Woman Gives Birth : ಪೆಸಿಫಿಕ್​ ಸಾಗರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Woman Gives Birth : ಹಿಂದೆಲ್ಲ ಆಸ್ಪತ್ರೆ ವೈದ್ಯರ ಕೊರತೆ ಇರ್ತಾ ಇದ್ದುದರಿಂದ ಅನೇಕ ಗರ್ಭಿಣಿಯರಿಗೆ ಮನೆಯಲ್ಲಿಯೇ ಹೆರಿಗೆ ಆಗುತ್ತಿತ್ತು. ಆದರೀಗ ಹಾಗಲ್ಲ. ಕಾಲ ಬದಲಾಗಿದೆ. ವೈದ್ಯಕೀಯ ವ್ಯವಸ್ಥೆಯು ಸುಧಾರಿಸಿರುವ ಹಿನ್ನೆಲೆಯಲ್ಲಿ ಹೆರಿಗೆ ಎಂದಾಕ್ಷಣ ಮಹಿಳೆಯರು ಆಸ್ಪತ್ರೆಗಳಿಗೆ ತೆರಳುತ್ತಾರೆ. ಆದರೆ ನೀವು ಎಂದಾದರೂ ಸಮುದ್ರದಲ್ಲಿ ಅಲೆಗಳ ನಡುವೆ ಹೆರಿಗೆ ಮಾಡಿಸಿಕೊಳ್ಳುವುದನ್ನು ಊಹಿಸಿದ್ದೀರಾ.? ಇಂತಹದ್ದೊಂದು ಕಲ್ಪನೆ ಕೂಡ ಯಾವ ಗರ್ಭಿಣಿಯ ತಲೆಗೆ ಬಂದಿರಲಿಕ್ಕಿಲ್ಲ. ಆದರೆ ಇದು ಸಾಧ್ಯ ಎಂಬುದನ್ನು ಅಮೆರಿಕದ ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.

ಯಾವುದೇ ರೀತಿಯ ವೈದ್ಯಕೀಯ ಸಹಾಯವನ್ನು ಪಡೆಯದೇ ಮಹಿಳೆಯು ತಾನಾಗಿಯೇ ಮಗುವಿಗೆ ಸಾಗರದ ಅಲೆಗಳ ನಡುವೆ ಜನ್ಮ ನೀಡಿದ ವಿಡಿಯೋವನ್ನು ಮಹಿಳೆಯು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಇಂಟರ್ನೆಟ್​ನಲ್ಲಿ ಸಂಚಲನ ಮೂಡಿಸಿದೆ. 37 ವರ್ಷದ ಜೋಸಿ ಪ್ಯೂಕರ್ಟ್​ ತನ್ನ ಪತಿಯೊಂದಿಗೆ ಅಮೆರಿಕದ ನಿಕರಾಗುವಾದಲ್ಲಿರುವ ಪ್ಲಾಯಾ ಮಜಗುವಲ್​ ತೀರದಲ್ಲಿ ಮಗುವನ್ನು ಹೆತ್ತಿದ್ದಾಳೆ.

ಈ ವಿಚಾರವಾಗಿ ಮಾತನಾಡಿದ ಜೋಸಿ ಪ್ಯೂಕರ್ಟ್​ ವಾರಗಳ ಕಾಲ ನಾನು ನನ್ನ ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಿದ್ದೆ. ನನಗೆ ಹರಿಗೆ ನೀಡುವ ಸಮಯ ಸಂದರ್ಭ ಬಂದಾಗ ನನಗೆ ಸಮುದ್ರವೇ ಸರಿಯಾದ ಸ್ಥಳ ಎಂದು ಎನಿಸಿತು ಎಂದಿದ್ದಾರೆ.


ಜೋಸಿ ಅವರು ಮತ್ತು ಅವರ ಪತಿ ಬೆನ್ನಿ ಕಾರ್ನೆಲಿಯಸ್, 42, ಹೇಗೆ ಬೀಚ್‌ಗೆ ಓಡಿದರು ಎಂಬುದನ್ನು ತೋರಿಸುವ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ, ವಿಡಿಯೋದಲ್ಲಿ ಜೋಸಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನು ಓದಿ : Student Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ ?

ಇದನ್ನೂ ಓದಿ : Student Gang Rape : 10 ನೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ತಾಜಾ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Woman Gives Birth To Baby On Her Own In The Pacific Ocean

Comments are closed.