ನಮ್ಮ ಸೌರಮಂಡಲದ (Solar System) ಅತಿ ದೊಡ್ಡ ಗೃಹ ಗುರು (Jupiter). ಚಂದ್ರ ಮತ್ತು ಶುಕ್ರ (Moon And Venus) ಗ್ರಹದ ನಂತರ ಸಾಮಾನ್ಯವಾಗಿ ರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾಗಿ ಕಾಣಿಸುವ ಗ್ರಹವಾಗಿದೆ (Palnet). ಹೆಚ್ಚಾಗಿ ಹೈಡ್ರೋಜನ್ ಮತ್ತು ಹೀಲಿಯಂನಿಂದಲೇ ಮಾಡಲ್ಪಟ್ಟಿರುವ ಇದನ್ನು ಅನಿಲ ದೈತ್ಯ ಎಂದು ಕರೆಯುತ್ತಾರೆ. ಸೋಮವಾರ, ಸೆಪ್ಟೆಂಬರ್ 26 ರಂದು ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರು, ಭೂಮಿಗೆ 367 ಮಿಲಿಯನ್ ಮೈಲುಗಳಷ್ಟು ಸಮೀಪ ಬರಲಿದೆ. ಈ ವಿದ್ಯಮಾನವನ್ನು ಸೋಮವಾರ ಸೂರ್ಯನು ಪಶ್ಚಿಮದಲ್ಲಿ ಅಸ್ತಂಗತವಾದಾಗ, ಗುರು ಗ್ರಹವು ಪೂರ್ವದಲ್ಲಿ ಉದಯಿಸುತ್ತಾನೆ. ಇದರಿಂದ ಗುರು ಗ್ರಹವು ಆಕಾಶದಲ್ಲಿ ಪ್ರಕಾಶಮಾನವಾಗಿ ಮತ್ತು ದೊಡ್ಡದಾಗಿ ಕಾಣಿಸುವಂತೆ ಮಾಡುತ್ತದೆ. ಇಂದು ರಾತ್ರಿ ಆಗಸದಲ್ಲಿ ನಡೆಯುವ ಈ ವಿದ್ಯಮಾನವನ್ನು ಉತ್ತಮವಾಗಿ ವೀಕ್ಷಿಸಬಹುದು ಎಂದು ನಾಸಾ ಹೇಳಿದೆ. ಇಂದಿನ ನಂತರವೂ ಮುಂದಿನ ಕೆಲವು ವಾರಗಳವರೆಗೆ ಗ್ರಹವು ಸ್ವಲ್ಪ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುವುದು ಎಂದೂ ಹೇಳಿದೆ.
ಗುರು ಗ್ರಹವು ಭೂಮಿಯಿಂದ ಸರಿಸುಮಾರು 965 ಮಿಲಿಯನ್ ಕಿಮೀ. ದೂರದಲ್ಲಿದೆ. ಪ್ರತಿ 13 ತಿಂಗಳಿಗೊಮ್ಮೆ ಗುರು ಗ್ರಹವು , ಭೂಮಿಯ ಸಮೀಪ ಬಂದರೂ, ಈ ಬಾರಿ ಇನ್ನೂ ಹತ್ತಿರ ಬರುವ ಕಾರಣ ಭಿನ್ನವಾಗಿರುತ್ತದೆ. ಇದರಿಂದ ಪ್ರಕಾಶಮಾನವಾಗಿಯೂ ಮತ್ತು ಮೊದಲಿನಗಿಂತಲೂ ದೊಡ್ಡದಾಗಿ ಕಾಣಿಸುತ್ತದೆ.
Stargazers: Jupiter will make its closest approach to Earth in 59 years! Weather-permitting, expect excellent views on Sept. 26. A good pair of binoculars should be enough to catch some details; you’ll need a large telescope to see the Great Red Spot. https://t.co/qD5OiZX6ld pic.twitter.com/AMFYmC9NET
— NASA (@NASA) September 23, 2022
ಗುರು ಗ್ರಹದ ವೀಕ್ಷಣೆ ಹೇಗೆ?
ದೂರದರ್ಶಕ ಅಥವಾ ದುರ್ಬೀನ್ ಅನ್ನು ಬಳಸಿಕೊಂಡು ಆಗಸದಲ್ಲಿ ನಡೆಯುವ ಈ ವಿದ್ಯಮಾನವನ್ನು ನೋಡಬಹುದಾಗಿದೆ. ಗುರುಗ್ರಹದ ಬ್ಯಾಂಡಿಂಗ್ ಮತ್ತು ಅದರ ಮೂರು ಅಥವಾ ನಾಲ್ಕು ಗೆಲಿಲಿಯನ್ ಚಂದ್ರಗಳನ್ನು ವೀಕ್ಷಿಸಬಹುದಾಗಿದೆ ಎಂದು ನಾಸಾ ತಿಳಿಸಿದೆ. ಸ್ಕೈ ಗೇಜರ್‌ಗಳು ಎತ್ತರದ ಪ್ರದೇಶ, ಗಾಢವಾದ ನೀಲಿ ಆಕಾಶ ಮತ್ತು ಶುಷ್ಕ ಹವಾಮಾನವಿದ್ದರೆ ಇನ್ನೂ ಉತ್ತಮವಾಗಿ ಗೋಚರಿಸುತ್ತದೆ. ಅಲಬಾಮಾದ ಹಂಟ್ಸ್‌ವಿಲ್ಲೆಯಲ್ಲಿರುವ ನಾಸಾದ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಸಂಶೋಧನಾ ಖಗೋಳ ಭೌತಶಾಸ್ತ್ರಜ್ಞರಾದ ಆಡಮ್ ಕೊಬೆಲ್ಸ್ಕಿ ಪ್ರಕಾರ, 4–ಇಂಚಿನ ಅಥವಾ ದೊಡ್ಡ ದೂರದರ್ಶಕವನ್ನು ಬಳಸಿಕೊಂಡು ಗುರುಗ್ರಹದ ಗ್ರೇಟ್ ರೆಡ್ ಸ್ಪಾಟ್ ಮತ್ತು ಬ್ಯಾಂಡ್‌ಗಳನ್ನು ಸ್ಪಷ್ಟವಾಗಿ ನೋಡಬಹುದು. ಗ್ರೀನ್ ಟು ಬ್ಲೂ ಸ್ಪೆಕ್ಟ್ರಮ್ ಫಿಲ್ಟರ್‌ಗಳ ಬಳಕೆಯಿಂದ ಇನ್ನೂ ವಿಶೇಷವಾಗಿ ಗೋಚರಿಸುವುದು.
ಇದನ್ನೂ ಓದಿ : 5G service :ದೇಶದ ಏಳು ನಗರಗಳಲ್ಲಿ ಆರಂಭವಾಗಲಿದೆ 5ಜಿ ಸೇವೆ
ಇದನ್ನೂ ಓದಿ : Vivo V25 : 64 ಮೆಗಾಪಿಕ್ಸೆಲ್ ನೈಟ್ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಸಿದ್ಧವಾದ ವಿವೊ V25 ಸ್ಮಾರ್ಟ್‌ಫೋನ್
(Jupiter is closest to earth today, this will be happening after 59 years)