ಕೆಲವರು ಜೀರ್ಣ ಕ್ರಿಯೆ ಸರಿಯಾಗಲೆಂದು ಸೋಡಾ ಕುಡಿಯುತ್ತಾರೆ. ಇನ್ನು ಕೆಲವರು ಊಟ ಆದ ತಕ್ಷಣ ಸೋಡಾ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಸೋಡವನ್ನು ಇಷ್ಟ ಪಟ್ಟು ಕುಡಿಯುತ್ತಾರೆ. ಹೀಗೆ ಸೋಡವನ್ನು ಕುಡಿಯಲು ಒಬ್ಬೊಬರಿಗೆ ಒಂದೊಂದು ಕಾರಣವಿದೆ. ಆದರೆ ಇಲ್ಲೊಬ್ಬ ಸೋಡ ಕುಡಿದು ದಾಖಲೆಯನ್ನೇ ನಿರ್ಮಿಸಿದ್ದಾನೆ

ಎರಿಕ್ ‘ಬ್ಯಾಡ್ ಲ್ಯಾಂಡ್ಸ್’ ಬುಕರ್ ಎಂಬಾತನೇ ಸೋಡಾ ಕುಡಿದು ಗಿನ್ನೆಸ್ ಬುಕ್ ಅಲ್ಲಿ ತ್ತನ್ನ ಹೆಸರನ್ನು ಸೇರಿಸಿದ್ದಾನೆ. ಕೇವಲ 18.45 ಸೆಕೆಂಡುಗಳಲ್ಲಿ 2 ಲೀಟರ್ ಸೋಡಾ ಕುಡಿಯುವ ಮೂಲಕ ಗಿನ್ನೆಸ್ ದಾಖಲೆ ಪುಟ ಸೇರಿದ್ದಾರೆ.

ಎರಿಕ್ ಬ್ಯಾಡ್ ಲ್ಯಾಂಡ್ಸ್ ಬುಕರ್ಗೆ ತಿನ್ನುವುದು ಮತ್ತು ಕುಡಿಯುವುದು ಅಂದರೆ ಬಹಳ ಇಷ್ಟ. ಇದೀಗ ಬರೋಬ್ಬರಿ 2 ಲೀಟರ್ ಸೋಡಾ ಸೇವಿಸಿ ದಾಖಲೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ಎರಿಕ್ ಈ ದಾಖಲೆ ಮಾಡಿದ್ದಾರೆ. 2 ಲೀಟರ್ನ ಸೋಡಾ ಬಾಟಲಿಯನ್ನು ಖಾಲಿ ಮಾಡಿದ್ದಾರೆ.
ಕಾರ್ಬೋನೇಟ್ ಪೇಯಗಳನ್ನು ಎರಿಕ್ ಸವಿದಿದ್ದು, ಸೋಡಾ ಕುಡಿದ ಬೆನ್ನಲ್ಲೇ ಬಲು ರುಚಿಯಾಗಿದೆ ಎಂದ ಹೇಳಿದ್ದಾರೆ. ಎರಿಕ್ ತನ್ನ ಬ್ಯಾಡ್ಲ್ಯಾಂಡ್ ಹೆಸರಿನ ಯ್ಯೂಟೂಬ್ ಚಾನೆಲ್ನಲ್ಲಿ ತನ್ನ ಸಾಹಸದ ವಿಡಿಯೋ ಶೇರ್ ಮಾಡಿದ್ದಾರೆ. ಎರಿಕ್ಗೆ ಮೊದಲಿಂದಲೇ ಗಿನ್ನೆಸ್ ದಾಖಲೆ ಬರೆಯಬೇಕೆಂಬ ಕನಸೊಂದಿತ್ತು.

ಈ ಬಗ್ಗೆ ಆತ ಯಾವಾಗಲು ಯೋಚಿಸುತ್ತಿದ್ದರು. ಇದೀಗ ಸೋಡಾ ಕುಡಿಯುವ ಮೂಲಕ ತಮ್ಮ ಕನಸು ನನಸಾಗಿಸಿದ್ದಾರೆ. ಇಷ್ಟು ಮಾತ್ರವಲ್ಲ, ಎರಿಕ್ಗೆ ಆಹಾರ ಸೇವಿಸಿ ಕೂಡ ದಾಖಲೆ ಬರೆಯುವ ಕನಸೊಂದಿದೆ. ಮುಂದಿನ ದಿನಗಳಲ್ಲಿ ಅದನ್ನೂ ಕೂಡ ನನಸು ಮಾಡುವುದಾಗಿ ಹೇಳಿಕೊಂಡಿದ್ದಾರೆ.