ಆಹಾರವನ್ನು ಸೇವಿಸಬೇಕಾದರೆ ಕೊಂಚ ಹುಷಾರಾಗಿ ಇರಬೇಕು. ಗಂಟಲಿಗೆ ಆಹಾರ ಸಿಕ್ಕು ಜೀವ ಕಳೆದುಕೊಂಡ ಅನೇಕ ಉದಾಹರಣೆಗಳನ್ನು ನಾವು ಕೇಳಿದ್ದೇವೆ. ಅಂತಹದ್ದೇ ಒಂದು ವಿಚಿತ್ರ ಘಟನೆಯು ಬ್ರೆಜಿಲ್ನ (BRAZIL) ರೆಸ್ಟಾರೆಂಟ್ ಒಂದರಲ್ಲಿ ನಡೆದಿದೆ. ರೆಸ್ಟಾರೆಂಟ್ ಒಂದರಲ್ಲಿ ಆಹಾರ ಸೇವಿಸುತ್ತಿದ್ದ ವ್ಯಕ್ತಿಯ ಗಂಟಲಿನಲ್ಲಿ ಆಹಾರ ಸಿಲುಕಿಕೊಂಡ (food stuck throat) ಪರಿಣಾಮ ಆತ ಒದ್ದಾಡಿದಾನೆ. ಕೂಡಲೇ ಆತನ ಸಹಾಯಕ್ಕೆ ಧಾವಿಸಿದ ಹೋಟೆಲ್ ಮಾಣಿ ಸೇರಿದಂತೆ ಅನೇಕರು ಗ್ರಾಹಕನ ಜೀವವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೇಯ್ಟರ್ ಹಾಗೂ ಹೆದ್ದಾರಿ ಪೊಲೀಸ್ ಸಹಾಯದಿಂದ 39 ವರ್ಷದ ವ್ಯಕ್ತಿಯ ಪ್ರಾಣ ಉಳಿದಿದೆ ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ. ವೈರಲ್ ವಿಡಿಯೋದಲ್ಲಿ 38 ವರ್ಷದ ವ್ಯಕ್ತಿಯು ಆಹಾರ ಸೇವಿಸಿದ ಬಳಿಕ ಉಸಿರುಗಟ್ಟಿದಂತೆ ಮಾಡಿದ್ರು. ಸುತ್ತಮತ್ತಲಿನ ಗ್ರಾಹಕರು ಆತನನ್ನು ಎಬ್ಬಿಸಲು ಯತ್ನಿಸಿದ್ರು. ವೇಯ್ಟರ್ನ್ನು ಸಹಾಯಕ್ಕೆ ಕರೆದಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಹೆದ್ದಾರಿ ಪೊಲೀಸರು ಕೂಡ ಆಗಮಿಸಿದ ವ್ಯಕ್ತಿಯ ಜೀವವನ್ನು ಕಾಪಾಡಿದ್ದಾರೆ.
A waiter and a highway police officer saved the life of a 38-year old man who passed out after choking on his food at a restaurant in São Paulo, Brazil last Friday.
— GoodNewsCorrespondent (@GoodNewsCorres1) December 2, 2021
pic.twitter.com/LlHa3uwrE9
ಈ ವಿಡಿಯೋ ನೋಡಿದ ನೆಟ್ಟಿಗರು ಹೋಟೆಲ್ನ ಸಿಬ್ಬಂದಿ ಹಾಗೂ ಹೆದ್ದಾರಿ ಪೊಲೀಸರನ್ನು ರಿಯಲ್ ಹೀರೋ ಎಂದು ಕರೆದಿದ್ದಾರೆ. ಇನ್ನೊಬ್ಬರು ದೇವರಿಗೆ ನೇರವಾಗಿ ಸಹಾಯ ಮಾಡಲು ಆಗುವುದಿಲ್ಲ ಎಂದು ಇಂಥವರನ್ನು ಸೃಷ್ಟಿಸಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ :Uttar Pradesh: ತೆಂಗಿನಕಾಯಿ ಒಡೆಯುತ್ತಲೇ ಬಿರುಕುಬಿಟ್ಟ ಹೊಸ ರಸ್ತೆ..! ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮುಖಭಂಗ
ಇದನ್ನು ಓದಿ : Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ
WATCH: Food gets stuck in man’s throat; hotel waiter and police officer come to his rescue; Twitterati call them ‘heroes’