Prime Minister Modi :ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್​ಐ

Prime Minister Modi : ಕೆಲ ದಿನಗಳ ಹಿಂದಷ್ಟೇ ಎನ್.ಐ.ಎ, ಇ.ಡಿ ಮತ್ತು ಸ್ಥಳೀಯ ಪೊಲೀಸರ ತಂಡ 15 ರಾಜ್ಯಗಳಲ್ಲಿ ಏಕಕಾಲದಲ್ಲಿ ಪಿ.ಎಫ್.ಐ ಸಂಘಟನೆಯ ಮುಖಂಡರು, ಚಟುವಟಿಕೆಗಳು, ಸ್ವತ್ತುಗಳನ್ನು‌ ಗುರಿಯಾಗಿಸಿ ದಾಳಿ ನಡೆಸಿತ್ತು‌. ಆಪರೇಶನ್ ಆಕ್ಟೋಪಸ್ ಹೆಸರಿನಲ್ಲಿ ಸುಮಾರು 90 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ಈ ದಾಳಿಯಲ್ಲಿ ಸಂಘಟನೆಯ ಮುಖಂಡರನ್ನು ಬಂಧಿಸಲಾಗಿತ್ತು. ಈ ಬಂಧಿತರ ವಿಚಾರಣೆ ಸಂದರ್ಭ ಸ್ಫೋಟಕ ಮಾಹಿತಿಯೊಂದು ಹೊರ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಬಿಹಾರ ಭೇಟಿ ವೇಳೆ ಕೋಮು ದಂಗೆ ಸೃಷ್ಟಿಸಿ ಅವರ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಚು ರೂಪಿಸಿತ್ತೆಂಬ ಆಘಾತಕಾರಿ ವಿಷಯ ಬಯಲಾಗಿದೆ.

ಹೌದು.. ಜಾರಿ ನಿರ್ದೇಶನಾಲಯದ ವಶದಲ್ಲಿರುವ ಪಿಎಫ್ಐ ಮುಖಂಡ ಶಫೀಕ್ ಪಾಯೆಥ್ ಎಂಬಾತ ಪ್ರಧಾನಿ ಹತ್ಯೆ ಸ್ಕೆಚ್ ಬಗ್ಗೆ ಬಾಯಿಬಿಟ್ಟಿದ್ದಾನೆ‌. ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಭೇಟಿ ವೇಳೆ ಕೋಮು ಧಂಗೆ ಸೃಷ್ಟಿಸಲು ಪಿಎಫ್ಐ ಪ್ಲ್ಯಾನ್ ಮಾಡಿಕೊಂಡಿತ್ತು. ಇದೇ ಸಂದರ್ಭ ಪ್ರಧಾನಿ‌ ಹತ್ಯೆಗೂ ಕುತಂತ್ರ ಹೆಣೆದಿದ್ದರು‌ ಎಂದು ಎನ್ಐಎ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿಯೇ ಪಿಎಫ್ಐ ಸದಸ್ಯರು ವಿದೇಶಗಳಿಂದ ದೇಣಿಗೆ ಸಂಗ್ರಹಿಸಿದ್ದರು ಎಂದು ಗೊತ್ತಾಗಿದೆ.

ಪ್ರಧಾನಿ‌ ಮೋದಿ ಅವರ ಕಾರ್ಯಕ್ರಮದಲ್ಲಿ ಸಾಮೂಹಿಕ ದಾಳಿ ಮಾದರಿಯಲ್ಲಿ ತಯಾರಿಯೂ ನಡೆದಿತ್ತು. ಇದಕ್ಕಾಗಿಯೇ ಪಿಎಫ್ಐ ಮುಖಂಡರು ಕೆಲ ಯುವಕರು ಮತ್ತು ಮಧ್ಯವಯಸ್ಕರಿಗೆ ತರಬೇತಿ ನೀಡಿದ್ದರು. ತರಬೇತಿ ಪಡೆದ ಈ ಪಡೆಯು ಬಿಹಾರದ ಪಟನಾದಲ್ಲಿ ಬೀಡು ಬಿಟ್ಟಿತ್ತು ಎಂದು ಶಫೀಕ್ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಈ ದುಷ್ಕರ್ಮಿಗಳ ಪಡೆಗೆ ಅಗತ್ಯವಾದ ಹಣಕಾಸು ನೆರವು ಕೇವಲ ನಗರಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಹರಿದುಬಂದಿತ್ತು. ಇದಕ್ಕಾಗಿಯೇ ಪಿಎಫ್ಐ 120 ಕೋಟಿ ರೂ ಸಂಗ್ರಹಿಸಿ, ದಾಳಿಗೆ ಬೇಕಾದ ಅಗತ್ಯ ಸಾಧನ, ತರಬೇತಿ ಉಪಕರಣ, ದುಷ್ಕರ್ಮಿಗಳು ತಂಗಲು ಬಾಡಿಗೆ ಮನೆ ಹಾಗೂ ಇತರ ವೆಚ್ಚಗಳನ್ನು ನಿರ್ವಹಿಸಿತ್ತು ಎಂಬುದು ಸಹ ತನಿಖೆ ಸಂದರ್ಭ ಗೊತ್ತಾಗಿದೆ.

ಬಂಧಿತರಿಂದ ಈ ಎಲ್ಲಾ ಮಾಹಿತಿಗಳು ಹೊರ ಬರುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಪೂರ್ಣ ಪ್ರಮಾಣದ ನಿಷೇಧ ಹೇರುವಂತೆ ಅಖಿಲ ಭಾರತ ಬಾರ್ ಅಸೋಸಿಯೇಶನ್ ಸಹ ಒತ್ತಾಯಿಸಿದೆ. ಒಟ್ಟಿನಲ್ಲಿ ತ‌ನಿಖಾ ಸಂಸ್ಥೆ ಬಂಧಿತರ ಇನ್ನಷ್ಟು ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಇದನ್ನು ಓದಿ : Husband Married to Another Woman :ತಾನೇ ಮುಂದೆ ನಿಂತು ಪತಿಗೆ 2ನೇ ವಿವಾಹ ನೆರವೇರಿಸಿದ ಪತ್ನಿ : ಬೆರಗಾದ ನೆಟ್ಟಿಗರು

ಇದನ್ನೂ ಓದಿ : tourist vehicle rolls off :ಕಣಿವೆಗೆ ಉರುಳಿದ ಪ್ರವಾಸಿ ಬಸ್​ : ಏಳು ಮಂದಿ ದುರ್ಮರಣ, 10 ಮಂದಿ ಆಸ್ಪತ್ರೆಗೆ ದಾಖಲು

PFI had plotted to assassinate Prime Minister Modi

Comments are closed.