Rare Pink Fish : ಕೈಗಳಿಂದ ನಡೆದಾಡುವ ವಿಶೇಷ ವಾಕಿಂಗ್ ಮೀನನ್ನು ಆಸ್ಟ್ರೇಲಿಯಾದ ಟ್ಯಾಸ್ಮೇನಿಯಾ ಕರಾವಳಿ ಪ್ರದೇಶದಲ್ಲಿ ಬರೋಬ್ಬರಿ 22 ವರ್ಷಗಳ ಬಳಿಕ ಗುರುತಿಸಲಾಗಿದೆ. ಆಸ್ಟ್ರೇಲಿಯಾ ಕರಾವಳಿ ಮೂಲದ ಈ ಮೀನನ್ನು ಕೇವಲ ನಾಲ್ಕು ಬಾರಿ ಮಾತ್ರ ಗುರುತಿಸಲಾಗಿದೆ. 1999ರಲ್ಲಿ ಟ್ಯಾಸ್ಮೆನಿಯಾದಲ್ಲಿ ಡೈವರ್ ಒಬ್ಬರು ಕೊನೆಯ ಬಾರಿಗೆ ಈ ಮೀನನ್ನು ಪತ್ತೆ ಮಾಡಿದ್ದರು.
ಹೆಸರೇ ಹೇಳುವಂತೆ ಈ ವಾಕಿಂಗ್ ಫಿಶ್ ಉಳಿದ ಮೀನುಗಳಿಗಿಂತ ವಿಭಿನ್ನವಾಗಿದೆ. ಇದು ದೊಡ್ಡ ಕೈಗಳನ್ನು ಹೊಂದಿದ್ದು ಈ ಕೈಗಳ ಸಹಾಯದಿಂದ ಈಜುವುದು ಮಾತ್ರವಲ್ಲದೇ ನಡೆದಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಮೀನು ಅಳಿವಿನಂಚಿನಲ್ಲಿದೆ ಎಂದು ಗುರುತಿಸಲಾಗಿದೆ. ಮರೈನ್ ಪಾರ್ಕ್ನ ಆಳ ಸಮುದ್ರದಲ್ಲಿ ಇಡಲಾದ ಕ್ಯಾಮರಾ ಕಣ್ಣಲ್ಲಿ ಗುಲಾಬಿ ಮೀನಿನ ಚಲನವಲನಗಳು ಸೆರೆಯಾಗಿದೆ. ಈ ಮೊದಲು ಹ್ಯಾಂಡ್ ಫಿಶ್ ಕೇವಲ ಆಳವಿಲ್ಲದ ನೀರಿನಲ್ಲಿ ಮಾತ್ರ ವಾಸಿಸುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಹೊಸ ಇದೀಗ ಸಿಕ್ಕಿರುವ ಫೂಟೇಜ್ನ ಪ್ರಕಾರ ಹ್ಯಾಂಡ್ ಫಿಶ್ ಬರೋಬ್ಬರಿ 390 ಅಡಿ ಆಳದ ನೀರಿನಲ್ಲೂ ವಾಸವಿರಬಲ್ಲದು ಎಂದು ತಿಳಿದುಬಂದಿದೆ.
ಬಿಬಿಸಿಯ ಪ್ರಮುಖ ಸಂಶೋಧಕ ಹಾಗೂ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ನೆವಿಲ್ಲೆ ಬ್ಯಾರೆಟ್ ವಾಕಿಂಗ್ ಫಿಶ್ ಕಾಣಿಸಿಕೊಂಡಿರುವುದು ನಮ್ಮ ಅಳಿವಿನಂಚಿನಲ್ಲಿ ಇರುವ ಜೀವಿಗಳ ಉಳಿವಿನ ಭರವಸೆಯನ್ನು ನೀಡುತ್ತಿದೆ. ಸಂಶೋಧಕರ ತಂಡವು ಟ್ಯಾಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್ನಲ್ಲಿ ಕ್ಯಾಮರಾಗಳನ್ನು ಇರಿಸಲಾಗಿತ್ತು. ಈ ಕ್ಯಾಮರಾಗಳ ಮೂಲಕ ಹ್ಯಾಂಡ್ಫಿಶ್ನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ
ಇದನ್ನೂ ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ
ಇದನ್ನೂ ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!
ಇದನ್ನೂ ಓದಿ : man climbs atop electricity tower : ಸಿಹಿತಿಂಡಿ ಬೇಕೆಂದು ವಿದ್ಯುತ್ ಕಂಬವನ್ನೇರಿ ವ್ಯಕ್ತಿಯ ಹುಚ್ಚಾಟ..!
Rare Pink Fish That ‘Walks’ on Hands Found in Australia After 22 Years