black fungus patient’s nose : ಮಹಿಳೆಯ ಮೂಗಿನಿಂದ 150 ಹುಳಗಳನ್ನು ಹೊರತೆಗೆದ ವೈದ್ಯರ ತಂಡ

ಹೈದರಾಬಾದ್​ : black fungus patient’s nose : ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಬಳಿಕ ಮ್ಯೂಕಾರ್ಮೈಕೋಸಿಸ್​​ನಿಂದ ಬಳಲುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗೆ ಒಳಪಡಿಸಿದ ಹೈದರಾಬಾದ್​ ಆಸ್ಪತ್ರೆಯ ವೈದ್ಯರು ಆಕೆಯ ಮೂಗಿನಿಂದ ಬರೋಬ್ಬರಿ 150 ಲಾರ್ವಾ ಜಾತಿಗೆ ಸೇರಿದ ಹುಳುಗಳನ್ನು ಹೊರತೆಗೆದಿದ್ದಾರೆ. ಸೆಂಚುರಿ ಆಸ್ಪತ್ರೆಯ ವೈದ್ಯರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಿವಾಸಿಯಾಗಿರುವ 50 ವರ್ಷದ ಮಹಿಳಾ ರೋಗಿಯನ್ನು ಮೂಗಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಸ್ಕಲ್​ ಬೇಸ್​ ಸರ್ಜನ್​ ಡಾ. ಜಾನಕಿರಾಮ್​ ನೇತೃತ್ವದ ವೈದ್ಯರ ತಂಡವು ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದೆ.


ಸುಮಾರು ಆರು ತಿಂಗಳ ಹಿಂದೆ ಈ ಮಹಿಳೆಯು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇದಾದ ಬಳಿಕ ಅವರಿಗೆ ಮ್ಯೂಕಾರ್ಮೈಕೋಸಿಸ್ ಆರಂಭಗೊಂಡಿತ್ತು. ಇದನ್ನು ಕಪ್ಪು ಶಿಲೀಂಧ್ರ ಎಂದು ಕೂಡ ಕರೆಯುತ್ತಾರೆ. ಈ ಸೋಂಕು ಮಹಿಳೆಯ ಮೆದುಳಿಗೂ ಹರಡಿದ ಹಿನ್ನೆಲೆಯಲ್ಲಿ ಅವರ ಬಲಗಣ್ಣನ್ನು ತೆಗೆಯುವುದು ಅನಿವಾರ್ಯವಾಗಿತ್ತು. ಮೊದಲೇ ಮಧುಮೇಹದಿಂದ ಬಳಲುತ್ತಿದ್ದ ಮಹಿಳೆಯ ಮೂಗಿನಲ್ಲಿ ಹುಳಗಳು ಇರೋದನ್ನು ವೈದ್ಯರ ಗಮನಿಸಿದ್ದಾರೆ. ಹೀಗಾಗಿ ಸೆಂಚುರಿ ಆಸ್ಪತ್ರೆ ವೈದ್ಯರು ಮೂಗಿನ ಶಸ್ತ್ರಚಿಕಿತ್ಸೆಗೆ ಮುಂದಾದರು.


ರೋಗಿಯನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಮೆದುಳಿನ ಕೆಳಭಾಗದಲ್ಲಿ ಹುಳುಗಳು ಎಂಬ ವಿಚಾರ ತಿಳಿದು ಬಂತು. ಅವರಿಗೆ ಅಧಿಕ ಸಕ್ಕರೆ ಮಟ್ಟ ಹಾಗೂ ಮೂತ್ರಪಿಂಡಗಳು ದುರ್ಬಲಗೊಂಡಿವೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದೆವು. ಒಂದೇ ಬಾರಿಗೆ ನಾವು ಎಲ್ಲಾ ಹುಳಗಳನ್ನು ತೆಗೆದು ಸ್ವಚ್ಛಗೊಳಿಸಿದ್ದೇವೆ ಎಂದು ಡಾ.ಜಾನಕಿರಾಮ್​ ಹೇಳಿದ್ದಾರೆ.


ಚಿಕಿತ್ಸೆಯ ಸಂದರ್ಭದಲ್ಲಿ ಮೆದುಳಿಗೆ ಹತ್ತಿರವಿರುವ ಮುಖದ ಮೂಳೆಗಳು ಸಂಪೂರ್ಣ ಸೋಂಕಿಗೆ ಒಳಗಾಗಿವೆ ಎಂಬ ವಿಚಾರ ನಮಗೆ ತಿಳಿಯಿತು. ಹುಳಗಳು ರೋಗಿಯ ಮೂಗಿನಲ್ಲಿ ಮೊಟ್ಟೆಗಳನ್ನು ಇಟ್ಟಿದ್ದವು. ಅವುಗಳು ಮೊಟ್ಟೆಯೊಡೆದು ಲಾರ್ವಾಗಳಾಗಿವೆ. ಇದನ್ನು ಮ್ಯಾಗೋಟ್​ ಎಂದೂ ಕರೆಯುತ್ತಾರೆ. ಇವು ಮೆದುಳನ್ನು ಪ್ರವೇಶಿಸಿ ಮೆನಿಂಜೈಟಿಸ್​ ಉಂಟು ಮಾಡುತ್ತವೆ ಎಂದು ವೈದ್ಯರು ವಿವರಿಸಿದ್ದಾರೆ.

ಇದನ್ನು ಓದಿ : Savarkar book : ಗಣೇಶೋತ್ಸವಕ್ಕೆ ಸಾವರ್ಕರ್ ಮೆರುಗು: ಸಾವಿರ ಸಾವಿರ ಸಂಖ್ಯೆಯಲ್ಲಿ ಸೇಲ್ ಆಗ್ತಿದೆ ಸಾವರ್ಕರ್ ಬುಕ್

ಇದನ್ನೂ ಓದಿ : Siddaramaiah is angry against the BJP : ಬೊಮ್ಮಾಯಿ ಆರ್​ಎಸ್​ಎಸ್​ ಕೈಗೊಂಬೆ, ಅಸಮರ್ಥ ಸಿಎಂ : ಸಿದ್ದರಾಮಯ್ಯ ಕಿಡಿ

Hyderabad doctors remove 150 maggots from black fungus patient’s nose

Comments are closed.