Murali Vijay : ಮುರಳಿ ವಿಜಯ್ ಮುಂದೆ “ಡಿಕೆ ಡಿಕೆ” ಎಂದು ಕೂಗಿದ ಫ್ಯಾನ್ಸ್

ಚೆನ್ನೈ: ತಮಿಳುನಾಡಿನ ಸ್ಟಾರ್ ಕ್ರಿಕೆಟಿಗ ಮುರಳಿ ವಿಜಯ್ (Murali Vijay) ಒಂದು ಕಾಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದವರು. ವಿಶೇಷವಾಗಿ ವಿದೇಶಿ ನೆಲಗಳಲ್ಲಿ ಮುರಳಿ ವಿಜಯ್ ಉತ್ತಮ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಆನ್ ಫೀಲ್ಡ್’ನಲ್ಲಿ ಒಳ್ಳೆಯ ಕ್ರಿಕೆಟರ್, ಆದರೆ ಆಫ್ ದಿ ಫೀಲ್ಡ್’ನಲ್ಲಿ ಗೆಳೆಯನ ಪತ್ನಿ ಜೊತೆ ಅನೈತಿಕ ಸಂಬಂಧ ಬೆಳೆಸಿ, ಕೊನೆಗೆ ಆಕೆಯನ್ನೇ ಮದುವೆಯಾದವರು ಮುರಳಿ ವಿಜಯ್. ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಮುರಳಿ ವಿಜಯ್ (Murali Vijay), ತಮಿಳುನಾಡು ಪ್ರೀಮಿಯರ್ ಲೀಗ್’ನಲ್ಲಿ ಆಡುತ್ತಿದ್ದಾರೆ. TNPL (Tamil Nadu Premier League) ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ವಿಜಯ್”ಗೆ ಭಾರೀ ಮುಜುಗರವಾಗುವಂತಹ ಘಟನೆಯೊಂದು ನಡೆದಿದೆ.

TNPLನಲ್ಲಿ ರುಬಿ ತ್ರಿಚಿ ವಾರಿಯರ್ಸ್ (Ruby Tricky Warriors) ಪರ ಆಡುತ್ತಿರುವ 38 ವರ್ಷದ ಮುರಳಿ ವಿಜಯ್ ಕಳೆದ ಶುಕ್ರವಾರ ನಡೆದ ನೆಲ್ಲೈ ರಾಯಲ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದರು. ಮತ್ತೊಂದು ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ನಡೆಸುತ್ತಿದ್ದಾಗ, ಕ್ರಿಕೆಟ್ ಪ್ರಿಯರು ಮುರಳಿ ವಿಜಯ್ ಮುಂದೆ, “ಡಿಕೆ, ಡಿಕೆ” ಎಂದು ಕೂಗಿದ್ದಾರೆ. ಡಿಕೆ ಅಂದ್ರೆ ದಿನೇಶ್ ಕಾರ್ತಿಕ್ (Dinesh Karthik). ಡಿಕೆ ಹೆಸರನ್ನು ಕೂಗುವ ಮೂಲಕ ಮುರಳಿ ವಿಜಯ್ ಅವರಿಗೆ ಕ್ರಿಕೆಟ್ ಪ್ರಿಯರು ಭಾರೀ ಮುಜುಗರ ತಂದಿಟ್ಟಿದ್ದಾರೆ. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು “ಡಿಕೆ, ಡಿಕೆ” ಎಂದು ಕೂಗುತ್ತಿದ್ದಾಗ, ಮುರಳಿ ವಿಜಯ್ ಚಪ್ಪಾಳೆ ತಟ್ಟುತ್ತಾ, ಕೈ ಮುಗಿಯುತ್ತಿದ್ದ ದೃಶ್ಯ ಕಂಡು ಬಂದಿತ್ತು.

ಡಿಕೆ ಹೆಸರನ್ನು ಕೂಗಿದ್ರೆ ಮುರಳಿ ವಿಜಯ್”ಗೆ ಮುಜುಗರ ಯಾಕೆ? ಇದಕ್ಕೂ ಒಂದು ಕಾರಣವಿದೆ. ತಮಿಳುನಾಡು ಕ್ರಿಕೆಟರ್ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು. ಬಾಲ್ಯ ಸ್ನೇಹಿತರೂ ಹೌದು. ಆದರೆ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಖಿತಾ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದ ವಿಜಯ್, ಸ್ನೇಹಿತನಿಗೆ ಮೋಸ ಮಾಡಿದ್ದರು. ಕೊನೆಗೆ ಈ ವಿಚಾರ ದಿನೇಶ್ ಕಾರ್ತಿಕ್”ಗೆ ಗೊತ್ತಾಗಿ, ಪತ್ನಿಗೆ ಡೈವೋರ್ಸ್ ನೀಡಿದ್ದರು. ನಂತರ ನಿಖಿತಾ ಮತ್ತು ಮುರಳಿ ವಿಜಯ್ ಮದುವೆಯಾಗಿದ್ದರು. ಈ ಘಟನೆಯ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಡಿಕೆ, 2015ರಲ್ಲಿ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದರು. ಡಿಕೆ-ದೀಪಿಕಾ ದಂಪತಿಗೆ ಇತ್ತೀಚೆಗಷ್ಟೇ ಅವಳಿ ಮಕ್ಕಳು ಜನಿಸಿದ್ದಾರೆ.

ಸ್ನೇಹಿತನಿಗೆ ದೋಖಾ ಮಾಡಿದ ಮುರಳಿ ವಿಜಯ್ ಮುಂದೆ “ಡಿಕೆ ಡಿಕೆ” ಎಂದು ಕೂಗುವ ಮೂಲಕ TNPL ಕ್ರಿಕೆಟ್ ಪ್ರಿಯರು ವಿಜಯ್”ಗೆ ಹಳೆಯ ಘಟನೆಯನ್ನು ನಾವಿನ್ನೂ ಮರೆತಿಲ್ಲ ಎಂಬುದನ್ನು ನೆನಪಿಸಿದ್ದಾರೆ. 37ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್, ಸದ್ಯ ವೆಸ್ಟ್ ಇಂಡೀಸ್’ನಲ್ಲಿದ್ದು 5 ಪಂದ್ಯಗಳ ಟಿ20 ಸರಣಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : India Senior Women squad : ಬರ್ಮಿಂಗ್’ಹ್ಯಾಮ್ ತಲುಪಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಇದನ್ನೂ ಓದಿ : 40 Overs ODI Cricket : ಏಕದಿನ ಕ್ರಿಕೆಟ್ ಬೋರಿಂಗ್ ಬೋರಿಂಗ್ ; 40 ಓವರ್‌ಗಳಿಗೆ ಇಳಿಯಲಿದ್ಯಾ ಏಕದಿನ ಕ್ರಿಕೆಟ್.. ?

Cricket Fans chant DK name in front of Murali Vijay

Comments are closed.