ಉತ್ತರ ಪ್ರದೇಶ : ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಕ್ಕೆ ಮದುವೆ ಮುರಿದು ಬೀಳುವುದು ಸಾಮಾನ್ಯ ವಾಗುತ್ತಿದೆ. ಆದ್ರೆ ಅಗ್ನಿಸಾಕ್ಷಿಯಾಗಿ ಸಪ್ತಪದಿಯ ಆರನೇ ಹೆಜ್ಜೆ ಇಡುವ ವೇಳೆಯಲ್ಲಿ ಮದುಮಗಳು ತನ್ನ ಕೈಹಿಡಿಯಬೇಕಾಗಿದ್ದ ವರನನ್ನೇ ತಿರಸ್ಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜಾನ್ಪುರ ಜಿಲ್ಲೆಯ ಕುಲಾಪಾದ್ ತಾಲ್ಲೂಕಿನ ಬಾಮಹೋ ಗ್ರಾಮದಲ್ಲಿ ಎರಡೂ ಕಡೆಯವರು ಗಂಡು ಹೆಣ್ಣಿನ ಒಪ್ಪಿಗೆಯನ್ನು ಪಡೆದು ಮದುವೆ ನಿಶ್ಚಯ ಮಾಡಿದ್ದರು. ಮದುವೆಯ ಸಿದ್ದತೆಗಳು ಸರಿಯಾಗಿಯೇ ನಡೆದಿತ್ತು. ಆದರೆ ಅಲ್ಲಿಯ ವರೆಗೆ ಖುಷಿ ಖುಷಿಯಾಗಿಯೇ ಇದ್ದ ಮದುಮಗಳಿಗೆ ಅದೇನಾಯಿತೋ ಗೊತ್ತಿಲ್ಲ. ವರನ ಕೈಗೆ ತನ್ನ ಕೈಯನ್ನಿಟ್ಟು 5 ಹೆಜ್ಜೆ ಸಪ್ತಪದಿ ತುಳಿದಿದ್ದ ವಧು ಆರನೇ ಹೆಜ್ಜೆಯನ್ನು ಇಡುವಾಗಲೇ ಮದುವೆ ಬೇಡ ಎಂದಿದ್ದಾಳೆ.

ವರನಿಗೆ ಅರೆಕ್ಷಣ ಶಾಕ್ ಆಗಿತ್ತು. ವಧು ಹಾಗೂ ವರನ ಸಂಬಂಧಿಕರು ಆಕೆಯ ಮನವೊಲಿಸಲು ಯತ್ನಿಸಿ ದ್ದಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಆಕೆ ಕೊನೆಗೂ ತನ್ನ ನಿರ್ಧಾರ ಬದಲಿಸಲಿಲ್ಲ. ಊರವರ ನ್ನೆಲ್ಲಾ ಸೇರಿಸಿ ಪಂಚಾಯಿತಿಯನ್ನೂ ಮಾಡಿದ್ದಾರೆ. ಏನೇ ಮಾಡಿದ್ರೂ ವಧು ಸಪ್ತಪದಿ ತುಳಿಯಲು ಮನಸು ಮಾಡಲೇ ಇಲ್ಲ. ಕೊನೆಗೆ ಮದುವೆಯನ್ನೇ ರದ್ದು ಪಡಿಸಿದ್ರು.