಿಸುತ್ತದೆ ಎನ್ನುದನ್ನು ಈ ಚಿತ್ರ ಹೇಳುತ್ತದೆ.

ಇದನ್ನೂ ಓದಿ: International Friendship Day: ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಡೇ; ಇತಿಹಾಸ ಮತ್ತು ಮಹತ್ವ ಏನು ಗೊತ್ತಾ!

(Friendship Day Movies of Malayalam)

Comments are closed.