ಭಾನುವಾರ, ಏಪ್ರಿಲ್ 27, 2025
HomeCrimeteacher sleeps in classroom : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ...

teacher sleeps in classroom : ತರಗತಿಯಲ್ಲೇ ನಿದ್ದೆ ಹೋದ ಶಿಕ್ಷಕಿ: ಬೀಸಣಿಗೆಯಲ್ಲಿ ಗಾಳಿ ಬೀಸಿದ ವಿದ್ಯಾರ್ಥಿನಿ

- Advertisement -

ಬಿಹಾರ :teacher sleeps in classroom: ಭವಿಷ್ಯದ ಪ್ರಜೆಗಳನ್ನು ರೂಪಿಸುವಂತಹ ದೊಡ್ಡ ಮಟ್ಟದ ಜವಾಬ್ದಾರಿಯು ಶಿಕ್ಷಕರ ಮೇಲಿರುತ್ತದೆ. ಶಾಲೆಗೆ ಬರುವ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಬೋಧನೆಯನ್ನು ಮಾಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಮಾರ್ಗವನ್ನು ತೋರಿಸುವ ಕಾರ್ಯ ಶಿಕ್ಷಕರದ್ದಾಗಿರುತ್ತದೆ. ಆದರೆ ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತಿದ್ದ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಮಕ್ಕಳ ಎದುರಲ್ಲೇ ಗಡ್ಡದಾಗಿ ನಿದ್ದೆ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ, ಈ ವಿಡಿಯೋವನ್ನು ಬಿಹಾರದ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಶಿಕ್ಷಕಿಯು ತನ್ನ ಕುರ್ಚಿಯ ಮೇಲೆ ಆರಾಮಾಗಿ ಕುಳಿತು ಗಾಢ ನಿದ್ದೆ ಮಾಡುತ್ತಿದ್ದರೆ ಶಾಲಾ ವಿದ್ಯಾರ್ಥಿನಿ ಯೋರ್ವಳು ಬೀಸಣಿಕೆಯಲ್ಲಿ ಮಲಗಿದ್ದ ಶಿಕ್ಷಕಿಗೆ ಗಾಳಿ ಬೀಸುತ್ತಿದ್ದಾಳೆ. ತರಗತಿಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಸುಮ್ಮನೇ ಕುಳಿತಿರುವುದನ್ನು ಕಾಣಬಹುದಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಿ ಪುರೈನಾ ಗ್ರಾಮದ ಕತರ್ವಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಸಾಕಷ್ಟು ಸೋಶಿಯಲ್​ ಮೀಡಿಯಾ ಬಳಕೆದಾರರು ಕೆಲಸದ ಸ್ಥಳದಲ್ಲಿ ನಿದ್ದೆ ಮಾಡಿರುವ ಶಿಕ್ಷಕಿಯ ವರ್ತನೆಗೆ ಹಿಡಿಶಾಪ ಹಾಕಿದ್ದಾರೆ. ಇಂತಹ ಶಿಕ್ಷಕಿಯನ್ನು ಅಮಾನತು ಗೊಳಿಸಬೇಕೆಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆಯು ಎಂದಿಗೂ ಸುಧಾರಿಸುವುದಿಲ್ಲ ಎಂದು ತೋರುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ .


ಈ ವೈರಲ್​ ವಿಡಿಯೋದಲ್ಲಿರುವ ಶಿಕ್ಷಕಿಯನ್ನು ಬಬಿತಾ ಕುಮಾರಿ ಎಂದು ಗುರುತಿಸಲಾಗಿದೆ. ತರಗತಿಯಲ್ಲಿ ಏಕೆ ನಿದ್ದೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಶಿಕ್ಷಕಿಯು ನನಗೆ ಹುಷಾರಿಲ್ಲದ ಕಾರಣ ನಾನು ತರಗತಿಯಲ್ಲಿ ಕುರ್ಚಿಯ ಮೇಲೆ ನಿದ್ರಿಸುತ್ತಿದ್ದೆ ಎಂದು ಸಬೂಬು ನೀಡಿದ್ದಾರೆ.

ಇದನ್ನು ಓದಿ : accident in barmer : ಎಸ್​ಯುವಿ – ಟ್ರಕ್​ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನ ದುರ್ಮರಣ

ಇದನ್ನೂ ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

Watch: Bihar teacher sleeps in classroom as student fans her

RELATED ARTICLES

Most Popular