ಸಿಹಿತಿಂಡಿ ಅಂದರೆ ಅನೇಕರು ಬಾಯಲ್ಲಿ ನೀರೂರಿಸುತ್ತಾರೆ. ಈ ಸಿಹಿ ತಿಂಡಿಗಳನ್ನು ಪಡೆಯಬೇಕು ಅಂದರೆ ಅಬ್ಬಬ್ಬಾ ಅಂದರೆ ನೀವು ಎಷ್ಟರ ಮಟ್ಟಿಗೆ ರಿಸ್ಕ್ನ್ನು ತೆಗೆದುಕೊಳ್ಳಲು ತಯಾರಿದ್ದೀರಿ..? ಎಂದು ಕೇಳಿದರೆ ನಿಮಗೆ ತಮಾಷೆ ಎನಿಸಬಹುದು. ಏಕೆಂದರೆ ಯಾರಾದರೂ ತಿನ್ನುವ ವಸ್ತುವಿಗಾಗಿ ರಿಸ್ಕ್ ತೆಗೆದುಕೊಳ್ತಾರಾ ಎಂದು ನಿಮಗೆ ಎನಿಸಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯು ಸಿಹಿ ತಿಂಡಿ ಬೇಕೆಂದು ಏಕಾಏಕಿ ವಿದ್ಯುತ್ ಕಂಬ ಏರಿದ್ದಾನೆ..! man climbs atop electricity tower
ಹೌದು..! ಬಿಹಾರದ ಮುಜಾಫರ್ ನಗರದ ಬರ್ಮಾತ್ಪುರ ಎಂಬಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ತನಗೆ ಸಿಹಿ ತಿಂಡಿ ಹಾಗೂ ಮೊಬೈಲ್ ಫೋನ್ ಬೇಕೆಂದು ಹಠ ಹಿಡಿದ ವ್ಯಕ್ತಿಯೊಬ್ಬ ಏಕಾಏಕಿ ವಿದ್ಯುತ್ ಕಂಬವನ್ನೇರಿ ಪ್ರತಿಭಟಿಸಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ಇಡೀ ಗ್ರಾಮಕ್ಕೆ ಒಂದಿಡೀ ದಿನ ವಿದ್ಯುತ್ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಗ್ರಾಮಸ್ಥರು ಕೂಡಲೇ ಈ ವಿಚಾರವನ್ನು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆಂದು ಅಗ್ನಿಶಾಮಕದಳದವರನ್ನು ಕರೆಸಿದ್ದಾರೆ. ಆದರೆ ಯಾರ ಮನವಿ, ಯಾರ ತಾಕೀತಿಗೂ ಕ್ಯಾರೆ ಎನ್ನದ ಈತ ವಿದ್ಯುತ್ ಕಂಬದ ಮೇಲೆರಿ ವಿವಿಧ ಸಾಹಸ ಪ್ರದರ್ಶಿಸಿದ್ದಾನೆ. ತಾನು ಅಷ್ಟು ಎತ್ತರದಿಂದ ಕೆಳಗೆ ಬೀಳಬಹುದು ಎಂಬುದನ್ನೂ ಲೆಕ್ಕಿಸಿದ ಸ್ಟಂಟ್ ತೋರಿಸಿದ್ದಾನೆ.
ವಿದ್ಯುತ್ ಕಂಬವನ್ನೇರಿದವನನ್ನು ಕೆಳಗೆ ಇಳಿಸಿಲು ವಿಫಲವಾದ ಅಗ್ನಿಶಾಮಕದಳ ಸಿಬ್ಬಂದಿ ಕೈಚೆಲ್ಲಿದ್ದಾರೆ. ಬಳಿಕ ಎಸ್ಡಿಆರ್ಎಫ್ ಸಿಬ್ಬಂದಿ ಸಹ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ವ್ಯಕ್ತಿ ಕೊರೆವ ಚಳಿಯಲ್ಲಿ ಒಂದಿಡೀ ದಿನ ವಿದ್ಯುತ್ ಕಂಬದ ಮೇಲೆ ಕುಳಿತಿದ್ದಾನೆ.
ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರು ಆತನೊಬ್ಬ ಮಾನಸಿಕ ಅಸ್ವಸ್ಥ ಎಂದು ಹೇಳಿದ್ದಾರೆ. ಅಂದಹಾಗೆ ಈತ ಈ ರೀತಿ ಸರ್ಕಸ್ ಮಾಡಿರೋದು ಇದೇ ಮೊದಲೇನಲ್ಲವಂತೆ. ಅನೇಕ ಬಾರಿ ಹೀಗೆ ವಿದ್ಯುತ್ ಕಂಬವನ್ನೇರಿ ಹುಚ್ಚಾಟ ತೋರಿದ್ದಾನೆ ಎಂದು ಹೇಳಿದ್ದಾರೆ.
ಇದನ್ನು ಓದಿ :Gujarat :ಶ್ವಾನಕ್ಕೆ ಪತ್ನಿ ಹೆಸರಿಟ್ಟಿದ್ದಾರೆಂದು ಆರೋಪಿಸಿ ನೆರೆಮನೆಯಾಕೆಗೆ ಬೆಂಕಿ ಹಚ್ಚಿದ ಪಾಪಿ..!
ಇದನ್ನೂ ಓದಿ : Odisha couple takes oath : ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ..!
[VIRAL VIDEO] Bihar: Mentally unstable man climbs atop electricity tower; demands sweets and mobile