Central Government : ಕೇಂದ್ರ ಸರಕಾರದಿಂದ ದಸರಾ ಗಿಫ್ಟ್‌ : ಮೂರು ತಿಂಗಳು ಉಚಿತ ರೇಷನ್‌

ನವದೆಹಲಿ : ದಸರಾ ಹಬ್ಬದ ಹೊತ್ತಲ್ಲೇ ಕೇಂದ್ರ ಸರಕಾರ (Central Government) ನಾಡಿನ ಜನರಿಗೆ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಕೇಂದ್ರ ಸರಕಾರ ಉಚಿತ ಪಡಿತರ ಯೋಜನೆಯನ್ನು ಮುಂದಿನ ಮೂರು ತಿಂಗಳ ಕಾಲ ಮುಂದುವರಿಸಲಾಗುವುದು ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಪಡಿತರ ಚೀಟಿಯಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಇನ್ನೂ ಮೂರು ತಿಂಗಳವರೆಗೆ ತಲಾ 5ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ (Central Government) ಉಚಿತ ಪಡಿತರ ಯೋಜನೆಯನ್ನು 2020 ಮಾರ್ಚ್‌ ತಿಂಗಳಲ್ಲಿ ಜಾರಿಗೊಳಿಸಲಾಗಿತ್ತು. ಆದ್ರೆ ಈ ಯೋಜನೆ ಸೆಪ್ಟೆಂಬರ್‌ 30ಕ್ಕೆ ಕೊನೆಗೊಳ್ಳಬೇಕಿತ್ತು. ಆದ್ರೆ ಕೇಂದ್ರ ಸರಕಾರ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಬಡವರಿಗೆ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಯೋಜನೆಯನ್ನು ಮುಂದಿನ ಮೂರು ತಿಂಗಳವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕಟಣೆ ಇನ್ನಷ್ಟೇ ಹೊರಬರಬೇಕಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಪ್ರಾರಂಭಿಸಿದ ಈ ಯೋಜನೆಯನ್ನು ಎರಡು ವರ್ಷಗಳ ವರೆಗೂ ಮುಂದುವರಿಸಿಕೊಂಡು ಬಂದಿದೆ. ಈ ಯೋಜನೆಯ ಮೂಲಕ 80 ಕೋಟಿ ಪಡಿತರ ಚೀಟಿ ಫಲಾನುಭವಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತ ಅಕ್ಕಿಯನ್ನು ನೀಡಲಾಗಿದೆ. ಕೇಂದ್ರ ಸರಕಾರದಿಂದ ಇನ್ನೂ ಮೂರು ತಿಂಗಳವರೆಗೆ ಉಚಿತ ರೇಷನ್‌ನನ್ನು ಪಡೆಯಬಹುದಾಗಿದೆ. ಮೂರು ತಿಂಗಳವರೆಗೆ ಪಡಿತರಿಗೆ ಉಚಿತ ರೇಷನ್‌ನ್ನು ನೀಡುವುದರಿಂದ ಕೇಂದ್ರ ಸರಕಾರಕ್ಕೆ 40 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.

ಇದನ್ನೂ ಓದಿ : ಪಿಎಫ್​ಐ ಬ್ಯಾನ್​ ಮಾಡಿ ಸರ್ಕಾರದಿಂದ ದೇಶದ ಗಂಡಾಂತರ ನಾಶ’ : ಪ್ರಮೋದ್​ ಮುತಾಲಿಕ್​

ಇದನ್ನೂ ಓದಿ : ಪಿಎಫ್​ಐ ಬ್ಯಾನ್​ : ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಕಾಂಗ್ರೆಸ್​ ನಾಯಕ ಯು.ಟಿ ಖಾದರ್​

ಇದನ್ನೂ ಓದಿ : ಬಿಜೆಪಿಯವರು ನನ್ನ ಮೇಲೆ ರಣಹದ್ದುಗಳ ತರಹ ಬೀಳ್ತಾರೆ ನಾನು ಹೆದರುವ ಮಗ ಅಲ್ಲ ಎಂದ ಸಿದ್ದರಾಮಯ್ಯ

ಇದನ್ನೂ ಓದಿ : ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದ ಕೆಪಿಸಿಸಿ ಡಿ.ಕೆ ಶಿವಕುಮಾರ್​​

ಉಚಿತ ಪಡಿತರ ಯೋಜನೆಯು ಸಪ್ಟೆಂಬರ್‌ 30ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಇನ್ನೂ ಮೂರು ತಿಂಗಳು ಅಂದರೆ ಡಿಸೆಂಬರ್‌ವರೆಗೂ ಯೋಜನೆಯನ್ನು ಮುಂದುವರೆಸಿದೆ. ಇದ್ದರಿಂದ ಪಡಿತರ ಚೀಟಿಯ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಗೆ ಇನ್ನೂ ಮೂರು ತಿಂಗಳವರೆಗೆ ತಲಾ 5ಕೆ.ಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದಾಗಿದೆ. ರಾಷ್ಟ್ರೀಯ ಆಹಾರ ಮತ್ತು ಭದ್ರತಾ ಕಾಯಿದೆಯಡಿಯಲ್ಲಿ ಎಲ್ಲಾ ಪಡಿತರ ಫಲಾನುಭವಿಗಳಿಗೆ ಈ ಪ್ರಯೋಜನ ಲಭಿಸುತ್ತಿದೆ.

Dasara gift from central government is free ration for three months

Comments are closed.