Man Lives Atop Palm Tree :ಪತ್ನಿ ಕಾಟದಿಂದ ಬೇಸತ್ತು ಮರವೇರಿ ಕುಳಿತ ಭೂಪ :ಖಾಸಗಿತನಕ್ಕೆ ಧಕ್ಕೆಯೆಂದ ಗ್ರಾಮಸ್ಥರು

ಉತ್ತರ ಪ್ರದೇಶ : Man Lives Atop Palm Tree : ಗಂಡ – ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬ ಮಾತೊಂದಿದೆ. ನಮ್ಮ ಜೀವನ ಸಂಗಾತಿಯನ್ನು ಪ್ರೀತಿಸುವುದು ಅವರ ಮೇಲೆ ಮುನಿಸಿಕೊಳ್ಳುವುದು ಇವೆಲ್ಲ ಸರ್ವೇ ಸಾಮಾನ್ಯ. ಅನೇಕ ಬಾರಿ ಈ ಜಗಳಗಳು ಎರಡು ಮೂರು ದಿನ ಮಾತನಾಡದೇ ಮುಂದುವರಿಯುವುದು ಸಹ ಇರುತ್ತದೆ. ಕೆಲವೊಮ್ಮೆ ಗಂಡ ಹೆಂಡತಿ ನಡುವಿನ ಕಲಹ ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಿದ್ದೂ ಸಹ ಇದೆ.

ಆದರೆ ಉತ್ತರ ಪ್ರದೇಶದಲ್ಲಿ ನಡೆದ ಗಂಡ – ಹೆಂಡತಿ ಜಗಳ ನಡುವಿನ ಗಲಾಟೆಯ ಕತೆಯೊಂದು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಷ್ಟು ನಗುವಂತೆ ಮಾಡಿದೆ. ತನ್ನ ಪತ್ನಿಯು ತನ್ನೊಂದಿಗೆ ಗಲಾಟೆ ಮಾಡುತ್ತಾಳೆ ಎಂಬ ಭಯದಿಂದ ಪತಿಯು ತಾಳೆ ಮರದ ಮೇಲೇರಿ ಅಲ್ಲೇ ವಾಸಿಸಲು ಶುರುವಿಟ್ಟಿದ್ದಾನೆ. ಈ ವಿಚಾರ ತಿಳಿದ ನೆಟ್ಟಿಗರು ಪತಿ – ಪತ್ನಿ ಕಲಹ ಈ ರೀತಿಯ ತಿರುವುಗಳನ್ನೂ ಪಡೆದುಕೊಳ್ಳುತ್ತಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.


ಉತ್ತರ ಪ್ರದೇಶದ ಮೌ ಜಿಲ್ಲೆಯ ರಾಮ್​ ಪ್ರವೇಶ್​ ಎಂಬ ಹೆಸರಿನ ವ್ಯಕ್ತಿಯು ಕಳೆದೊಂದು ತಿಂಗಳಿನಿಂದ ಗ್ರಾಮದ ಹೃದಯ ಭಾಗದಲ್ಲಿರುವ ತಾಳೆ ಮರವೊಂದರ ಮೇಲೆರಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಈ ಬಗ್ಗೆ ರಾಮ್​ ಪ್ರವೇಶ್​ ತಂದೆ ವಿಶುಂರಾಮ್​ ಪ್ರತಿಕ್ರಿಯಿಸಿದ್ದು ನಿರಂತರವಾಗಿ ಪತ್ನಿಯೊಂದಿಗೆ ಜಗಳವಾಗುತ್ತಿದ್ದ ಹಿನ್ನೆಲೆಯಲ್ಲಿ ರಾಮ್ ಪ್ರವೇಶ್​​ ಈ ರೀತಿಯ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳಿದರು.


ರಾಮನ ಪತ್ನಿಯು ಪ್ರತಿನಿತ್ಯ ಆತನಿಗೆ ಥಳಿಸುತ್ತಿದ್ದಳು. ಪತ್ನಿಯ ನಿರಂತರ ಕಾಟದಿಂದ ಬೇಸತ್ತ ರಾಮ್​ ಪ್ರವೇಶ್​​ ತಾಳೆ ಮರದ ಮೇಲೆ ವಾಸ ಮಾಡಲು ನಿರ್ಧರಿಸಿದನು. ರಾಮ್​ ಈ ರೀತಿ ವಾಸ ಮಾಡುತ್ತಿರುವ ಬಗ್ಗೆ ಇಲ್ಲಿನ ಗ್ರಾಮಸ್ಥರೂ ಸಹ ಬೇಸರ ವ್ಯಕ್ತಪಡಿಸಿದ್ದಾರೆ.


ಈ ಮರವು ಸುಮಾರು 100 ಅಡಿ ಎತ್ತರದಲ್ಲಿದೆ. ಅಲ್ಲೇ ಸಮೀಪದಲ್ಲಿರುವ ಕೊಳದಲ್ಲಿ ಗ್ರಾಮದ ಮಹಿಳೆಯರು ಸ್ನಾನ ಮಾಡುತ್ತಾರೆ. ರಾಮ್​ ಪ್ರವೇಶ್​ ಈ ರೀತಿ ಮರವೇರಿರುವುದರಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಇಲ್ಲಿನ ಮಹಿಳೆಯರು ದೂರಿದ್ದಾರೆ. ಅಲ್ಲದೇ ನಮ್ಮ ಮನೆಯ ಅಂಗಳವೂ ಈತನಿಗೆ ಸ್ಪಷ್ಟವಾಗಿ ಕಾಣುವುದರಿಂದ ನಮ್ಮ ಮನೆಯ ಎಲ್ಲಾ ಒಳ ವಿಚಾರಗಳು ಈತನಿಗೆ ತಿಳಿಯುತ್ತೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ .
ಗ್ರಾಮಸ್ಥರು ರಾಮ್​ ಪ್ರವೇಶ್​ನನ್ನು ಮರದಿಂದ ಕೆಳಗೆ ಇಳಿಸಲು ಅನೇಕ ಬಾರಿ ಯತ್ನಿಸಿದ್ದಾರೆ. ಆದರೆ ಈತ ಗ್ರಾಮಸ್ಥರ ಕಡೆಗೆ ಇಟ್ಟಿಗೆಗಳನ್ನು ಎಸೆಯುವ ಮೂಲಕ ಹಲ್ಲೆ ಮಾಡಿದ್ದಾರೆ. ರಾಮ್​ನ ಕುಟುಂಬಸ್ಥರು ಹಗ್ಗದ ಸಹಾಯದಿಂದ ಈತನಿಗೆ ನಿತ್ಯ ಆಹಾರವನ್ನು ನೀಡುತ್ತಾರೆ.

ಇದನ್ನು ಓದಿ : Muruga Shri Swamiji : ಮುರುಘಾ ಶ್ರೀಗಳಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಕೃತ್ಯದ ಮಾಹಿತಿ ಎಳೆಎಳೆಯಾಗಿ ಬಿಚ್ಚಿಟ್ಟ ಒಡನಾಡಿ ಸಂಸ್ಥೆ

ಇದನ್ನೂ ಓದಿ : Kerala NEET exam : ಒಳ ಉಡುಪು ತೆಗೆದು ಪರೀಕ್ಷೆ ಬರೆದವ್ರಿಗೆ, ಮತ್ತೊಂದು ಚಾನ್ಸ್

Tired of Daily Quarrels With Wife, This UP Man Lives Atop Palm Tree Now

Comments are closed.