ಇದು ಕರ್ನಾಟಕದ ಮೊದಲ ಶ್ರೀರಾಮ ದೇವಾಲಯ : ಸೀತಾಪತಿಗೆ ನಡೆಯುತ್ತೆ ಕನ್ನಡದಲ್ಲೇ ಪೂಜೆ

Karnataka first Rama temple : ಕರ್ನಾಟಕದಲ್ಲಿ ರಾಮನಿಗಾಗಿ ಸಾವಿರಾರು ವರ್ಷಳ ಹಿಂದೆಯೇ ಒಂದು ದೇವಾಲಯ ನಿರ್ಮಾಣವಾಗಿತ್ತು. ಅದು ಕರ್ನಾಟಕ ಮೊದಲ ರಾಮನ ದೇವಾಲಯ ಅನ್ನೋ ಹೆಗ್ಗಳಿಕೆಯನ್ನು ಹೊತ್ತು ನಿಂತಿದೆ . ಅದ್ಯಾವ ದೇವಾಲಯ ಅನ್ನೋದು ನಿಮಗೆ ಗೊತ್ತಾ ?

Karnataka first Rama temple : ಶ್ರೀರಾಮ (Sri Rama) ಎಂದರೆ ಒಂದು ಭಾರತ ಶಕ್ತಿ.ಸ್ಪೂರ್ತಿ ಅನ್ನೋದಕ್ಕೆ ಎರಡು ಮಾತಿಲ್ಲ. ರಾಮ ಭಾರತೀಯರ ಕಣ ಕಣದಲ್ಲಿ ಬೆರೆತು ಹೋಗಿದ್ದಾನೆ. ಇದಕ್ಕೆ ಸಾಕ್ಷಿಯಾಗಿ ಅಯೋಧ್ಯೆ (Ayodhya) ಎದ್ದು ನಿಲ್ಲುತ್ತಾ ಇರೋದು . ಆದ್ರೆ ಕರ್ನಾಟಕದಲ್ಲಿ ರಾಮನಿಗಾಗಿ ಸಾವಿರಾರು ವರ್ಷಳ ಹಿಂದೆಯೇ ಒಂದು ದೇವಾಲಯ ನಿರ್ಮಾಣವಾಗಿತ್ತು. ಅದು ಕರ್ನಾಟಕ ಮೊದಲ ರಾಮನ ದೇವಾಲಯ ಅನ್ನೋ ಹೆಗ್ಗಳಿಕೆಯನ್ನು ಹೊತ್ತು ನಿಂತಿದೆ . ಅದ್ಯಾವ ದೇವಾಲಯ ಅನ್ನೋದು ನಿಮಗೆ ಗೊತ್ತಾ ?

Karnataka first Sri Rama temple Sitapati Rama is worshiped in Kannada Kodandarama Temple Hiremagalur Chikkamagalore
Image Credit to Original Source

ಹೌದು, ಇದು ಕರ್ನಾಟಕದ ಪುರಾತನ ರಾಮ ದೇವಾಲಯ . ಇಲ್ಲಿ ಸೀತಾ ಲಕ್ಮಣನ ಸಮೇತರಾಗಿ ರಾಮ ಪೂಜಿಸಲ್ಪಡುತ್ತಾನೆ, ಆದರೆ ಉಳಿದ ದೇವಾಲಯ ಗಳಿಗಿಂತ ಕೆಲವು ವಿಷಯಗಳಲ್ಲಿ ಈ ರಾಮ ದೇವಾಲಯ ಭಿನ್ನವಾಗಿದೆ . ಇಲ್ಲಿ ಕೋದಂಡರಾಮನಾಗಿ ರಾಮನನ್ನು ಪೂಜಿಸಲಾಗುತ್ತೆ. ಕೊದಂಡ ಅಂದ್ರೆ ಬಿಲ್ಲು ಹಿಡಿದಿರುವ ರಾಮ ಎಂದು ಅರ್ಥ . ಜೊತೆಯಲ್ಲಿ ಸೀತಾ ಲಕ್ಮಣನನ್ನು ಪೂಜಿಸಲಾಗುತ್ತೆ.

Karnataka first Sri Rama temple Sitapati Rama is worshiped in Kannada Kodandarama Temple Hiremagalur Chikkamagalore
Image Credit to Original Source

ಆದರೆ ಇಲ್ಲಿ ಸೀತೆ ಮಾತ್ರ ರಾಮನ ಬಲಬಾಗದಲ್ಲಿ ಕಾಣಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ ಎಲ್ಲಾ ದೇವಾಲಯದಲ್ಲಿ ರಾಮನ ಎಡಬಾಗದಲ್ಲಿ ಸೀತೆಯನ್ನು ಕಾಣಬಹುದು ಆದರೆ ಇಲ್ಲಿ ಮಾತ್ರ ಸೀತೆಯನ್ನು ಬಲಬಾಗದಲ್ಲಿ ಕಾಣಬಹುದು. ಇದಕ್ಕೆ ಪೌರಾಣಿಕ ಹಿನ್ನೆಲೆ ಇದೆ . ಕರ್ನಾಟಕಕ್ಕೂ ಪರಶುರಾಮನಿಗೂ ಒಂದು ನಂಟಿದೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ.

ಒಂದು ಬಾರಿ ಪರಶುರಾಮರು ರಾಮನನ್ನು ಇಲ್ಲಿ ಭೇಟಿಯಾಗಿದ್ದರಂತೆ . ಆಗ ರಾಮನಲ್ಲಿ ಪರಶುರಾಮರು ಮದುವೆಯ ದೃಷ್ಯದ ದರುಶನವನ್ನು ತೋರಿಸುವಂತೆ ಕೇಳಿದರಂತೆ ಆಗ ರಾಮ ಆ ಭಂಗಿಯಲ್ಲೇ ದರುಶನನ ನೀಡಿದರಂತೆ.  ಮದುವೆ ವೇಳೆ ವಧುವು ವರನ ಬಲಬಾಗದಲ್ಲಿ ಇರುವುದು ರೂಡಿ. ಪರಶುರಾಮರು ಮದುವೆಯನ್ನು ದರುಶನ ಮಾಡಲು ಹೇಳಿದಾಗ ಅದೇ ರೀತಿಯಲ್ಲಿ ರಾಮ ಕಾಣಿಸಿಕೊಂಡರಂತೆ ಹೀಗಾಗಿ ಅದೇ ರೀತಿ ಮೂರ್ತಿ ಇಲ್ಲಿದೆ ಅನ್ನೊ ಮಾತಿದೆ. ಇನ್ನು ಈ ಎಲ್ಲಾ ಮೂರ್ತಿಯನ್ನು ಏಕಶಿಲೆಯಿಂದ ಕೆತ್ತಲಾಗಿದೆ. ಇನ್ನು ಇಲ್ಲಿನ ಮತ್ತೊಂದು ವಿಶೇಷ ವೆಂದರೆ ಇಲ್ಲಿ ಆಂಜನೇಯನ ಬದಲಾಗಿ ಸುಗ್ರೀವನನ್ನು ನಾವು ಕಾಣಬಹುದು.

ಇದನ್ನೂ ಓದಿ : ಕೋಟ ಅಮೃತೇಶ್ವರಿ ದೇವಾಲಯದಲ್ಲಿ ಜಾತ್ರೆಯ ಸಂಭ್ರಮ – ಮಕ್ಕಳಿಲ್ಲದವರಿಗೆ ಮಡಿಲು ತುಂಬುತ್ತಾಳೆ ಹಲವು ಮಕ್ಕಳತಾಯಿ

Karnataka first Sri Rama temple Sitapati Rama is worshiped in Kannada Kodandarama Temple Hiremagalur Chikkamagalore
Image Credit to Original Source

ಹೀಗಾಗಿ ಇದು ಸುಗ್ರೀವ ರಾಜನಾಗಿದ್ದಾಗ ನಿರ್ಮಿತವಾದ ದೇವಾಲಯ ಅಂತಾನು ಹೇಳಲಾಗುತ್ತೆ. ಇನ್ನು ಭಾರ್ಗವರು ಇಲ್ಲಿ ಬಂದಿದ್ದರಿಂದ ಇದನ್ನು ಭಾರ್ಗವಿ ಪುರ ಅಂತಾನು ಕರೆಯಲಾಗುತ್ತೆ. ಇನ್ನು ದೇವಾಲಯದ ಮಾತ್ತೊಂದು ವಿಶೇಷವೆಂದರೆ ಇಲ್ಲಿ ಕನ್ನಡದಲ್ಲಿ ಪೂಜೆಯನ್ನು ಮಾಡುವ ರೂಡಿ ಇದೆ . ಇಲ್ಲಿ ಮಂತ್ರ ವನ್ನು ಕನ್ನಡದಲ್ಲಿ ವಾಚನ ಮಾಡಲಾಗುತ್ತದೆ. ಸಂಸ್ಕೃತದಲ್ಲಿ ಇರುವ ಎಲ್ಲಾ ಮಂತ್ರವನ್ನು ಕನ್ನಡದಲ್ಲಿ ಹೇ ಳಿ ಪೂಜೆ ಯನ್ನು ಸಲ್ಲಿಸಲಾತ್ತೆ.

ವಿದ್ವಾಂಸರು ವಿಮರ್ಶಕರು ಆದ ಹಿರೇ ಮಗಳೂರು ಕಣ್ಣನ್ ಅವರು ಇಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿ ಸುತ್ತಿದ್ದಾರೆ . ಇದನ್ನು ಕೇಳಿದ್ರೆ ನಮಗೊಂದು ಕನ್ನಡದ ದೇವಾಲಯ ಇದೆ ಅಂತ ಅನಿಸದೇ ಇರದು.ಇನ್ನು ಈ ದೇವಾಲಯ ಇರೋದು ಎಲ್ಲಿ ಅಂದ್ರೆ ನಮ್ಮ ಚಿಕ್ಕಮಗಳೂರು ಜಿಲ್ಲೆ ಹಿರೇಮಗಳೂರಿನಲ್ಲಿ . ಚಿಕ್ಕ ಮಗಳೂರಿನಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿರು ಈ ದೇವಾಲಯಕ್ಕೆ ಚಿಕ್ಕಮಗಳೂರಿನಿಂದ ಮಾಹನ ಸೌಲಭ್ಯವಿದೆ.

ಇದನ್ನೂ ಓದಿ : ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ

Karnataka first Sri Rama temple Sitapati Rama is worshiped in Kannada Kodandarama Temple Hiremagalur Chikkamagalore
Image Credit to Original Source

ಇನ್ನು ಈ ದೇವಾಲಯ ವು ಬೆಳಗ್ಗೆ 6ರಿಂದ 11.30  ವರೆಗೆ ಹಾಗೂ ಸಂಜೆ 4 ರಿಂದ 8.30 ರವರೆಗೆ ತೆರೆದಿರುತ್ತೆ .ಒಟ್ಟಾರೆ ಕನ್ನಡದ ಮೊದಲ ರಾಮನ ದೇವಾಲಯಕ್ಕೆ ಒಮ್ಮೆಯಾದ್ರೂ ಭೇಟಿ ನೀಡಿ ರಾಮನ ಅಂದವನ್ನು ಕಣ್ಣು ತುಂಬಿಕೊಳ್ಳಿ. ಇದರ ಪ್ರಭಾವಳಿ ಈಗಾಗಲೇ ದೇಶದೆಲ್ಲೆಡೆ ವ್ಯಾಪಿಸಿದೆ ಅನ್ನೋದಕ್ಕೆ ಸಾಕ್ಷಿ ದೇವಾಲಯ ಭರ್ಗವಿ ಪುರ. ಸೀತೆ ಬಲಬಾಗ ʼಚಿಕ್ಕಮಗಳೂರಿನಿಂದ 4ಕಿ ಮೀ

Karnataka first Sri Rama temple : Sitapati Rama is worshiped in Kannada , Kodandarama Temple Hiremagalur Chikkamagalore

Comments are closed.