ಮದುವೆಯಲ್ಲೂ ಹೊಸ ಟ್ರೆಂಡ್ : ಮನೆ ಬಾಗಿಲಿಗೆ ಬಂತು ಮದುವೆಯ ಊಟ..!

  • ಪೂರ್ಣಿಮಾ ಹೆಗಡೆ

ತಮಿಳುನಾಡು : ಕೊರೋನಾದಿಂದ ಮದುವೆಗಳಿಗೆ ಹೋಗೋಕೆ ಆಗ್ತಿಲ್ಲ. ಹೀಗಾಗಿ ರುಚಿ ರುಚಿಯಾದ ಊಟ ಮಿಸ್ ಆಗ್ತಿದೆ ಅಂತ ನೀವು ನೊಂದ್ಕೋತಿದ್ದರೇ ಅದಕ್ಕೂ ಒಂದು ಪರಿಹಾರ ಬಂದಿದೆ ಕಣ್ರಿ. ಆನ್ ಲೈನ್ ಮದುವೆಯ ಊಟ ಇನ್ ಮುಂದೆ ಮನೆಗೆ ಡೆಲಿವರಿ ಆಗಲಿದೆ.

ತಮಿಳುನಾಡಿನಲ್ಲಿ ಇಂತಹದೊಂದು ವಿನೂತನ ಪ್ರಯತ್ನ ನಡೆದಿದ್ದು ಈ ಸಂಗತಿ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಕೋವಿಡ್-19 ಕಾರಣಕ್ಕೆ ವೆಬ್ ಕಾಸ್ಟ್ ನಲ್ಲಿ ಮದುವೆಯಾದ ಜೋಡಿ ಮದುವೆಯ ಊಟವನ್ನು ಬಾಳೆ ಎಲೆ ಜೊತೆ ಮನೆಗೆ ತಲುಪಿಸಿ ವಿಭಿನ್ನತೆ ಮೆರೆದಿದ್ದಾರೆ.

ಆಕರ್ಷಕವಾದ ಬ್ಯಾಗ್ ನಲ್ಲಿ ವೈರೈಟಿ ಫುಡ್ ಮದುವೆಗೆ ಆಹ್ವಾನಿತರಾದ ಸಂಬಂಧಿಗಳ ಮನೆ ತಲುಪಿದ್ದು ಅವರು ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಊಟದ ಪಾರ್ಸಲ್ ಜೊತೆಗೆ ಬಾಳೆ ಎಲೆಯನ್ನು ನೀಡಲಾಗಿದ್ದು, ಅದರಲ್ಲಿ ಯಾವ ಪದಾರ್ಥವನ್ನು ಎಲ್ಲಿ ಬಡಿಸಿಕೊಳ್ಳಬೇಕು ಎಂಬ ವಿವರಣೆಯನ್ನು ನೀಡಲಾಗಿದೆ.

ಶಿವಾನಿ ಈ ವಿಚಾರವನ್ನು ಊಟ ದ ಪಾರ್ಸೆಲ್ ಪೋಟೋ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಆಮಂತ್ರಣದ ಹೊಸ ವಿಧಾನವಿದು, ಮದುವೆಯ ಊಟವನ್ನು ಮನೆಗೆ ತಲುಪಿಸಲಾಗುತ್ತಿದೆ ಎಂದು ಶಿವಾನಿ ಬರೆದಿದ್ದಾರೆ.

ತಮಿಳುನಾಡಿನ ಮಹತಿ ಹಾಗೂ ಶಿವಪ್ರಕಾಶ್ ಮದುವೆಯಲ್ಲಿ ಇಂತಹದೊಂದು ವಿಭಿನ್ನ ಪ್ರಯತ್ನ ನಡೆದಿದ್ದು ಸಂಬಂಧಿಕರು ಹಾಗೂ ಸ್ನೇಹಿತರ ಮೆಚ್ಚುಗೆಗೆ ಪಾತ್ರವಾಗಿದೆ.ಇನ್ವಿಟೇಶನ್ ನಲ್ಲಿ ವೆಬ್ ಕಾಸ್ಟ್ ಮದುವೆ ನೋಡಲು ಅಗತ್ಯ ಸೈಟ್ ಅಡ್ರೆಸ್ ಪಾಸವರ್ಡ್ ಕೂಡ ನಮೂದಿಸಲಾಗಿತ್ತು.

Comments are closed.