ಸೋಮವಾರ, ಏಪ್ರಿಲ್ 28, 2025
Homejob Newsಮನೆಗೆಲಸದವರು ಬೇಕಾಗಿದ್ದಾರೆ : ವಾರಕ್ಕೆ 5 ದಿನ ಕೆಲಸ, 18.5 ಲಕ್ಷ ರೂ. ವೇತನ !!

ಮನೆಗೆಲಸದವರು ಬೇಕಾಗಿದ್ದಾರೆ : ವಾರಕ್ಕೆ 5 ದಿನ ಕೆಲಸ, 18.5 ಲಕ್ಷ ರೂ. ವೇತನ !!

- Advertisement -

ಲಂಡನ್ : ಮನೆ ಕೆಲಸಕ್ಕೆ ಜನರು ಬೇಕಾಗಿದ್ದಾರೆ. ವಾರಕ್ಕೆ ಐದೇ ದಿನ ಕೆಲಸ. ಸಂಬಳ 18.5 ಲಕ್ಷ ರೂಪಾಯಿ. ಇದರ ಜೊತೆಗೆ ಊಟ, ವಸತಿಯೂ ಉಚಿತ. ಇದು ರಾಜಮನೆತನವೊಂದು ನೀಡಿದ ಜಾಹೀರಾತು.

ಹೌದು, ಬ್ರಿಟನ್ ರಾಜಮನೆತನದ ಕುಟುಂಬ ವಿಂಡ್ಸರ್ ಕ್ಯಾಸ್ಟಲ್ ಅರಮನೆಗೆ ಉತ್ತಮ ಕೆಲಸದವರನ್ನು ಹುಡುಕುತ್ತಿದೆ. ಮನೆ ಕೆಲಸದವರಿಗೆ ಬರೋಬ್ಬರಿ 19.140.09 ಡಾಲರ್ (18,40,577 ರೂಪಾಯಿ) ಆರಂಭಿಕ ವೇತನ ನೀಡುವುದಾಗಿ ರಾಯಲ್ ಹೌಸ್ ಹೋಲ್ಡ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಜಾಹೀರಾತು ಪ್ರಕಟಿಸಿದೆ.

ಜಾಹೀರಾತಿನಲ್ಲಿ ಲೆವೆಲ್ -2 ಅಪ್ರೆಂಟೈಸ್ ಶಿಪ್ ಕೆಲಸದ ಹುದ್ದೆ ಎಂದು ನಮೂದಿಸಲಾಗಿದೆ. ರಾಯಲ್ ಹೌಸ್ ಹೋಲ್ಡ್ ನಲ್ಲಿ ಅಪ್ರೆಂಟೈಸ್ ಶಿಪ್ ಮಾಡುವುದು ವಿಭಿನ್ನವಾಗಿರಲಿದ್ದು, ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ ಉದ್ಯೋಗಕ್ಕೆ ಆಯ್ಕೆಯಾದವರಿಗೆ 13 ತಿಂಗಳ ಕಾಲ ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ.
ಕೆಲಸಕ್ಕೆ ಆಯ್ಕೆಯಾಗುವವರಿಗೆ ಹಲವು ಅನುಕೂಲತೆಗಳನ್ನು ರಾಜಮನೆತನ ಒದಗಿಸಲಿದೆ. ವಾರದಲ್ಲಿ 2 ದಿನ ರಜೆ ನೀಡಲಾಗುತ್ತಿದ್ದು, ವಸತಿಯ ಜೊತೆಗೆ ಊಟ ವ್ಯವಸ್ಥೆ ಹಾಗೂ ಪ್ರಯಾಣದ ಭತ್ಯೆಯನ್ನು ರಾಜಕುಟುಂಬ ಭರಿಸಲಿದೆ.

ಅರ್ಜಿದಾರರು ಗಣಿತ ಹಾಗೂ ಇಂಗ್ಲೀಷ್ ಪದವಿಯನ್ನು ಪಡೆದಿರಬೇಕು. ಆಯ್ಕೆಯಾಗುವ ಅಭ್ಯರ್ಥಿ ಗಳು ಅರಮನೆಯ ಒಳಾಂಗಣವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಕೆಲಸವನ್ನು ನೀಡಲಾಗುತ್ತದೆ. 13 ತಿಂಗಳ ತರಬೇತಿಯನ್ನು ಪಡೆದ ನಂತರದಲ್ಲಿ ಖಾಯಂ ನೌಕರರನ್ನಾಗಿ ಮಾಡಲಾಗುತ್ತದೆ. ಸೇವೆ ಯಲ್ಲಿದ್ದಾಗ ಉತ್ತಮ ವೇತನದ ಜೊತೆಗೆ ನಿವೃತ್ತರಾದ ಬಳಿಕಯೂ ಪಿಂಚಣಿ ಸೌಲಭ್ಯವನ್ನು ಒದಗಿಸುವುದಾಗಿ ಜಾಹೀರಾತಿನಲ್ಲಿ ಹೇಳಲಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular