- ವಂದನಾ ಕೊಮ್ಮುಂಜೆ
ಯಾರಾದ್ರೂ ರೋಡ್ ನಲ್ಲಿ ಬಿದ್ರೆ ಅವರನ್ನು ನೋಡದೇ ಹೋಗುವ ಸಾಕಷ್ಟು ಮಂದಿ ಇದ್ದಾರೆ. ಮನುಷ್ಯರಲ್ಲಿ ಮಾನವೀಯತೆ ಅನ್ನೋದೇ ಇಲ್ಲ ಅನ್ನುವ ಮಟ್ಟಿಗಿನ ಹಲವು ಘಟನೆಗಳು ನಮ್ಮ ಮುಂದೆ ದಿನಾಲೂ ನಡೆಯುತ್ತಾವೆ.
ಆದ್ರೆ ಪ್ರಾಣಿಗಳು ಮನುಷ್ಯರಿಗಿಂತ ಉತ್ತಮ ಅನ್ನೋದನ್ನು ಹಲವಾರು ಸಾರಿ ಅವು ತೋರಿಸಿಕೊಟ್ಟಿವೆ ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಇಲ್ಲಿ ಗೊರಿಲ್ಲಾ ಒಂದು ಏಟಾದ ಹಕ್ಕಿಗೆ ಸಹಾಯ ಮಾಡ್ತಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ ಹೌದು ಆಸ್ಟ್ರೇಲಿಯಾದ ಸೌತ್ ವೇಲ್ ನ ಝೂ ಒಂದರಲ್ಲಿ ಹಕ್ಕಿಯೊಂದು ಏಟಾಗಿ ಗೊರಿಲ್ಲ ಇದ್ದ ಪ್ರದೇಶಕ್ಕೆ ಬಿದ್ದಿದೆ. ಅದನ್ನು ಗಮನಿಸಿದ ಗೊರಿಲ್ಲ ಕೂಡಲೇ ಸಹಾಯಕ್ಕೆ ಧಾವಿಸಿದೆ.
ಮೊದಲು ಹಕ್ಕಿ ಬದುಕಿದೆಯಾ ಅಂತ ಹತ್ತಿರಕ್ಕೆ ತೆರಳಿ ಗಮನಿಸಿದ ಗೊರಿಲ್ಲ, ನಂತರ ಹಕ್ಕಿ ಬೆನ್ನನ್ನು ಸವರಿದೆ. ಆಗಲೂ ಹಾರದಿದ್ದಾಗ ರೆಕ್ಕೆಯನ್ನು ಬಿಡಿಸಿ ಹಾರಲು ಸಹಾಯ ಮಾಡಿದೆ. ಆದ್ರೆ ಹಕ್ಕಿಗೆ ಹೆಚ್ಚಿನ ಗಾಯವಾದ್ರಿಂದ ಹಾರಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಗೊರಿಲ್ಲ ಅಲ್ಲಿಂದ ತೆರಳಿದೆ. ಈ ವಿಡಿಯೋ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ