Rohit chakratirtha : ದ್ವಿತೀಯ PUC ಪಠ್ಯ ಪರಿಷ್ಕರಣಾ ಸಮಿತಿಯಿಂದ ರೋಹಿತ್​ ಚಕ್ರತೀರ್ಥಗೆ ಕೊಕ್​

ಬೆಂಗಳೂರು : Rohit chakratirtha : ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥರನ್ನು ರಾಜ್ಯ ಶಿಕ್ಷಣ ಇಲಾಖೆಯು ಕೈ ಬಿಟ್ಟಿದೆ. ಪಠ್ಯ ಪರಿಷ್ಕರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರವು ರೋಹಿತ್​ ಚಕ್ರತೀರ್ಥರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆದರೆ ರೋಹಿತ್​ ಚಕ್ರತೀರ್ಥ ಪಠ್ಯ ಪರಿಷ್ಕರಣಾ ಸಮಿತಿಗೆ ನೇಮಕವಾಗುತ್ತಿದ್ದಂತೆಯೇ ವಿರೋಧಗಳ ಸುರಿಮಳೆಯೇ ಎದುರಾಗಿತ್ತು. ಇವೆಲ್ಲವನ್ನು ಗಮನಿಸಿದ ರಾಜ್ಯ ಸರ್ಕಾರವು ಇದೀಗ ರೋಹಿತ್​ ಚಕ್ರತೀರ್ಥರಿಗೆ ಪಿಯು ಪಠ್ಯ ಪರಿಷ್ಕರಣಾ ಸಮಿತಿಯಿಂದ ಗೇಟ್​ಪಾಸ್​ ನೀಡಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಮಾಹಿತಿ ನೀಡಿದ್ದಾರೆ.

ರೋಹಿತ್​ ಚಕ್ರತೀರ್ಥ ದ್ವಿತೀಯ ಪಿಯುಸಿ ಪಠ್ಯ ಪರಿಷ್ಕರಣೆ ಮಾಡುವಷ್ಟು ದೊಡ್ಡ ಮೇಧಾವಿಯಲ್ಲ. ಅಂತರ್ಜಾಲದಲ್ಲಿ ಹುಡುಕಿದರೆ ಇವರ ಬಗ್ಗೆ ಒಂದು ಒಳ್ಳೆಯ ವಿಚಾರ ಸಿಗೋದಿಲ್ಲ. ಇವರ ಬೋಧನೆಗಳಿಗೆ ಯುಟ್ಯೂಬ್​ನಲ್ಲಿ 20 ವೀವ್ಸ್​ ಬರೋದಿಲ್ಲ. ಇಂಥವರನ್ನು 1 ಕೋಟಿ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪಠ್ಯ ಪರಿಷ್ಕರಣಾ ಸಮಿತಿಗೆ ಸೇರಿಸುತ್ತೀರಾ ಎಂದು ಕಾಂಗ್ರೆಸ್​ ಆಕ್ರೋಶ ಹೊರ ಹಾಕಿತ್ತು.

ಈ ಎಲ್ಲಾ ವಿರೋಧಗಳನ್ನು ಗಮನಿಸಿರುವ ರಾಜ್ಯ ಸರ್ಕಾರವು ಇದೀಗ ರೋಹಿತ್​ ಚಕ್ರತೀರ್ಥರನ್ನು ಕೈ ಬಿಡಲು ನಿರ್ಧರಿಸಿದೆ. ದ್ವಿತೀಯ ಪಿಯುಸಿಯಲ್ಲಿ ಹೊಸ ಧರ್ಮಗಳ ಹೊಸ ಪಠ್ಯವನ್ನು ಸರ್ಕಾರ ಪರಿಷ್ಕರಣೆ ಮಾಡಿತ್ತು. ಇದರ ಜವಾಬ್ದಾರಿಯನ್ನು ರೋಹಿತ್​ ಚಕ್ರತೀರ್ಥರೇ ವಹಿಸಿದ್ದರು. ಆದರೆ ಈ ಎಲ್ಲಾ ವಿವಾದಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರೋಹಿತ್​ ಚಕ್ರವರ್ತಿ ನೇತೃತ್ವದ ಸಮಿತಿಯನ್ನು ಕೈ ಬಿಡಲು ಶಿಕ್ಷಣ ಸಚಿವ ಬಿ,ಸಿ ನಾಗೇಶ್​ ಮುಂದಾಗಿದ್ದಾರೆ, ಅಲ್ಲದೇ ಸಮಿತಿಯನ್ನು ವಿಜರ್ಸನೆ ಮಾಡಿರುವ ಹಿನ್ನಲೆಯಲ್ಲಿ ಈ ಸಮಿತಿಯ ಯಾವುದೇ ವರದಿಯನ್ನು ಮಾನ್ಯ ಮಾಡುವುದಿಲ್ಲ ಎಂದು ಬಿ.ಸಿ ನಾಗೇಶ್​ ಹೇಳಿದ್ದಾರೆ.

ಇದನ್ನು ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ

ಇದನ್ನೂ ಓದಿ : Saurav Ganguly : ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ : ಸ್ಪಷ್ಟನೆ ಕೊಟ್ಟ ಶಾ

ಇದನ್ನೂ ಓದಿ : uttara pradesha shruti sharma : ಯುಪಿಎಸ್​ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್​ ಪಡೆದ ಶ್ರುತಿ ಶರ್ಮಾ ಬಗ್ಗೆ ಇಲ್ಲಿದೆ ಮಾಹಿತಿ

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Rohit chakratirtha now out of puc textbook revision committee says education minister bc nagesh

Comments are closed.