Rohit Sharma Angry on Journalists : ನಿಮ್ಮಲ್ಲಿ ಚಹಲ್-ಧನಶ್ರೀ ದಾಂಪತ್ಯಕ್ಕೆ ಹುಳಿ ಹಿಂಡಿದ್ದು ಯಾರು..? ಪತ್ರಕರ್ತರನ್ನು ಪ್ರಶ್ನಿಸಿದ ರೋಹಿತ್ ಶರ್ಮಾ

ದುಬೈ: (Rohit Sharma Angry on Journalists) ಭಾರತ ಕ್ರಿಕೆಟ್ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ (Chahal Dhanshree marriage) ಅವರ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ವಿಚಾರ ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ನಂತರ ಸ್ವತಃ ಚಹಲ್ ಅವರೇ ಇದರ ಬಗ್ಗೆ ಸ್ಪಷ್ಟೀಕರಣ ನೀಡಿ, “ನಮ್ಮ ಮಧ್ಯೆ ಯಾವ ಸಮಸ್ಯೆಯೂ ಆಗಿಲ್ಲ, ಇದನ್ನು ಇಲ್ಲಿಗೇ ಬಿಟ್ಟುಬಿಡಿ” ಎಂದಿದ್ದರು. asia cup 2022

ಚಹಲ್-ಧನಶ್ರೀ ದಾಂಪತ್ಯಕ್ಕೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್’ನಲ್ಲೂ ಸದ್ದು ಮಾಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ” ಚಹಲ್-ಧನಶ್ರೀ ದಾಂಪತ್ಯಕ್ಕೆ ಹುಳಿ ಹಿಂಡಿದ್ದು ಯಾರು” ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯಕ್ಕೆ (India Vs Pakistan Asia Cup 2022) ಪೂರ್ವಭಾವಿಯಾಗಿ ಭಾರತ ತಂಡ ದುಬೈ ಶುಕ್ರವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿತ್ತು. ಭಾರತದ ಕೆಲ ಪತ್ರಕರ್ತರೂ ಅಲ್ಲಿದ್ದರು. ಈ ವೇಳೆ ಪತ್ರಕರ್ತರ ಬಳಿಗೆ ಯುಜೇಂದ್ರ ಚಹಲ್ ಜೊತೆ ಆಗಮಿಸಿದ ರೋಹಿತ್ ಶರ್ಮಾ, ಈ ಹಿಂದೆ ಹಬ್ಬಿದ್ದ ಗಾಸಿಪ್ ಬಗ್ಗೆ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ. “ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ನಡುವಿನ ಸಂಬಂಧದ ಬಗ್ಗೆ ಮೊದಲ ವರದಿ ಮಾಡಿದವರು ಯಾರು? ಇಂತಹ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದವರು ನಿಮ್ಮಲ್ಲಿ ಯಾರು” ಎಂದು ರೋಹಿತ್ ಶರ್ಮಾ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ರಕರ್ತರು ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ಯುಜ್ವೇಂದ್ರ ಚಹಲ್ ಪತ್ನಿ ಧನಶ್ರೀ ತಮ್ಮ ಹೆಸರಿನ ಮುಂದಿದ್ದ ಚಹಲ್ ಎಂಬ ಸರ್’ನೇಮ್ ಅನ್ನು ಇನ್’ಸ್ಟಾಗ್ರಾಂ ಅಕೌಂಟ್’ನಿಂದ ತೆಗೆದು ಹಾಕಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೇ ಹೊತ್ತಲ್ಲಿ ಯುಜ್ವೇಂದ್ರ ಚಹಲ್ ತಮ್ಮ ಇನ್’ಸ್ಟಾಗ್ರಾಂನಲ್ಲಿ “ಹೊಸ ಜೀವನ ಶುರುವಾಗುತ್ತಿದೆ” ಎಂದು ಬರೆದುಕೊಂಡಿದ್ದರು. ಇದು ಮತ್ತಷ್ಟು ಕುತೂಹಲಗಳನ್ನು ಹುಟ್ಟು ಹಾಕಿತ್ತು. ಚಹಲ್ ಮತ್ತು ಧನಶ್ರೀ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದ್ದವು. ನಂತರ ಸ್ವತಃ ಚಹಲ್ ಅವರೇ ಇನ್’ಸ್ಟಾಗ್ರಾಂ ಪೋಸ್ಟ್ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ : Rahul Dravid Returns : ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್, ಕೋವಿಡ್‌ನಿಂದ ಚೇತರಿಸಿಕೊಂಡ ಕೋಚ್ ದ್ರಾವಿಡ್ ವಾಪಸ್

ಇದನ್ನೂ ಓದಿ : Asia Cup 2022 : ಭಾರತ Vs ಪಾಕ್ ಮೆಗಾ ಫೈಟ್, ಸೇಡಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ XI ಔಟ್

Rohit Sharma Angry on Journalists Chahal Dhanshree marriage Rohit Sharma questioned journalists asia cup 2022 ind vs pak

Comments are closed.