ಭಾನುವಾರ, ಏಪ್ರಿಲ್ 27, 2025
HomeSpecial StoryMan Tries To Kiss Cobra : ನಾಗರಹಾವಿಗೆ ಚುಂಬಿಸಲು ಹೋಗಿ ಆಸ್ಪತ್ರೆ ಪಾಲಾದ ಉರಗ...

Man Tries To Kiss Cobra : ನಾಗರಹಾವಿಗೆ ಚುಂಬಿಸಲು ಹೋಗಿ ಆಸ್ಪತ್ರೆ ಪಾಲಾದ ಉರಗ ತಜ್ಞ

- Advertisement -

ಶಿವಮೊಗ್ಗ : Man Tries To Kiss Cobra : ನಾಗರಹಾವಿನ ಹೆಸರು ಕೇಳಿದರೆ ಸಾಕು ಮೈ ಝುಂ ಅನ್ನುತ್ತೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ಕಿಸ್​ ಮಾಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿದ್ದು ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆಯೊಂದು ಶಿವಮೊಗ್ಗದಲ್ಲಿ ವರದಿಯಾಗಿದೆ. ಟ್ವಿಟರ್​ನಲ್ಲಿ ಎಹೆಚ್​ ಸಿದ್ದಿಕಿ ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ.


ವಿಡಿಯೋದಲ್ಲಿ ಕಾಣುವಂತೆ ಹಾವನ್ನು ಹಿಡಿದಿದ್ದ ವ್ಯಕ್ತಿಯು ಹಾವಿನ ಹತ್ತಿರಕ್ಕೆ ತನ್ನ ತುಟಿಯನ್ನು ತೆಗೆದುಕೊಂಡು ಹೋಗುತ್ತಾನೆ. ಕೂಡಲೇ ನಾಗರ ಹಾವು ಆತನ ಬಾಯಿಗೆ ಕಚ್ಚುತ್ತದೆ. ಕೂಡಲೇ ಆ ವ್ಯಕ್ತಿಯು ಹಾವನ್ನು ತನ್ನ ಕೈನಿಂದ ಬಿಡುತ್ತಾನೆ. ಕೂಡಲೇ ಅಲ್ಲೇ ನೆರೆದಿದ್ದ ಗ್ರಾಮಸ್ಥರು ನಾಗರ ಹಾವನ್ನು ಹಿಡಿಯಲು ಯತ್ನಿಸುತ್ತಾರೆ. ಆದರೆ ಹಾವು ಎಲ್ಲರ ಕಣ್ತಪ್ಪಿಸಿ ಕಣ್ಮರೆಯಾಗಿದೆ.


ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿರುವ ಈ ವಿಡಿಯೋಗೆ ಸಿದ್ದಿಕಿ, ಉರಗ ತಜ್ಞರೊಬ್ಬರು ತಾನು ರಕ್ಷಿಸಿದ ನಾಗರ ಹಾವಿಗೆ ಕಿಸ್​ ಮಾಡಲು ಹೋಗಿ ಕಚ್ಚಿಸಿಕೊಂಡಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
ನಾಗರಹಾವುಗಳು ಹಿಂದೂ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ. ಈ ಹಾವುಗಳು ಭಾರತ, ದಕ್ಷಿಣ ಚೀನಾ ಸೇರಿದಂತೆ ಆಗ್ನೇಯ ಏಷ್ಯಾ ಭಾಗದಲ್ಲಿ ಸ್ಥಳೀಯವಾಗಿ ಸಿಗುವ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಒಂದಾಗಿವೆ. ವಿಶ್ವದ ಅತ್ಯಂತ ಮಾರಣಾಂತಿಕ ಹಾವುಗಳ ಪಟ್ಟಿಯಲ್ಲಿ ನಾಗರಹಾವು ಕೂಡ ಸ್ಥಾನ ಪಡೆದಿದೆ. ನಾಗರ ಹಾವಿನ ವಿಷ ಅತೀ ಹೆಚ್ಚು ಪ್ರಬಲವಲ್ಲದೇ ಇದ್ದರೂ ಸಹ ಈ ಹಾವು ಒಂದು ಬಾರಿ ಕಚ್ಚಿದಾಗ ಹೊರಸೂಸುವ ವಿಷವು 20 ಜನರನ್ನು ಕೊಲ್ಲಲು ಸಾಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.


ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್​ಗಳನ್ನು ಪಡೆಯಬೇಕೆಂಬ ಗೀಳಿಗೆ ಬೀಳುವ ಅನೇಕರು ಈ ರೀತಿಯ ಹುಚ್ಚಾಟಗಳನ್ನು ಮಾಡಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ದುರಂತವೇ ಸರಿ.

ಇದನ್ನು ಓದಿ : Kiccha Sudeep : “ಹೊಂಬಾಳೆ ಫಿಲ್ಮ್ಸ್‌” ನಿರ್ಮಾಣದಲ್ಲಿ ಸುದೀಪ್ ಸಿನಿಮಾ: ಕಾರ್ತೀಕ್ ಕೊಟ್ರು ಕ್ಲೂ

ಇದನ್ನೂ ಓದಿ : Indian Student Murdered : ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನಿಗೂಢ ಹತ್ಯೆ

Man Tries To Kiss Cobra, Gets Bitten in Face Now Battling for Life

RELATED ARTICLES

Most Popular