ಬಜೆಟ್ ಗೂ ಮುನ್ನವೇ ಹೊರಬಿತ್ತು ಸಿಹಿಸುದ್ದಿ: ಮದ್ಯ ಪ್ರಿಯರಿಗೆ ರಿಲೀಫ್ ನೀಡಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ 2022-23 ನೇ ಸಾಲಿನ ಬಜೆಟ್ ಗೆ ಸಿದ್ಧತೆ ನಡೆದಿದ್ದು, ಈಗಾಗಲೇ ಬಸವರಾಜ್ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದಾರೆ. ಈ ಮಧ್ಯೆ ಬಜೆಟ್ ವೇಳೆ ಯಾವೆಲ್ಲ ವಸ್ತುಗಳ ದರ ಏರಿಕೆಯಾಗಲಿದೆ ಅನ್ನೋ ಚಿಂತೆಯಲ್ಲಿದ್ದಾರೆ ಜನರು. ಆದರೆ ಮದ್ಯ ಪ್ರಿಯರಿಗೆ (relief to liquor lovers) ಮಾತ್ರ ಬಜೆಟ್ ಸಿಹಿಯಾಗೋ ಸಾಧ್ಯತೆಗಳಿದ್ದು ಮದ್ಯದ ದರ ಏರಿಕೆ ಮಾಡೋದು ಡೌಟ್ ಎನ್ನಲಾಗಿದೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಸಿದ್ಧತೆಯಲ್ಲಿದ್ದಾರೆ. ಹೀಗಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬೊಮ್ಮಾಯಿ ಅಬಕಾರಿ ಸಂಘಗಳ ಪದಾಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು. ಸಚಿವ.ಕೆ.ಗೋಪಾಲಯ್ಯ ಸೇರಿದಂತೆ ಹಲವು ಆಧಿಕಾರಿಗಳು ಸಿಎಂ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ತಮ್ಮ ಈ ಬಜೆಟ್ ನಲ್ಲಿ ಅಬಕಾರಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಕಲಿ‌ಮದ್ಯ ಮಾರಾಟ ತಡೆಗೆ ಸರ್ಕಾರ ಉಗ್ರ ಕ್ರಮಕೈಗೊಂಡಿದೆ ಎಂದಿದ್ದಾರೆ. ಅಲ್ಲದೇ ಈ ಜಾಲದಲ್ಲಿ ಅಧಿಕಾರಿಗಳು ಪಾಲ್ಗೊಂಡಿರೋದು ಸಾಬೀತಾದರೇ ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಜೆಟ್ ನಲ್ಲಿ ಅಬಕಾರಿ ಇಲಾಖೆಯ ಬೆಳವಣಿಗೆ ಆಧರಿಸಿ ಹೊಸ ಸ್ವರೂಪ ನೀಡಲು ಚಿಂತನೆ ನಡೆದಿದೆ ಎಂದಿದ್ದಾರೆ.

ಸಿಎಂ ಸಭೆ ಬಳಿಕ ಮಾತನಾಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸಿಎಂ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆದಿದೆ. ಆದರೆ ಈ ಸಭೆಯಲ್ಲಿ ಮದ್ಯದ ದರ ಏರಿಕೆ ಪ್ರಸ್ತಾವನೆಯಿಲ್ಲ ಎಂದರು. ಇದರಿಂದ ಕರೋನಾದಿಂದ ಕಂಗೆಟ್ಟ ಮದ್ಯ ಪ್ರಿಯರಿಗೆ ರಿಲ್ಯಾಕ್ಸ್ ಆದಂತಾಗಿದ್ದು, ದರ ಏರಿಕೆಯಾದರೇ ಗ್ರಾಹಕರ ಕೊರತೆ ಎದುರಿಸುವಂತಾಗುತ್ತದೆ. ಆದರೆ ಮದ್ಯದ ದರ ಏರಿಕೆಯಾಗದೇ ಇದ್ದರೇ ಕನಿಷ್ಟ ಗ್ರಾಹಕರು ಬಾರ್ ರೆಸ್ಟೋರೆಂಟ್ ಗಳತ್ತ ಮುಖಮಾಡುತ್ತಾರೆ ಎಂಬುದು ಮದ್ಯಮಾರಾಟಗಾರರ ಲೆಕ್ಕಾಚಾರ.

ಅಬಕಾರಿ ಇಲಾಖೆಯ ಹಣಕಾಸು ಸ್ಥಿತಿ ಉತ್ತಮವಾಗಿರೋದರಿಂದ ಹಾಗೂ ಸದ್ಯದ ಜನರ ಪರಿಸ್ಥಿತಿಯನ್ನು ಗಮನಿಸಿ ಅಬಕಾರಿ ಇಲಾಖೆಯಲ್ಲಿ ಯಾವುದೇ ದರ ಏರಿಕೆ ಮಾಡದೇ ಇರಲು ಸಿಎಂ ನಿರ್ಧರಿಸಿದ್ದಾರಂತೆ. ಈ ಸುದ್ದಿ ಯಿಂದ ಮದ್ಯಪ್ರಿಯರು ಸಖತ್ ಖುಷಿಯಾಗಿದ್ದಾರೆ.

ಇದನ್ನೂ ಓದಿ : Harsha Family : ಮಗನನ್ನು ಕಳೆದುಕೊಂಡ ನೋವಲ್ಲೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ ಹರ್ಷ ಕುಟುಂಬ

ಇದನ್ನೂ ಓದಿ : Horse Insurance : ಕುದುರೆ ಗಳು ರೋಡಿಗಿಳಿಯೋಕು ಬೇಕು ವಿಮೆ

( Before the budget went out, the Karnataka government gave relief to liquor lovers)

Comments are closed.