Jalappa Profile : ವ್ಯಕ್ತಿಚಿತ್ರಣ: ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ, ಮಾಜಿ ಸಚಿವ ಆರ್ ಎಲ್ ಜಾಲಪ್ಪ ವಿಧಿವಶ

ಬೆಂಗಳೂರು : ಇಂದು ಸಂಜೆ (ಡಿಸೆಂಬರ್ 17) ಇಹಲೋಕ ತ್ಯಜಿಸಿದ ಕೇಂದ್ರದ ಮಾಜಿ ಸಚಿವ ( Central Ex Minister passed away ) 97 ವರ್ಷದ ಆರ್.ಎಲ್. ಜಾಲಪ್ಪ ( RL Jalappa Profile passed away) ಅವರು ರಾಜಕಾರಣದಲ್ಲಿ ತಮ್ಮದೇ ಆದ ನಿಲುವುಗಳಿಂದ ಬಹು ಪ್ರಸಿದ್ಧರಾಗಿದ್ದರು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕ ವನ್ನು ಪ್ರತಿನಿಧಿಸಿದ ಜಾಲಪ್ಪನವರನ್ನು ಹಲವು ಕಾರಣಗಳಿಗಾಗಿ ಜನರು ನೆನೆಯುತ್ತಾರೆ. ಒಟ್ಟು ನಾಲ್ಕು ಬಾರಿ ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ವಿಧಾನಸಭೆಯ ಸದಸ್ಯರಾಗಿಯೂ ಮನೆ ಮಾತಾಗಿದ್ದರು. ಅಂದಹಾಗೆ ಜಾಲಪ್ಪನವರು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರವಾಗಿತ್ತು. ಅವರ ಪೂರ್ಣ ಹೆಸರು ಆರ್.ಲಕ್ಷ್ಮಿನಾರಾಯಣಪ್ಪ, ಪ್ರತಿನಿಧಿಸುತ್ತಿದ್ದ ಪಕ್ಷ ಕಾಂಗ್ರೆಸ್. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ದಿಗ್ಗಜರ ಒಡನಾಟ ಜಾಲಪ್ಪನವರಿಗಿತ್ತು.

ಮೈಸೂರಿನಲ್ಲಿ ಬಿ.ಎ ಪದವೀ ವ್ಯಾಸಂಗ ಮಾಡಿದ್ದ ಜಾಲಪ್ಪನವರು 1980ರಿಂದ 83ರವರೆಗೆ ಕರ್ನಾಟಕ ವಿಧಾನ ಪರಿಷತ್ ಮೂಲಕ ಅಧಿಕೃತವಾಗಿ ಕಲಾಪವನ್ನು ಪ್ರವೇಶಿಸಿದರು. ಆನಂತರ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಅವರು 1983 ರಿಂದ 1996ರವರೆಗೆ ಶಾಸಕರಾಗಿ ಸೇವೆ ಸಲ್ಲಿಸಿದರು. ನಂತರದ ದಿನಗಳಲ್ಲಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯು ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡರು. 1983-84 ಮತ್ತು 1985-86  ರಲ್ಲಿ ಸಹಕಾರ ಸಚಿವರಾಗಿ, 1986-1987ರಲ್ಲಿ ಗೃಹ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆನಂತರ ದಶಕದ ತರುವಾಯ ಅಂದರೆ, 1995-96ರಲ್ಲಿ  ಕರ್ನಾಟಕದ ಕಂದಾಯ ಸಚಿವರಾಗಿಯೂ ಜಾಲಪ್ಪನವರು ಸೇವೆ ಸಲ್ಲಿಸಿದ್ದಾರೆ.

1996-  11 ನೇ ಲೋಕಸಭೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾದ ಅವರು, 1996-98 ಕೇಂದ್ರ ಜವಳಿ ಸಚಿವರಾಗಿ ಸೇವೆ ಸಲ್ಲಿಸಿದರಲ್ಲದೇ, 1998 ರಲ್ಲಿ 1999ರಲ್ಲಿ ಮತ್ತು 2004 ರಲ್ಲಿಯೂ  ಲೋಕಸಭೆಗೆ ಮತ್ತೆ ಚುನಾಯಿತರಾದರು. ಮುಂದುವರೆದು  ಕೃಷಿ ಸಚಿವಾಲಯವೂ ಸೇರಿ ಹಲವು ಸಚಿವಾಲಯಗಳ ಸಲಹಾ ಸಮೀತಿಗಳಿಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಕ್ರಾಂತಿ ರಂಗ, ಜನತಾ ದಳ ಮುಂತಾದ ಕರ್ನಾಟಕದ ರಾಜಕೀಯ ಕಂಡ ಪಕ್ಷಗಳ ಜೊತೆಯೂ ಜಾಲಪ್ಪನವರು ಗುರುತಿಸಿಕೊಂಡಿದ್ದರು. ಇಂದು ಗತಿಸಿದ ಅವರು ಹಲವು ಐತಿಹಾಸಿಕ ಘಳಿಗೆಗಳಿಗೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: Why Ceiling fans have 3 blades: ಸೀಲಿಂಗ್ ಫ್ಯಾನ್‌ಗೆ ಮೂರೇ ರೆಕ್ಕೆ ಇರುವುದೇಕೆ? ಎಲ್ಲರ ಬಾಲ್ಯದ ಪ್ರಶ್ನೆಗೆ ಇಲ್ಲಿದೆ ಉತ್ತರ

(RL Jalappa profile Senior Politician Karnataka and Central Ex Minister passed away)

Comments are closed.