ಡಿ.ಕೆ.ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ : ಡಿಕೆಶಿಗೆ ಮತ್ತೆ ಸಂಕಷ್ಟ

ಬೆಂಗಳೂರು : (DK Shivakumar CBI raid) ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾರತ ಜೋಡೋ ಅಭಿಯಾನಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನೇನು ಭಾರತ ಜೋಡೋ ಯಾತ್ರೆ ಕರ್ನಾಟಕದ ಗಡಿ ಪ್ರವೇಶಿಸುವ ಹೊತ್ತಿನಲ್ಲೇ ಡಿಕೆಶಿಯವರಿಗೆ ಸಿಬಿಐ ಮತ್ತೊಂದು ಶಾಕ್ ನೀಡಿದ್ದು, ಸಿಬಿಐ ಅಧಿಕಾರಿಗಳು ಡಿಕೆಶಿ ತವರಿಗೆ ಲಗ್ಗೆ ಇಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಶತಾಯ ಗತಾಯ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಅಧಿಕಾರಕ್ಕೆ ತರೋ ಕನಸಿನಲ್ಲಿದ್ದಾರೆ. ಮಾತ್ರವಲ್ಲ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಸ್ಥಾನಕ್ಕೆ ಏರೋದು ಕೂಡ ಡಿಕೆಶಿ ಲೆಕ್ಕಾಚಾರ. ಆದರೆ ಡಿಕೆಶಿಗೆ ಬಿಜೆಪಿಯವರ ಕಾಟ, ಸ್ವಪಕ್ಷಿಯರ ಅಸಮಧಾನದ ನಡುವೆ ಈಗ ಇಡಿ,ಐಟಿ ಬಳಿಕ ಸಿಬಿಐ ಕಾಟವೂ ಜೋರಾಗಿದೆ. ಡಿ.ಕೆ‌.ಶಿವಕುಮಾರ್ ಅವರ ಕನಕಪುರ, ದೊಡ್ಡಾಲಹಳ್ಳಿ, ಸಂತೆಕೋಡಿಹಳ್ಳಿ ಮನೆ, ಜಮೀನು ಸೇರಿದಂತೆ ಡಿಕೆಶಿಯವರ ಎಲ್ಲ ಆಸ್ತಿಗಳ ಬಳಿ ಸಿಬಿಐ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕನಕಪುರ ತಹಶೀಲ್ದಾರಗೆ ಕರೆ ಮಾಡಿದ್ದ ಸಿಬಿಐ ಅಧಿಕಾರಿಗಳು ಅವರನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದರಂತೆ. ತಹಶೀಲ್ದಾರ ಸಮ್ಮುಖದಲ್ಲಿ ಡಿಕೆಶಿ ಸಿಬಿಐಗೆ ಸಲ್ಲಿಸಿದ ಆಸ್ತಿಗಳ ದಾಖಲೆಯ ಸತ್ಯಾಸತ್ಯತೆ ಪರಿಶೀಲನೆ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಂದಿದ್ದ ನಾಲ್ಕಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಸಂಜೆ ನಾಲ್ಕು ಗಂಟೆಯವರೆಗೆ ಪರಿಶೀಲನೆ ನಡೆಸಿ ತೆರಳಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗ್ತಿದೆ. ಇನ್ನು ಈ ದಾಳಿ ಬಗ್ಗೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿರೋ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ನಮ್ಮ ಮನೆ, ತೋಟದ ಮನೆ ಬಳಿ ಸಿಬಿಐನವ್ರು ಬಂದಿದ್ದರಂತೆ. ತಹಶೀಲ್ದಾರನ್ನು ಕರೆದುಕೊಂಡು ಬಂದಿದ್ದರಂತೆ. ನಾನು ಮೊದಲೆ ದಾಖಲೆಗಳನ್ನು ಕೊಟ್ಟಿದ್ದೇನೆ. ಆದರೂ ಬಂದಿದ್ದಾರೆ. ‌ಬಹುಷಃ ನನ್ನ ಮೇಲೆ ಪ್ರೀತಿ ಜಾಸ್ತಿ ಇದೆ ಅನ್ಸುತ್ತೆ ಎಂದಿದ್ದಾರೆ.

ಅಲ್ಲದೇ ನಮ್ಮ ತೋಟ, ಮನೆ ಆಸ್ತಿ ಎಲ್ಲವನ್ನು ನೋಡಿಕೊಂಡು ಹೋಗಿದ್ದಾರೆ. ಇದು ನಮ್ಮ ಹಣೆಬರಹ. ನಮ್ಮ ಮೇಲೆ ಕೇಂದ್ರ ಸರ್ಕಾರಕ್ಕೆ ಅಪಾರವಾದ ಪ್ರೀತಿ ಇದೆ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಹಿಂಸಿಸುವುದು ಅಭ್ಯಾಸ. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಎಂದು ಡಿಕೆಶಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಸಚಿವರಾಗಿದ್ದಾಗ ಸೇರಿದಂತೆ ಹಲವು ಸಂದರ್ಭದಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಡಿಕೆಶಿ ಮೇಲೆ ಕೇಳಿಬಂದಿತ್ತು. ಸದ್ಯ ಡಿಕೆಶಿ ಭಾರತ ಜೋಡೋದಲ್ಲಿ ಬ್ಯುಸಿಯಾಗಿದ್ದು, ಸಪ್ಟೆಂಬರ್ 30 ರಂದು ರಾಹುಲ್ ಗಾಂಧಿ ಗುಂಡ್ಲುಪೇಟೆ‌ ಮೂಲಕ ರಾಜ್ಯ ಪ್ರವೇಶ ಮಾಡಲಿದ್ದಾರೆ.

ಇದನ್ನೂ ಓದಿ : PAYCM ಅಭಿಯಾನ ; ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

ಇದನ್ನೂ ಓದಿ : Central Government : ಕೇಂದ್ರ ಸರಕಾರದಿಂದ ದಸರಾ ಗಿಫ್ಟ್‌ : ಮೂರು ತಿಂಗಳು ಉಚಿತ ರೇಷನ್‌

CBI raid on DK Shivakumar house KPCC President trouble again

Comments are closed.