Rohit overtakes Afridi in Six Hitting : ಸಿಕ್ಸ್ ಹಿಟ್ಟಿಂಗ್‌ನಲ್ಲಿ ರೋಹಿತ್ ಶರ್ಮಾ ಜಗತ್ತಿಗೆ ನಂ.2 ; ಪಾಕಿಸ್ತಾನದ ಶಾಹೀದ್ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್

ಫ್ಲೋರಿಡಾ : (Rohit overtakes Afridi in Six Hitting) ಟೀಮ್ ಇಂಡಿಯಾ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಕ್ಸರ್ ಬಾರಿಸುವುದರಲ್ಲಿ ಪಂಟರ್. ತಮ್ಮ ಅತ್ಯಾಕರ್ಷಕ ಶೈಲಿಯ ಹೊಡೆತಗಳ ಮೂಲಕ ರೋಹಿತ್ ಶರ್ಮಾ ಸಿಕ್ಸರ್ ಬಾರಿಸುವುದನ್ನು ನೋಡುವುದೇ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವಿದ್ದಂತೆ.

ಭಾರತ ತಂಡದ ಸಿಕ್ಸರ್ ಕಿಂಗ್ ರೋಹಿತ್ ಶರ್ಮಾ ಸಿಕ್ಸರ್ ಹಿಟ್ಟಿಂಗ್”ನಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿಯನ್ನು ಹಿಂದಿಕ್ಕಿ ಜಗತ್ತಿನ ನಂ.2 ಸ್ಥಾನಕ್ಕೇರಿದ್ದಾರೆ (Rohit Sharma overtakes Shahid Afridi to become 2nd highest six hitter in International Cricket).

ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದ ಲಾಡರ್’ಹಿಲ್ ಮೈದಾನದಲ್ಲಿ ಶನಿವಾರ ನಡೆದ 4ನೇ ಟಿ20 ಪಂದ್ಯದಲ್ಲಿ 3 ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಈ ದಾಖಲೆ ಬರೆದಿದ್ದಾರೆ. 4ನೇ ಟಿ20ಯಲ್ಲಿ ಅಬ್ಬರಿಸಿದ ನಾಯಕ ರೋಹಿತ್ 16 ಎಸೆತಗಳಲ್ಲಿ 33 ರನ್ ಸಿಡಿಸಿ ಭಾರತಕ್ಕೆ ಸ್ಫೋಟಕ ಆರಂಭ ತಂದುಕೊಟ್ಟಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಸದ್ಯ ರೋಹಿತ್ ಶರ್ಮಾ 477 ಸಿಕ್ಸರ್”ಗಳನ್ನು ಬಾರಿಸಿದ್ದು, ವಿಂಡೀಸ್ ದೈತ್ಯ ಕ್ರಿಸ್ ಗೇಲ್ ನಂತರದ ಸ್ಥಾನದಲ್ಲಿದ್ದಾರೆ. ಜಮೈಕಾದ ದೈತ್ಯ ದಾಂಡಿಗ ಕ್ರಿಸ್ ಗೇಲ್ ಟೆಸ್ಟ್’ನಲ್ಲಿ 98, ಏಕದಿನದಲ್ಲಿ 331 ಹಾಗೂ ಟಿ20ಯಲ್ಲಿ 124 ಸಿಕ್ಸರ್ಸ್ ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿಶ್ವದಾಖಲೆಯ 553 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ 64, ಏಕದಿನ ಕ್ರಿಕೆಟ್’ನಲ್ಲಿ 250 ಹಾಗೂ ಟಿ20 ಕ್ರಿಕೆಟ್’ನಲ್ಲಿ 163 ಸಿಕ್ಸರ್’ಗಳನ್ನು ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದವರ ಸಾಲಿನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 359 ಸಿಕ್ಸರ್’ಗಳೊಂದಿಗೆ (ಟೆಸ್ಟ್-78, ಏಕದಿನ-229, ಟಿ20-52) 6ನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟಾಪ್-10 ಸಿಕ್ಸ್ ಹಿಟ್ಟರ್ಸ್

  1. ಕ್ರಿಸ್ ಗೇಲ್ (ಐಸಿಸಿ/ವೆಸ್ಟ್ ಇಂಡೀಸ್) : 553
  2. ರೋಹಿತ್ ಶರ್ಮಾ (ಭಾರತ) : 477
  3. ಶಾಹೀದ್ ಅಫ್ರಿದಿ (ಏಷ್ಯಾ/ಐಸಿಸಿ/ಪಾಕಿಸ್ತಾನ) : 476
  4. ಬ್ರೆಂಡನ್ ಮೆಕ್ಕಲಂ (ನ್ಯೂಜಿಲೆಂಡ್) : 398
  5. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) : 379
  6. ಎಂ.ಎಸ್ ಧೋನಿ (ಭಾರತ/ಏಷ್ಯಾ) : 359
  7. ಸನತ್ ಜಯಸೂರ್ಯ (ಶ್ರೀಲಂಕಾ/ಏಷ್ಯಾ) : 352
  8. ಐಯಾನ್ ಮಾರ್ಗನ್ (ಇಂಗ್ಲೆಂಡ್/ಐರ್ಲೆಂಡ್) : 346
  9. ಎಬಿ ಡಿ’ವಿಲಿಯರ್ಸ್ (ಆಫ್ರಿಕಾ/ದಕ್ಷಿಣ ಆಫ್ರಿಕಾ) : 328
  10. ಜೋಸ್ ಬಟ್ಲರ್ (ಇಂಗ್ಲೆಂಡ್) : 275

ಇದನ್ನೂ ಓದಿ : Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

ಇದನ್ನೂ ಓದಿ : Team India for Asia Cup 2022 : ಏಷ್ಯಾ ಕಪ್‌ಗೆ ನಾಳೆ ಟೀಮ್ ಇಂಡಿಯಾ ಪ್ರಕಟ; ರಾಹುಲ್, ಕೊಹ್ಲಿ ಕಂಬ್ಯಾಕ್, ಹೀಗಿರಲಿದೆ ಭಾರತದ ಸಂಭಾವ್ಯ ತಂಡ

Rohit overtakes Afridi in Six Hitting, Shahid Afridi to become 2nd highest six hitter in International Cricket

Comments are closed.