Flipkart Sale : ಆನ್ಲೈನ್ ಮಾರುಕಟ್ಟೆಗಳಲ್ಲಿ ಖರೀದಿ ಮಾಡುವುದು ಇದೀಗ ಹೊಸ ಟ್ರೆಂಡ್ ಆಗಿದೆ. ಅದರಲ್ಲೂ ಈಗ ದಸರಾ ಇರೋದ್ರಿಂದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ನಂತಹ ಇ ಕಾಮರ್ಸ್ ವೈಬ್ಸೈಟ್ಗಳಲ್ಲಿ ಪ್ರಾಡಕ್ಟ್ಗಳ ಮೇಲೆ ಸಿಕ್ಕಾಪಟ್ಟೆ ಡಿಸ್ಕೌಂಟ್ಗಳನ್ನು ನೀಡಲಾಗ್ತಿದೆ. ಇದೇ ಆಫರ್ಗಳನ್ನು ನಂಬಿಕೊಂಡು ಇ ಕಾಮರ್ಸ್ ವೆಬ್ಸೈಟ್ನಿಂದ ತನ್ನ ತಂದೆಗೆ ಲ್ಯಾಪ್ಟಾಪ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ ಲ್ಯಾಪ್ಟಾಪ್ ಬದಲಾಗಿ ಡಿಟರ್ಜಂಟ್ ಬಾರ್ಗಳನ್ನು ಕಳುಹಿಸಿಕೊಡಲಾಗಿದೆ.
ಲಿಂಕ್ಡಿನ್ ಪೋಸ್ಟ್ನಲ್ಲಿ ಈ ಘಟನೆ ಬಗ್ಗೆ ಯಶಸ್ವಿ ಶರ್ಮಾ ಎಂಬವರು ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಐಐಎಂ – ಅಹಮದಾಬಾದ್ನಲ್ಲಿ ವಿದ್ಯಾರ್ಥಿಯಾಗಿದ್ದು ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಲ್ಯಾಪ್ಟಾಪ್ ಆರ್ಡರ್ ಮಾಡಿದ್ದರು. ಆದರೆ ಪ್ಯಾಕೇಜ್ ತೆಗೆದು ನೋಡಿದ ಸಂದರ್ಭದಲ್ಲಿ ಅಲ್ಲಿ ಲ್ಯಾಪ್ಟಾಪ್ನ ಬದಲಾಗಿ ಡಿಟರ್ಜಂಟ್ ಬಾರ್ಗಳ ಪ್ಯಾಕೆಟ್ಗಳನ್ನು ಕಂಡು ಶಾಕ್ ಆಗಿದ್ದಾರೆ.
ಫ್ಲಿಪ್ಕಾರ್ಟ್ ಓಪನ್ ಬಾಕ್ಸ್ ಡೆಲಿವರಿ ಬಗ್ಗೆ ಮಾಹಿತಿ ಇಲ್ಲದ ತನ್ನ ತಂದೆಯು ಈ ಪ್ಯಾಕೇಜ್ ಸ್ವೀಕರಿಸಿದ್ದಾರೆ ಎಂದು ಯಶಸ್ವಿ ಶರ್ಮಾ ಮಾಹಿತಿ ನೀಡಿದ್ದಾರೆ. ಓಪನ್ ಬಾಕ್ಸ್ ಡೆಲಿವರಿ ಅಂದರೆ ಡೆಲಿವರಿ ಬಾಯ್ ಸರಿಯಾದ ಐಟಂ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ರಾಹಕರ ಎದುರಲ್ಲೇ ಪ್ಯಾಕೇಜ್ನ್ನು ತೆರೆಯುತ್ತಾರೆ. ಈ ಮೂಲಕ ಇ ಕಾಮರ್ಸ್ ವಂಚನೆಗಳಿಂದ ಗ್ರಾಹಕರು ಬಚಾವಾಗಬಹುದಾಗಿದೆ .
ಓಪನ್ ಬಾಕ್ಸ್ ಡೆಲಿವರಿ ಆಯ್ಕೆಯನ್ನು ಹೊಂದಿದ್ದ ಗ್ರಾಹಕರು ತಮ್ಮ ಪ್ಯಾಕೇಜ್ನ್ನು ಡೆಲಿವರಿ ಏಜೆಂಟ್ ಎದುರು ತೆರೆದು ತೋರಿಸದೆಯೇ ಡೆಲಿವರಿ ಬಾಯ್ಗೆ ಒಟಿಪಿಯನ್ನು ನೀಡಿದ್ದಾರೆ. ಆದರೆ ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ನಮ್ಮ ಗ್ರಾಹಕ ಸೇವಾ ವಿಭಾಗವು ಮರುಪಾವತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಮೂರು ದಿನಗಳ ಒಳಗಾಗಿ ಅವರ ಮೊತ್ತ ಅವರಿಗೆ ರೀಫಂಡ್ ಆಗಲಿದೆ. ನಾವು ಈ ಸಮಸ್ಯೆಯನ್ನು ಗಮನಿಸಿದ್ದೇವೆ ಹಾಗೂ ತಪ್ಪಾದ ಆರ್ಡರ್ನ್ನು ಸರಿಪಡಿಸುವ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಫ್ಲಿಪ್ಕಾರ್ಟ್ ಅಧಿಕೃತ ಹೇಳಿಕೆ ನೀಡಿದೆ.
ಆದರೆ ಭಾರತದಲ್ಲಿ ಹೆಚ್ಚಿನ ಜನರಿಗೆ ಈ ಓಪನ್ ಬಾಕ್ಸ್ ಡೆಲಿವರಿ ಬಗ್ಗೆ ತಿಳಿದಿಲ್ಲ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ನನ್ನ ತಂದೆಗೂ ಈ ಬಗ್ಗೆ ತಿಳಿದಿರಲಿಲ್ಲ. ಪ್ಯಾಕೇಜ್ ಸ್ವೀಕರಿಸಿದ ತಕ್ಷಣ ಒಟಿಪಿ ಕೇಳಿದ್ದಾರೆ. ಅದರಂತೆಯೇ ನನ್ನ ತಂದೆ ಒಟಿಪಿಯನ್ನು ನೀಡಿದ್ದಾರೆ ಎಂದು ಶರ್ಮಾ ಇದಕ್ಕೆ ಸಮರ್ಥನೆಯನ್ನು ನೀಡಿದ್ದಾರೆ.
ಇದನ್ನು ಓದಿ : Sanju Samson Cutout : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೂ ಮುನ್ನ ಮೈದಾನದ ಹೊರಗೆ ಸಂಜು ಸ್ಯಾಮ್ಸನ್ ಕಟೌಟ್
ಇದನ್ನೂ ಓದಿ : Central Government : ಕೇಂದ್ರ ಸರಕಾರದಿಂದ ದಸರಾ ಗಿಫ್ಟ್ : ಮೂರು ತಿಂಗಳು ಉಚಿತ ರೇಷನ್
Man Orders Laptop During Flipkart Sale, Gets Detergent Bars Instead