IND vs NZ 2nd Test Day 2 Live : ಅಶ್ವಿನ್‌, ಸಿರಾಜ್‌, ಅಕ್ಷರ್‌ ಪಟೇಲ್‌ ಆರ್ಭಟ : 62 ರನ್‌ಗೆ ನ್ಯೂಜಿಲೆಂಡ್‌ ಸರ್ವಪತನ

ಮುಂಬೈ : ಭಾರತೀಯ ಬೌಲರ್‌ಗಳಾದ ಆರ್.ಅಶ್ವಿನ್‌, ಮೊಹಮ್ಮದ್‌ ಸಿರಾಜ್‌ ಹಾಗೂ ಅಕ್ಷರ್‌ ಪಟೇಲ್‌ ಅವರ ಮಾರಕ ದಾಳಿಗೆ ನ್ಯೂಜಿಲೆಂಡ್‌ ತತ್ತರಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌ (IND vs NZ 2nd Test Day 2 Live) ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಕೇವಲ 62 ರನ್‌ಗಳಿಗೆ ಸರ್ವ ಪತನ ಕಂಡಿದೆ. ನ್ಯೂಜಿಲೆಂಡ್‌ ಬೌಲರ್‌ ಅಜಾಜ್‌ ಪಟೇಲ್‌ (Ajaz Patel) 10 ವಿಕೆಟ್‌ ಪಡೆದು ವಿಶ್ವ ದಾಖಲೆ ಬರೆದ ಬೆನ್ನಲ್ಲೇ ಭಾರತೀಯ ಬೌಲರಗಳು ಆರ್ಭಟಿಸಿದ್ದಾರೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. ಭಾರತ ನೀಡಿದ 326 ರನ್‌ ಬೆನ್ನತ್ತಿದ ನ್ಯೂಜಿಲೆಂಡ್‌ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ನ್ಯೂಜಿಲೆಂಡ್‌ ಆರಂಭಿಕರಾದ ಲಾಂಥಮ್‌, ವಿಲ್‌ ಯಂಗ್‌ ಹಾಗೂ ರಾಸ್‌ ಟೇಲರ್‌ಗೆ ಫೆವಿಲಿಯನ್‌ ಹಾದಿ ತೋರಿಸಿದ್ದರು.

ನಂತರ ಸ್ಪಿನ್ನರ್‌ಗಳಾದ ಅಶ್ವಿನ್‌ ಹಾಗೂ ಅಕ್ಷರ್‌ ಪಟೇಲ್‌ ಆರ್ಭಟಿಸೋದಕ್ಕೆ ಶುರು ಮಾಡಿದ್ರು. ಡಿ. ಮಿಚೆಲ್‌ಗೆ ಅಕ್ಷರ್‌ ಪಟೇಲ್‌ಗೆ ಔಟಾದ್ರೆ ಹೆನ್ರಿ ನಿಕೋಲಸ್‌ ಅವರನ್ನು ಅಶ್ವಿನ್‌ ಬಲಿ ಪಡೆದ್ರು. ಜಿಮಿಸನ್‌ 17 ರನ್‌ ಹೊರತು ಪಡಿಸಿದ್ರೆ ಉಳಿದ ಯಾವುದೇ ಆಟಗಾರರು ಕೂಡ ಎರಡಂಕಿ ಮೊತ್ತವನ್ನು ತಲುಪಲಿಲ್ಲ. ಆರ್.‌ ಅಶ್ವಿನ್‌ 8 ಓವರ್‌ಗಳಲ್ಲಿ 8 ರನ್‌ ನೀಡಿ 4 ವಿಕೆಟ್‌ ಪಡೆದುಕೊಂಡ್ರೆ, ಸಿರಾಜ್‌ 4 ಓವರ್‌ಗಳಲ್ಲಿ 19ರನ್‌ ನೀಡಿ ಮೂರು ವಿಕೆಟ್‌ ಪಡೆದುಕೊಂಡಿದ್ದಾರೆ. ಇನ್ನು ಅಕ್ಷರ್‌ ಪಟೇಲ್‌ 9.1 ಓವರ್‌ಗಳಲ್ಲಿ 14 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡ್ರೆ, ಜಯಂತ್‌ ಯಾದವ್‌ ಒಂದು ವಿಕೆಟ್‌ ಪಡೆಯುವ ಮೂಲಕ ನ್ಯೂಜಿಲೆಂಡ್‌ ತಂಡ ಕೇವಲ 28.1 ಓವರ್‌ಗಳಲ್ಲಿ ಕೇವಲ 62 ರನ್‌ಗಳಿಗೆ ಆಲೌಟಾಗಿದೆ.

ಅಜಾಜ್‌ ಪಟೇಲ್‌ (Ajaz Patel) ಗೆ 10 ವಿಕೆಟ್‌ : ವಿಶ್ವದಾಖಲೆ ಬರೆದ 3ನೇ ಬೌಲರ್‌

ವಾಖೆಂಡೆ ಟೆಸ್ಟ್‌ನಲ್ಲಿ ಒಟ್ಟು 47.5 ಓವರ್‌ ಬೌಲ್‌ ಮಾಡಿದ್ದ ಅಜಾಜ್‌ ಪಟೇಲ್‌ (Ajaz Patel) 12 ಓವರ್‌ ಮೇಡನ್‌ ಮಾಡಿದ್ದು 119 ರನ್‌ ನೀಡಿ 10 ವಿಕೆಟ್‌ ಪಡೆದುಕೊಂಡಿದ್ದಾರೆ. ಈ ಮೂಲಕ ಕನ್ನಡಿಗ ಅನಿಲ್‌ ಕುಂಬ್ಳೆ ಹಾಗೂ ಜಿಮ್‌ ಲೇಕರ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ ಅನಿಲ್‌ ಕುಂಬ್ಳೆ 199 ರಲ್ಲಿ ಪಾಕಿಸ್ತಾನ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. 26.3 ಓವರ್‌ಗಳನ್ನು ಎಸೆದಿದ್ದ ಕುಂಬ್ಳೆ 9 ಮೆಡನ್‌ ಓವರ್‌ ಮೂಲಕ ೭೪ರನ್‌ ನೀಡುವ ಮೂಲಕ ಪಾಕಿಸ್ತಾನದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದರು.

ಅನಿಲ್‌ ಕುಂಬ್ಳೆಗೂ ಮೊದಲು 1956ರಲ್ಲಿ ಇಂಗ್ಲೆಂಡ್‌ ಬೌಲರ್‌ ಆಗಿರುವ ಜಿಮ್‌ ಲೇಕರ್‌ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ10 ವಿಕೆಟ್‌ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಮೊದಲು ಇನ್ನಿಂಗ್ಸ್‌ನಲ್ಲಿ ಜಿಮ್‌ ಲೇಕರ್‌ 9 ವಿಕೆಟ್‌ ಪಡೆದಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ 51.2 ಓವರ್‌ ಎಸೆದಿದ್ದ ಜಿಲ್‌ ಲೇಕರ್‌ 23 ಮೇಡನ್‌ ಓವರ್‌ ಸೇರಿದಂತೆ 53 ರನ್‌ ನೀಡಿ ಎಲ್ಲಾ 10 ವಿಕೆಟ್‌ ಪಡೆಯುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಇದನ್ನೂ ಓದಿ : ವಿಶ್ವ ಅಥ್ಲೆಟಿಕ್ಸ್​​ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿ ಪಡೆದ ಅಂಜು ಬಾಬಿ ಜಾರ್ಜ್​

ಇದನ್ನೂ ಓದಿ : ಕುಂಬ್ಳೆ, ಜಿಮ್‌ ಲೇಕರ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ ಸ್ಪಿನ್ನರ್‌

( IND vs NZ 2nd Test 2 Day, New Zealand All out 62 Runs )

Comments are closed.