Kicchaverse launch :ಕಿಚ್ಚ ಸುದೀಪ ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಎನ್​​ಎಫ್​ಟಿಯಿಂದ ಕಿಚ್ಚವರ್ಸ್​ ಲಾಂಚ್​​

Kicchaverse launch : ಸ್ಯಾಂಡಲ್​ವುಡ್​ನಲ್ಲಿ ಸದ್ಯ ಸುವರ್ಣಯುಗ ನಡೆಯುತ್ತಿದೆ ಅಂದರೆ ತಪ್ಪಾಗಲಾರದು. ಈ ವರ್ಷ ಸ್ಯಾಂಡಲ್​ವುಡ್​ನಲ್ಲಿ ತೆರೆ ಕಂಡ ಬಹುತೇಕ ಸಿನಿಮಾಗಳು ನೂರುಕೋಟಿ ಕ್ಲಬ್​ ದಾಟುವುದರ ಜೊತೆಯಲ್ಲಿ ಇಡೀ ದೇಶಾದ್ಯಂತ ಸದ್ದು ಮಾಡಿವೆ. ಇದೀಗ ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ ಬಿಡುಗಡೆಗೆ ಕೂಡ ಕೌಂಟ್​ಡೌನ್​ ಆರಂಭಗೊಂಡಿದ್ದು ಈ ಸಿನಿಮಾ ಕೂಡ ಕೋಟಿ ಕ್ಲಬ್​ ಸೇರಲಿದೆ ಎಂಬ ನಿರೀಕ್ಷೆ ಕನ್ನಡಿಗರದ್ದು. ಈ ಎಲ್ಲದರ ನಡುವೆ ಕಿಚ್ಚನ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಒಂದು ಸಿಕ್ಕಿದೆ. ಅದೇನೆಂದರೆ ವಿಕ್ರಾಂತ್​ ರೋಣ ಸಿನಿಮಾ ಮೆಟಾ ವರ್ಸ್​ಗೆ ಸೇರಿದ್ದು ಎನ್​ಎಫ್​ಟಿ ಸಂಸ್ಥೆಯು ಕಿಚ್ಚ ವರ್ಸ್​ ಮೂಲಕ ವಿಕ್ರಾಂತ ರೋಣವನ್ನು ಪ್ರಸ್ತುತಗೊಳಿಸಲಿದೆ. ಈ ವಿಚಾರ ಕಿಚ್ಚ ಫ್ಯಾನ್ಸ್​ಗೆ ಸಖತ್​ ಥ್ರಿಲ್​ ನೀಡಿದೆ.


ಕಿಚ್ಚ ವರ್ಸ್ ಮೂಲಕ ಅಭಿಮಾನಿಗಳು ನಟ ಸುದೀಪ್​ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದಾಗಿದೆ. ಆದರೆ ಕಿಚ್ಚ ವರ್ಸ್​ಗೆ ಪ್ರವೇಶ ಪಡೆಯಲು ಎನ್​ಎಫ್​​ಟಿ ಮೆಂಬರ್​ಶಿಪ್​ ಕಾರ್ಡನ್ನು ಹೊಂದುವುದು ಕಡ್ಡಾಯವಾಗಿರಲಿದೆ. ಈ ಮೆಂಬರ್​ಶಿಪ್​ ಕಾರ್ಡ್ ಹೊಂದಿರುವವರು ನಟ ಸುದೀಪ್​ ಜೊತೆಯಲ್ಲಿ ಮಾತನಾಡಲು, ಅವರೊಂದಿಗೆ ಕಾಲ ಕಳೆಯಲು ಅವಕಾಶವನ್ನು ಪಡೆಯಲಿದ್ದಾರೆ .


ಕಿಚ್ಚ ಸುದೀಪ್​ , ಅವರ ಧರ್ಮ ಪತ್ನಿ ಪ್ರಿಯಾ ಸುದೀಪ್​ ಹಾಗೂ ಸಂಪೂರ್ಣ ವಿಕ್ರಾಂತ್​​ ರೋಣ ಚಿತ್ರತಂಡ ಎನ್​ಎಫ್​ಟಿ ಸಂಸ್ಥೆಯ ಜೊತೆಯಲ್ಲಿ ಕಿಚ್ಚ ವರ್ಸ್​ ಬಗ್ಗೆ ಮಾಹಿತಿ ನೀಡಿದೆ. ಎನ್​ಎಫ್​ಟಿ ಸಂಸ್ಥೆಯ ಸೃಷ್ಟಿಯಾಗಿರುವ ಈ ಕಿಚ್ಚ ವರ್ಸ್​ ಬಗ್ಗೆ ಮೊದ ಮೊದಲು ನಟ ಸುದೀಪ್​ಗೂ ಅಷ್ಟೊಂದು ಐಡಿಯಾ ಇರಲಿಲ್ಲವಂತೆ. ಆದರೆ ಇದನ್ನು ಈಗ ನೋಡಿದಾಗ ನನಗೆ ತುಂಬಾನೇ ಖುಷಿಯಾಗ್ತಿದೆ. ಎನ್​ಎಫ್​​ಟಿ ತಂಡ ಮಾಡಿರುವ ಈ ಕಾರ್ಯ ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಥ್ರಿಲ್​ ನೀಡುತ್ತೆ ಎಂಬ ಭರವಸೆ ನನಗಿದೆ ಎಂದು ನಟ ಸುದೀಪ ಹೇಳಿದ್ರು.


ಎನ್​ಎಫ್​​ಟಿ ಮೆಂಬರ್​ಶಿಪ್​ ಪಡೆಯಲು ನೀವು ಮಾಡಬೇಕಾದದ್ದೇನು..?
ನಿನ್ನೆಯಿಂದಲೇ ಎನ್​​ಎಫ್​ಟಿ ಮೆಂಬರ್​ಶಿಪ್​ ಪಡೆಯಲು ಸ್ಪರ್ಧೆ ಆರಂಭವಾಗಿದೆ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ವಿಕ್ರಾಂತ್​ ರೋಣ ಚಿತ್ರದ ಸ್ಕೆಚ್​ ಬಿಡಿಸಿ ಅದನ್ನು kichchaverse.ioನಲ್ಲಿ ಅಪ್​ಲೋಡ್​ ಮಾಡಬೇಕು. ಈ ಕಾಂಪಿಟೇಶನ್​ ಅತ್ಯದ್ಭುತ ಸ್ಕೆಚ್​ ಬಿಡಿಸುವವರಿಗೆ ಎನ್​ಎಫ್​ಟಿ ಮೆಂಬರ್​ಶಿಪ್​ ದೊರೆಯಲಿದೆ. ಈ ಮೆಂಬರ್​ಶಿಪ್​ ಪಡೆದವರು ಕಿಚ್ಚ ವರ್ಸ್​ನ ಹಲವಾರು ಇವೆಂಟ್​ಗಳಲ್ಲಿ ಭಾಗಿಯಾಗುವ ಮೂಲಕ ಕಿಚ್ಚ ಸುದೀಪ ಜೊತೆ ಸಮಯ ಕಳೆಯುವ ಅವಕಾಶವನ್ನು ಪಡೆಯಲಿದ್ದಾರೆ .


ಇದರ ಜೊತೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವಿಕ್ರಾಂತ್​ ರೋಣ ಸಿನಿಮಾದ ಮೂಲಕ ಹೊರ ದೇಶಗಳಲ್ಲಿ ಕನ್ನಡ ಸಿನಿಮಾ ಪ್ರೀಮಿಯರ್​ ಶೋ ಕಾಣಲಿದೆ. ಜುಲೈ 27ರಂದು ದುಬೈನಲ್ಲಿ ವಿಕ್ರಾಂತ್​ ರೋಣ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಇದಕ್ಕೆಲ್ಲ ಎನ್​​ಎಫ್​ಟಿ ಮೆಂಬರ್​ಶಿಫ್​ ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್​ ತಿಳಿಸಿದ್ದಾರೆ.

ಇದನ್ನು ಓದಿ : sudeep has gone to delhi : 13 ವರ್ಷಗಳ ಬಳಿಕ ದೆಹಲಿಗೆ ಹಾರಿದ ಕಿಚ್ಚ ಸುದೀಪ : ಪ್ರಹ್ಲಾದ್​ ಜೋಶಿ ಜೊತೆ ಮಾತುಕತೆ

ಇದನ್ನೂ ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

Good news for Kiccha Sudeepa fans: Kicchaverse launch

Comments are closed.