Minister V. Somanna apologized : ಹೆಣ್ಣು ಮಗಳಿಗೆ ಹೊಡೆಯುವಂತಹ ನೀಚ ಕೆಲಸ ಮಾಡಲಾರೆ : ಸಚಿವ ವಿ.ಸೋಮಣ್ಣ

ಚಾಮರಾಜನಗರ : Minister Somanna apologized : ಸಮಸ್ಯೆಗೆ ಪರಿಹಾರ ಕೇಳಲು ಬಂದಿದ್ದ ಮಹಿಳೆಗೆ ಕಪಾಳ ಮೋಕ್ಷ ಮಾಡಿ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದ ಸಚಿವ ವಿ.ಸೋಮಣ್ಣ ಕೊನೆಗೂ ಕ್ಷಮೆಯಾಚಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಎಂಬ ಗ್ರಾಮದಲ್ಲಿ ಸಮಸ್ಯೆ ಕೇಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ಮಾಡಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಸಚಿವ ಸೋಮಣ್ಣ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಮೊದಲು ತಾನು ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ ಎಂದು ವಾದಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಇದೀಗ ಈ ಸಂಬಂಧ ಕೊಳ್ಳೆಗಾಲದಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.

ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದೇನೆ. ನಿನ್ನೆ ನಡೆದ ಘಟನೆಯು ಒಂದು ಘಟನೆಯೇ ಅಲ್ಲ. ಆ ಮಹಿಳೆಯು ಪದೇ ಪದೇ ವೇದಿಕೆ ಮೇಲೆ ಬಂದು ಮಾತನಾಡುತ್ತಲೇ ಇದ್ದಳು . ಎಷ್ಟು ಸಾರಿ ವೇದಿಕೆಯ ಮೇಲೆ ಬರ್ತಿಯಾ ಅಂತಾ ನಾನೇ ಪ್ರಶ್ನೆ ಮಾಡಿದ್ದೆ. ಆದರೆ ಆಕೆ ನನ್ನ ಮಾತು ಕೇಳಲಿಲ್ಲ. ಅಲ್ಲದೇ ನಿನ್ನ ಸಮಸ್ಯೆ ಬಗೆಹರಿಸುವೆ ಎಂದು ನಾನು ಆಕೆಯನ್ನು ಕೈನಿಂದ ಪಕ್ಕಕ್ಕೆ ಸರಿಸಿದ್ದೇನೆ ಅಷ್ಟೇ. ಆಕೆಗೆ ಹೊಡೆಯಬೇಕು ಎಂಬುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಈ ಘಟನೆಯಿಂದ ಯಾರಿಗೇ ನೋವಾಗಿದ್ದರೂ ನಾನು ಕ್ಷಮೆಯಾಚಿಸುವೆ ಎಂದಿದ್ದಾರೆ .

72ರ ಇಳಿ ವಯಸಿನಲ್ಲಿರುವ ನಾನು ಹೆಣ್ಣು ಮಗಳಿಗೆ ಹೊಡೆಯುವಂತಹ ನೀಚ ಕೆಲಸವನ್ನು ಮಾಡಲಾರೆ. ನಾನು ಬಡತನದ ಕುಟುಂಬದಲ್ಲಿಯೇ ಬೆಳೆದು ಬಂದವನು. ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ವ್ಯಕ್ತಿ ನಾನು. ಆದರೂ ಕೂಡ ಕೆಲವರು ಈ ಘಟನೆಯನ್ನು ಮುಂದಿಟ್ಟುಕೊಂಡು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ನಾನು ಆಕೆಗೆ ಹಕ್ಕು ಪತ್ರವನ್ನು ಕೊಡಿಸಿದ್ದೇನೆ. ಆದರೂ ಈ ವಿಚಾರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ .

ಹೆಣ್ಣು ಮಕ್ಕಳನ್ನು ನಾನು ತಾಯಿಯಂತೆ ಕಾಣುತ್ತೇನೆ. ಆದರೆ ನನ್ನ ಕಾರ್ಯ ವೈಖರಿಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತೆ ಎಂಬುದು ನನಗೆ ತಿಳಿದಿರಲಿಲ್ಲ. ಆ ಮಹಿಳೆಗೆ ಒತ್ತಡ ಹೇರಿ ಹೇಳಿಕೆ ಕೊಡಿಸುವ ಅವಶ್ಯಕತೆ ನನಗಿಲ್ಲ. ನಾನು ಎಂದಿಗೂ ಕ್ಷುಲ್ಲಕ ಕೆಲಸ ಮಾಡಿದವನಲ್ಲ. ನನ್ನ ಪತ್ನಿಯೊಬ್ಬಳನ್ನು ಬಿಟ್ಟರೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ನನಗೆ ತಾಯಿ ಹಾಗೂ ಸಹೋದರಿಯರಿದ್ದಂತೆ ಎಂದು ಹೇಳುವ ಮೂಲಕ ಸಚಿವ ವಿ.ಸೋಮಣ್ಣ ಕ್ಷಮೆಯಾಚಿಸಿದ್ದಾರೆ.

ಇದನ್ನು ಓದಿ : Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ

ಇದನ್ನೂ ಓದಿ : India Vs Pakistan T20 World Cup 2022 : ಭಾರತಕ್ಕೆ 160 ರನ್ ಟಾರ್ಗೆಟ್ ಕೊಟ್ಟ ಪಾಕಿಸ್ತಾನ

Woman’s slap case: Minister Somanna apologized twice

Comments are closed.