sherwani : ಮದುವೆ ಅಂದಮೇಲೆ ಅಲ್ಲಿ ವಧು – ವರರು ಸಖತ್ ಗ್ರ್ಯಾಂಡ್ ಆಗಿ ರೆಡಿ ಆಗ್ತಾರೆ. ವಧು ಸೀರೆಯನ್ನುಟ್ಟರೆ ವರನಾದವನು ಪಂಚೆ- ಶರ್ಟ್ ಇಲ್ಲವೇ ಶೆರವಾನಿ ಧರಿಸುವುದು ಸರ್ವೇ ಸಾಮಾನ್ಯ. ಆದರೆ ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ವರನು ತನ್ನ ವಿವಾಹದಲ್ಲಿ ಶೆರ್ವಾನಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕಲ್ಯಾಣ ಮಂಟಪದಲ್ಲಿ ಹಿಂಸಾಚಾರವೇ ನಡೆದು ಹೋಗಿದೆ. ವಧು ಹಾಗೂ ವರನ ಕಡೆಯವರು ಪರಸ್ಪರ ಕಲ್ಲು ತೂರಿಕೊಂಡು ಘರ್ಷಣೆ ಮಾಡಿಕೊಂಡಿದ್ದು ಈ ಗಲಾಟೆ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬುಡಕಟ್ಟು ಸಮುದಾಯಕ್ಕೆ ಸೇರಿದ ವರನು ತಮ್ಮ ಸಂಪ್ರದಾಯದಂತೆ ಮದುವೆ ಸಂದರ್ಭದಲ್ಲಿ ಧೋತಿ ಹಾಗೂ ಕುರ್ತಾ ಧರಿಸಬೇಕು ಎಂಬುವುದು ವಧು ಸಂಬಂಧಿಕರ ವಾದವಾಗಿತ್ತು. ಆದರೆ ವರ ಶೆರ್ವಾನಿ ಬದಲಾಯಿಸಲು ಬಿಲ್ಕುಲ್ ತಯಾರಿರಲಿಲ್ಲ. ಹೀಗಾಗಿ ಎರಡೂ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಮಂಗಬೈದ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಧಾರ್ ನಗರದ ನಿವಾಸಿಯಾಗಿರುವ ವರ ಸುಂದರ್ಲಾಲ್ ಅವರು ಶೇರ್ವಾನಿ ಧರಿಸಿದ್ದರು, ಆದರೆ ವಧುವಿನ ಸಂಬಂಧಿಕರು ಧೋತಿ-ಕುರ್ತಾದಲ್ಲಿ ವಿವಾಹವನ್ನು ನಡೆಸಬೇಕೆಂದು ಒತ್ತಾಯಿಸಿದರು ಎಂದು ಧಮನೋಡ್ ಪೊಲೀಸ್ ಠಾಣೆ ಪ್ರಭಾರಿ ಸುಶೀಲ್ ಯದುವಂಶಿ ಹೇಳಿದ್ದಾರೆ.ಇದು ಎರಡು ಕಡೆಯ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು ಎಂದು ಅವರು ಹೇಳಿದರು.
ಎರಡೂ ಕಡೆಯ ಕುಟುಂಬ ಸದಸ್ಯರು ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು ಭಾರತೀಯ ದಂಡ ಸಂಹಿತೆ 294( ಅಶ್ಲೀಲ ಕಾಯ್ದೆ), 323 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆಯ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ವರ ಸುಂದರ್ ಲಾಲ್ ವಧುವಿನ ಕುಟುಂಬಸ್ಥರ ಜೊತೆ ಯಾವುದೇ ವಿವಾದವಿರಲಿಲ್ಲ. ಆದರೆ ಆಕೆಯ ಕೆಲವು ಸಂಬಂಧಿಕರು ನಮ್ಮ ಜನರ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದರು.
ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್
ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್ ಹೊರಟ್ಟಿ
Groom wears ‘sherwani’ instead of ‘dhoti-kurta’ at wedding, leads to violent clash in MP