Hospital In JCB :ಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್​ : ಜೆಸಿಬಿಯಲ್ಲಿ ಗಾಯಾಳುವನ್ನು ಸಾಗಿಸಿದ ಗ್ರಾಮಸ್ಥರು, ವಿಡಿಯೋ ವೈರಲ್​

ಮಧ್ಯ ಪ್ರದೇಶ : Hospital In JCB : ರಸ್ತೆ ಅಪಘಾತಗಳು ನಡೆದಂತಹ ಸಂದರ್ಭದಲ್ಲಿ ಆಗುವ ದೊಡ್ಡ ಸಮಸ್ಯೆ ಅಂದರೆ ಆಸ್ಪತ್ರೆಗೆಳಿಗೆ ರೋಗಿಗಳನ್ನು ದಾಖಲು ಮಾಡುವುದು. ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರು ನಮಗ್ಯಾಕೆ ತೊಂದರೆ ಎಂದು ಗಾಯಾಳುಗಳ ಗೋಜಿಗೆ ಹೋಗೋದಿಲ್ಲ. ಇನ್ನೂ ಕೆಲವು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್​ ಬರಲು ವಿಳಂಬವಾಗಿ ಗಾಯಾಳುಗಳು ಸಾವನ್ನಪ್ಪಿದ್ದೂ ಸಹ ಇದೆ. ಅದೇ ರೀತಿ ಮಧ್ಯ ಪ್ರದೇಶದಲ್ಲಿ ರಸ್ತೆ ಅಪಘಾತ ನಡೆದ ಸ್ಥಳಕ್ಕೆ ಆ್ಯಂಬುಲೆನ್ಸ್​ ಸರಿಯಾದ ಸಮಯಕ್ಕೆ ತಲುಪದ ಹಿನ್ನೆಲೆಯಲ್ಲಿ ಗಾಯಾಳುವನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು ವಿಡಿಯೋ ವೈರಲ್ ಆಗಿದೆ.


ಕಟ್ನಿ ಜಿಲ್ಲೆಯ ಬರ್ಹಿ ಎಂಬಲ್ಲಿ ವ್ಯಕ್ತಿಯೊಬ್ಬ ಬೈಕ್​ ಆ್ಯಕ್ಸಿಡೆಂಟ್​ಗೆ ಒಳಗಾಗಿದ್ದ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ ಆ ಆ್ಯಂಬುಲೆನ್ಸ್​ ಸಿಗದ ಕಾರಣ ಹತ್ತಿರದ ಪಟ್ಟಣದಲ್ಲಿದ್ದ ಆ್ಯಂಬುಲೆನ್ಸ್​ ಒಂದು ಅಪಘಾತ ನಡೆದ ಸ್ಥಳಕ್ಕೆ ಆಗಮಿಸುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಅಪಘಾತ ಸ್ಥಳ ತಲುಪಲು ಈ ಆಂಬುಲೆನ್ಸ್​ಗೂ ಸಾಧ್ಯವಾಗಿರಲಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿ ಪ್ರದೀಪ್​ ಮಧಿಯಾ ಹೇಳಿದ್ದಾರೆ.


ಈ ವ್ಯಕ್ತಿಯು ಬಹ್ರಿ ಎಂಬಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ. ಆದರೆ ಆ ಸಮಯದಲ್ಲಿ ಆಂಬುಲೆನ್ಸ್​ ಸೇವೆ ಆ ಪ್ರದೇಶಕ್ಕೆ ಕಾರಣಾಂತರಗಳಿಂದ ಲಭ್ಯವಿರಲಿಲ್ಲ. ಹೀಗಾಗಿ ಹತ್ತಿರದ ಪಟ್ಟಣದಿಂದ ಆಂಬುಲೆನ್ಸ್​ ಅಪಘಾತ ನಡೆದ ಸ್ಥಳಕ್ಕೆ ಬರುವುದರಲ್ಲಿತ್ತು. ಆದರೆ ಈ ಆ್ಯಂಬುಲೆನ್ಸ್​ ಬರುವುದೂ ಕೂಡ ವಿಳಂಬವಾದ ಹಿನ್ನೆಲೆಯಲ್ಲಿ ಗಾಯಾಳುವನ್ನು ಬುಲ್ಡೋಜರ್​ನಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಪ್ರದೀಪ್​ ಮಧಿಯಾ ಹೇಳಿದ್ದಾರೆ.


ಇದೇ ವಿಚಾರವಾಗಿ ಮಾತನಾಡಿದ ಸ್ಥಳೀಯ ಪಂಚಾಯತ್​ ಸದಸ್ಯ ಹಾಗೂ ಜೆಸಿಬಿ ಮಾಲೀಕ ಪುಷ್ಪೇಂದ್ರ ವಿಶ್ವಕರ್ಮ, ಖಿತೌಲಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯ ಕಾಲು ಮುರಿದು ಹೋಗಿತ್ತು. ಆದರೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪುವಲ್ಲಿ ಆ್ಯಂಬುಲೆನ್ಸ್​ಗೆ ಸಾಧ್ಯವಾಗಿರಲಿಲ್ಲ. ಆಟೋ ರಿಕ್ಷಾ ಚಾಲಕರು ಗಾಯಾಳುವಿಗೆ ಸಹಾಯ ಮಾಡಲು ತಯಾರಿರಲಿಲ್ಲ. ಹೀಗಾಗಿ ನನ್ನ ಜೆಸಿಬಿ ಯಂತ್ರದಲ್ಲಿಯೇ ಮಲಗಿಸಿ ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾಯ್ತು ಎಂದು ಹೇಳಿದ್ದಾರೆ.

ಇದನ್ನು ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ

ಇದನ್ನೂ ಓದಿ : New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್

Viral: Man Carried To Hospital In JCB After Ambulance Got Late In Madhya Pradesh

Comments are closed.