Horse Insurance : ಕುದುರೆ ಗಳು ರೋಡಿಗಿಳಿಯೋಕು ಬೇಕು ವಿಮೆ – ಇನ್ಶುರೆನ್ಸ್‌ ಕಡ್ಡಾಯ ಎಂದ ದೆಹಲಿ ನಗರ ಪಾಲಿಕೆ

ಬೆಂಗಳೂರು : ಕಾರು, ಜೀಪ್‌ ಅಥವಾ ಯಾವುದೇ  ವಾಹನ ಖರೀದಿ ಮಾಡುವಾಗ ನಾವು ನಮ್ಮ ಸುರಕ್ಷತೆಗೆ  ವಿಮೆಯನ್ನು(Horse Insurance ) ಮಾಡಿಯೇ ಮಾಡುತ್ತೇವೆ. ಅದು ಕಡ್ಡಾಯ ಕೂಡಾ. ಇನ್ನು ಮುಂದೆ ಕುದುರೆ ಮೇಲೆ  ಕುಳಿತುಕೊಳ್ಳೋಕು  ಇನ್ಶುರೆನ್ಸ್‌ ( third party insurance)  ಮಾಡಬೇಕು . ಹೌದು ಹೀಗಂತ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

ಈಗ ವಿಮೆ ಇಲ್ಲದೆ ಯಾವುದೇ ವಾಹನವನ್ನು ರೋಡಿಗೆ ಇಳಿಸೋಕೆ ಸಾಧ್ಯವಿಲ್ಲ. ಅದರಲ್ಲೂ ಈಗ  ಮೂರನೇ ವ್ಯಕ್ತಿಯ ವಿಮೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.  ಇದರಿಂದ ಎರಡೂ ಕಡೆಯ ಸವಾರರಿಗೆ ಹಣಕಾಸಿನ ಭದ್ರತೆ ದೊರೆಯುವಂತೆ ಮಾಡಿದೆ. ಆದ್ರೆ ಇದೀಗ ದೆಹಲಿ ನಗರ ಪಾಲಿಕೆ ಕುದುರೆ  ಹಾಗೂ ಕುದುರೆ ಗಾಡಿಗಳಿಗೆ ಮೂರನೇ ವ್ಯಕಿ ವಿಮೆ ( third party insurance) ಕಡ್ಡಾಯ ಮಾಡಿ ಆದೇಶ ಮಾಡಿದೆ. ಈ ಕುರಿತಂತೆ  ಎಸ್‌ ಡಿಎಮ್‌ ಸಿ ಯ ಕಮಿಟಿ ಕೂಡಾ ವರದಿ ನೀಡಿದ್ದು, ಈ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ

ಇದಕ್ಕೆ ಕಾರಣ ನಾಲ್ಕು ವರ್ಷ ದ ಹಿಂದೆ ರಸ್ತೆ ದಾಟುವಾಗ ವ್ಯಕಿಯೊಬ್ಬನಿಗೆ  ರೇಸ್‌ ಗೆ ಬಳಸುವ ಕುದುರೆಗಳು ಡಿಕ್ಕಿಯಾಗಿತ್ತು. ಈ ವೇಳೆ ವ್ಯಕ್ತಿ ಸ್ಥಳದಲ್ಲಿ ಪ್ರಾಣ ಕಳೆದುಕೊಂಡಿದ್ದ. ಇದರಲ್ಲಿ ಯಾರು  ವೆಚ್ಚ ಈ ಭರಿಸಬೇಕು  ಅನ್ನುವ ಕುರಿತಂತೆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು.  ಈ ಹಿನ್ನೆಲೆಯಲ್ಲಿ ದೆಹಲಿಯ ನಗರಪಾಲಿಕೆ ಈ ನಿರ್ಧಾರವನ್ನು ಕೈಗೊಂಡಿದೆ.  

ಈ ಆದೇಶ  ಇದು ಕೇವಲ ಕುದುರೆ ಗಾಡಿಗಳಿಗೆ ಮಾತ್ರ ಅನ್ವಯವಾಗಲ್ಲ. ಬದಲಾಗಿ ಮದುವೆಗಳಿಗೆ ಬಳಸುವ  ಕುದುರೆ, ರೇಸ್‌ ನಲ್ಲಿ ಬಳಕೆಯಾಗುವ ಕುದುರೆಗೂ  ಅನ್ವಯವಾಗಲಿದೆ. ಪಾಲಿಕೆಯ ಪ್ರಕಾರ ಹೀಗೆ ವಿಮೆ ಮಾಡುವುದರಿಂದ  ಅವಘಡದ ಸಮಯದಲ್ಲಿ ಎರಡೂ ಕಡೆಯಲ್ಲಿ ಆಗುವ ನಷ್ಟವನ್ನು ತುಂಬುವಲ್ಲಿ ಇದು ಸಹಾಯವಾಗುತ್ತೆ ಅನ್ನೋದು. ಒಟ್ಟಾರೆ ಕೇವಲ ಕಾರು ಬೈಕ್‌ ನಂತಹ ವಾಹನಗಳಲ್ಲಿ ಬಳಕೆಯಾಗುತ್ತಿದ್ದ ಈ ವಿಮೆ ಕುದುರೆಗಳಿಗೂ ರಕ್ಷಣೆ ನೀಡುತಂತೆ.  ಇನ್ನು ಇದು ಎಲ್ಲಾ ರಾಜ್ಯದಲ್ಲಿ ಜಾರಿಗೆ ಬಂದ್ರೆ  ಮದುವೆಯಲ್ಲಿ ಕುದುರೆ ಹತ್ತೋ ಕ ನಸು ಕಾಣೋರು  ಇನ್ಶರೆನ್ಸ್‌ ಆಗಿದೆಯಾಂತ ಚೆಕ್‌ ಮಾಡೋದು ಅನಿವಾರ್ಯ ಆಗುತ್ತೆ.

ಇದನ್ನೂ ಓದಿ : ಗ್ರಾಹಕರೇ ಗಮನಿಸಿ ; ಮಾರ್ಚ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 13 ರಜಾದಿನ

ಇದನ್ನೂ ಓದಿ : ಲೈಫ್ ಇನ್ಶೂರೆನ್ಸ್ ರೈಡರ್‌ಗಳು ಎಂದರೇನು? ಅವುಗಳ ಪ್ರಯೋಜನಗಳೇನು ?

(horse insurance must in Delhi)

Comments are closed.