ಈ ನಗರಕ್ಕೆ ಇನ್ನು ಸೂರ್ಯರಶ್ಮಿ ತಾಗೋದು 2021ಕ್ಕೆ…!!

ಉತ್ತರ ಅಮೇರಿಕ: ಪ್ರತಿವರ್ಷದಂತೆ ಈ ವರ್ಷವೂ ಬಾನಿನ ಕೌತುಕಕ್ಕೆ ಉತ್ತರ ಅಮೇರಿಕಾ, ಅಲಾಸ್ಕಾದ ಉಟಿಯಾಸ್ವಿಕ್ ಸಾಕ್ಷಿಯಾಗಿದೆ.

ಈ ವರ್ಷದ ಕೊನೆಯ ಸೂರ್ಯಾಸ್ತ ಇಲ್ಲಿ ಬುಧವಾರ ಮಧ್ಯಾಹ್ನವೇ ಘಟಿಸಿದ್ದು ಇನ್ನು ಇಲ್ಲಿನ ಜನತೆ 2021 ರ ಜನವರಿ 22 ರಂದು ಸೂರ್ಯೋದಯವನ್ನು ಕಾಣುತ್ತಾರೆ. ಪ್ರತಿವರ್ಷವೂ ನಡೆಯುವ ಈ ಕೌತುಕವನ್ನು ಪೋಲಾರ್ ಲೈಟ್ ಎಂದು ಕರೆಯಲಾಗುತ್ತದೆ. ಇನ್ನು ಎರಡು ತಿಂಗಳುಗಳ ಕಾಲ ಇಲ್ಲಿ ಕೇವಲ ಮಂದ ಬೆಳಕು ಇರುತ್ತದೆ.

ಆದರೆ ಬಾನಿಂದ ಸೂರ್ಯೋದಯವಾಗುವುದೇ ಇಲ್ಲ. ಸೂರ್ಯೋದಯಕ್ಕೆ ಮುನ್ನ ನಾವು ನೋಡುವ ಮಂದವಾದ ಬೆಳಕು ಇಲ್ಲಿ ಎರಡು ತಿಂಗಳುಗಳ ಕಾಲ ಇರಲಿದ್ದು ಇದನ್ನು ಸಿವಿಲ್ ಟ್ವಿಲೈಟ್ ಎಂದು ಕರೆಯುತ್ತಾರೆ.

ಇದು ಇಲ್ಲಿನ ಜನರಿಗೆ ಸಹಜವಾದ ಬೆಳವಣಿಗೆಯಾಗಿದ್ದು ಪ್ರತಿವರ್ಷವೂ ಇಂತಹದೊಂದು ಪ್ರಕೃತಿ ವಿಸ್ಮಯಕ್ಕೆ ಜನ ಸಾಕ್ಷಿಯಾಗುತ್ತಾರೆ.
ಅಲಸ್ಕಾದ ಉಟ್ವಿಯಾಸ್ವಿಕ್ ನಲ್ಲಿ ನಡೆಯುವ ಈ ವಿದ್ಯಮಾನವನ್ನು ಫೇರ್ ಬ್ಯಾಂಕ್ಸ್ ನಲ್ಲಿನ ರಾಷ್ಟ್ರೀಯ ಹವಾಮಾನ ಸೇವೆ ಖಚಿತಪಡಿಸಿದೆ.

ಇನ್ನು ಈ ವರ್ಷದ ಕೊನೆಯ ಸೂರ್ಯಾಸ್ತದ ಪೋಟೋ ಹಾಗೂ ವಿಡಿಯೋಗಳು ಇನ್ ಸ್ಟಾಗ್ರಾಂ ಸೇರಿದಂತೆ ಹಲವೆಡೆ ವೈರಲ್ ಆಗಿದ್ದು ಜನರು ಈ ಅಪರೂಪದ ಸಂಗತಿಯನ್ನು ಕಣ್ತುಂಬಿಕೊಳ್ತಿದ್ದಾರೆ.

Comments are closed.