ಲಕ್ನೋ : ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿಗೆ ಈ ಸ್ಟೋರಿನೇ ಬೆಸ್ಟ್ ಎಕ್ಸಾಂಪಲ್. 8ನೇ ತರಗತಿಯ ಬಾಲಕನೊಂದಿಗೆ 3 ಮಕ್ಕಳ ತಾಯಿಯೋರ್ವಳು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಗೊರಖ್‍ಪುರದಲ್ಲಿ ನಡೆದಿದೆ.
ಕಳೆದ 1 ವರ್ಷದಿಂದ ಇಬ್ಬರ ಮಧ್ಯೆ ಸಂಬಂಧವಿತ್ತು. ಆದರೆ ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರವಿದ್ದಿದ್ದರಿಂದಾಗಿ ಯಾರಿಗೂ ಕೂಡ ಇವರಿಬ್ಬರ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ಮಹಾಶಿವರಾತ್ರಿಯ ದಿನದಂದು ಮಹಿಳೆ, ವಿದ್ಯಾರ್ಥಿ ಜೊತೆ ಜಾತ್ರೆಗೆ ತೆರಳಿದ್ದಾಳೆ. ನಂತರದಲ್ಲಿ ಇಬ್ಬರೂ ಮನೆಗೆ ಬಾರದೆ ಪರಾರಿಯಾಗಿದ್ದಾರೆ.
ಮಹಿಳೆ ನಾಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಅಲ್ಲದೇ ಬಾಲಕನ ಪೋಷಕರೂ ಕೂಡ ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ. ಮಹಿಳೆಗೆ ಮದುವೆಯಾಗಿದ್ದು, ಈಗಾಗಲೇ ಮೂವರು ಮಕ್ಕಳ ತಾಯಿಯಾಗಿದ್ದಾಳೆ. ಕಳೆದ ಕೆಲ ಸಮಯದಿಂದಲೂ ಪತ್ನಿಯ ವರ್ತನೆಯಲ್ಲಿ ಬದಲಾವಣೆ ಕಂಡಿದ್ದೆ. ಆದರೆ ಆಕೆ ಈ ರೀತಿ ಮಾಡುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತ ಪತಿ ಪೊಲಿಸರ ಮುಂದೆ ಹೇಳಿಕೆ ನೀಡಿದ್ದಾನೆ.
ಇತ್ತ ಬಾಲಕನ ಪೋಷಕರೂ ಕೂಡ ಕಂಗಾಲಾಗಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಮಹಿಳೆ ಹಾಗೂ ಬಾಲಕ ಮಾತ್ರ ಇನ್ನೂ ಪತ್ತೆಯಾಗಿಲ್ಲ.