“ಫ್ಯಾನ್ ಇಲ್ಲಾಂದ್ರೆ, ನಮಗೆ ನಿದ್ದೆ ಬರಲ್ಲಪ್ಪ” ಇದು ಇಂದಿನ ಎಲ್ಲ ವರ್ಗದ ಜನರ ಮಾತು. ಅದೆಷ್ಟೇ ಚಳಿ ಇರ್ಲಿ ಫ್ಯಾನ್ ಬೇಕೇ ಬೇಕು. ಕೆಲವರಿಗಂತೂ ಅದರ ಸೌಂಡ್ ಇಲ್ಲದಿದ್ರೆ ನಿದ್ದೇನೆ ಬರೋದಿಲ್ಲ. ಈ ಫ್ಯಾನ್ ಅನ್ನೋದು ಟೈಂಪಾಸ್ ಮಾಡೋಕು ಒಳ್ಳೆ ಫ್ರೆಂಡ್ ಅನ್ನಬಹುದು. ಸುಮ್ನೆ ತಿರುಗ್ತಾ ಇರೋ ಫ್ಯಾನ್ ನೋಡ್ತಾ ಕೂತ್ರೆ, ಟೈಮ್ ಹೋದದ್ದೇ ತಿಳಿಯಲ್ಲ. ಸಣ್ಣವರಿದ್ದಾಗಿಂದ ಎಲ್ಲರಲ್ಲೂ ಒಂದು ಪ್ರಶ್ನೆ ಮೂಡಿರುತ್ತೆ. “ಸೀಲಿಂಗ್ ಫ್ಯಾನ್‌ಗೆ (ceiling fans) ಯಾಕೆ ಮೂರೇ ಬ್ಲೇಡ್ ಇರುತ್ತೆ? ಯಾಕೆ 4 ಅಥವಾ 5 ಇರಬಾರ್ದು” ಅಂತ. ಹೌದು. ಭಾರತದಲ್ಲಿ ಎಲ್ಲ ಕಡೆಯೂ ಮೂರೇ ಬ್ಲೇಡ್ ಫ್ಯಾನ್ ಸಿಗುತ್ತದೆ. ಆದ್ರೆ ಯುರೋಪ್ ಹಾಗೂ ಅಮೆರಿಕದಂತಹ ಕೆಲವು ದೇಶಗಳಲ್ಲಿ ಮೂರಕ್ಕಿಂತ ಹೆಚ್ಚಿನ ಬ್ಲೇಡ್ ಹೊಂದಿದ ಫ್ಯಾನ್ ಸಿಗುತ್ತದೆ. ಭಾರತದಲ್ಲಿ ಮಾತ್ರ ಯಾಕೆ ಹೀಗೆ? ಈ ಸ್ಟೋರಿ ಓದಿ. (Why Ceiling fans have 3 blades in India answer in Kannada).
ಫ್ಯಾನ್ ಹೇಗೆ ಕೆಲಸ ಮಾಡುತ್ತೆ?
ಫ್ಯಾನ್‌ನ ಕಾರ್ಯವು ಸುತ್ತಮುತ್ತಲಿನ ಗಾಳಿಯನ್ನು ಪುಶ್ ಮಾಡುವುದು ಅಥವಾ ಗಾಳಿಯ ಹರಿವನ್ನು ಹೆಚ್ಚಿಸುವುದು. ಗಾಳಿಯು ನಮ್ಮ ದೇಹವನ್ನು ಸೋಕಿದಾಗ ನಮ್ಮ ದೇಹದಿಂದ ಹೊರತೆಗೆಯುವ ಶಾಖದಿಂದಾಗಿ ದೇಹದ ಬೆವರು ಒಣಗುತ್ತದೆ. ಒಳಗಿನ ಶಾಖವು ಬೆವರಿನ ದ್ರವ ಸ್ಥಿತಿಯನ್ನು ಅನಿಲ ಸ್ಥಿತಿಗೆ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ, ನಮ್ಮ ದೇಹವು ತಂಪಾಗಿರುತ್ತದೇ ಅಥವಾ ಹಾಗೆ ಅನಿಸುತ್ತದೆ. ಈ ಫ್ಯಾನ್ ಬ್ಲೇಡ್ ಹೆಚ್ಚಾದಂತೆ ಅದು ತಳ್ಳುವ ಗಾಳಿಯ ಪ್ರಮಾಣವೂ ಹೆಚ್ಚು. ಹೀಗಾಗಿ ರೂಮ್‌ನಲ್ಲಿ ಸಿಗುವ ಗಾಳಿಯು ಹೆಚ್ಚು. ಆದರೆ ಬ್ಲೇಡ್ ಜಾಸ್ತಿ ಆದಂತೆ, ಫ್ಯಾನ್ ತಿರುಗುವಿಕೆಯು ನಿಧಾನವಾಗಬಹುದು. ಲೆಕ್ಕಕಿಂತ ಮಿತಿ ಮೀರಿದರೆ, ಬ್ಲೇಡ್‌ಗಳು ಒಂದಕ್ಕೊಂದು ಢಿಕ್ಕಿ ಹೊಡೆಯಬಹುದು.
ಮೂರೇ ಬ್ಲೇಡ್ ಇರೋಕೆ ಕಾರಣ ಏನು
ಸಾಧಾರಣವಾಗಿ ಎಲ್ಲಾ ಫ್ಯಾನ್ ಗಳಿಗೂ ಮೂರೇ ಬ್ಲೇಡ್ ಇರುತ್ತೆ. ಇವುಗಳು 60 ಡಿಗ್ರಿ ಕೋನದಲ್ಲಿ ಇದ್ದು, ಫ್ಯಾನ್ ಬಾಲನ್ಸ್ ಆಗಿರುವಂತೆ ನೋಡಿಕೊಳ್ಳುತ್ತದೆ. ಅದರ ಜೊತೆಗೆ ಕರೆಂಟ್, ಮೋಟಾರ್ ಹಾಗೂ ಸೌಂಡ್ ಕಡಿಮೆ ಮಾಡುತ್ತದೆ. ಅಮೇರಿಕದಂತಹ (America) ಶೀತಲ ಪ್ರದೇಶಗಳಲ್ಲಿ ಎ. ಸಿಯಿಂದ ಹೊರ ಬರುವ ಗಾಳಿಯನ್ನು ಜಾಸ್ತಿ ಸರ್ಕ್ಯುಲೇಟ್ ಮಾಡಲು ಫ್ಯಾನ್‌ಗೆ ನಾಲ್ಕು ಅಥವಾ ಐದು ಬ್ಲೇಡ್ ಜೋಡಿಸಿರುತ್ತಾರೆ.
ಹಾಗಿದ್ರೆ ಯಾವುದು ಬೆಸ್ಟ್?
ಆಗಲೇ ತಿಳಿಸಿದಂತೆ, ಏರ್ ಕಂಡೀಷನ್ಡ್ ರೂಮ್ ಆದ್ರೆ 4 ಬ್ಲೇಡ್ ಹೊಂದಿದ ಫ್ಯಾನ್ ಒಳ್ಳೆಯದು. ಆದರೆ ಇದು ನಿಮ್ಮ ಕರೆಂಟ್ ಬಿಲ್ ಹೆಚ್ಚಿಸುತ್ತದೆ. ಎ ಸಿ ಇಲ್ಲದ ರೂಮ್ ಆದಲ್ಲಿ 3 ಬ್ಲೇಡ್ ಫ್ಯಾನ್ ಉತ್ತಮ.
- ತೇಜಸ್ವಿನಿ
ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!
ಇದನ್ನೂಓದಿ: Marriage Age : ಬೇರೆ ಬೇರೆ ದೇಶಗಳಲ್ಲಿ ಎಷ್ಟು ವರ್ಷಕ್ಕೆ ಮದುವೆಯಾಗಬಹುದು?
(Why Ceiling fans have 3 blades in India answer in Kannada)