2020 ರಲ್ಲಿ ಅತೀ ಹೆಚ್ಚು ಸರ್ಚ್ ಆದ ಫುಡ್ ಯಾವುದು ಗೊತ್ತಾ ?


ಕೊರೋನಾ.. 2020 ನ್ನು ಕರಾಳವಾಗಿಸಿದ ರೋಗ. ಕ್ವಾರಂಟೀನ್ ಲಾಕ್ ಡೌನ್ ಗಳ ಜೊತೆಯಲ್ಲೇ ಜನರು ಮನೆಯಲ್ಲೇ ದಿನ ಕಳೆದಿದ್ದಾರೆ. ನಿಮಗೂ ಇದೆಲ್ಲಾ ಗೊತ್ತಿದೆ. ಆಗ ನಿಮಗೆ ಯಾವುದಾದರೂ ಫುಡ್ ತಿನ್ನಬೇಕು ಅಂತ ಅನಿಸಿಯೇ ಇರುತ್ತೆ. ಅದನ್ನು ಮಾಡೋಕೆ ಅಥವಾ ಬುಕ್ ಮಾಡೋಕೆ ಒಂದು ಬಾರಿಯಾದರೂ ಇಂಟರ್ ನೆಟ್ ನಲ್ಲಿ ನೀವು ಸರ್ಚ್ ಮಾಡಿಯೇ ಇರುತ್ತೀರಾ ? ಹಾಗಾದ್ರೆ ಯಾವ ಫುಡ್ ಯಾವುದು ?

ಯಾಕೆ ಈ ಮಾತು ಬಂತು ಅಂತ ಯೋಚನೆ ಮಾಡ್ತಿದ್ದೀರಾ ? 2020 ರಲ್ಲಿ ವಿಶ್ವದೆಲ್ಲೆದೆ ಯಾವ ಫುಡ್ ಜಾಸ್ತಿ ಇಂಟರ್ ನೆಟ್ ನಲ್ಲಿ ಜಾಸ್ತಿ ಸರ್ಚ್ ಆಗಿದೆ ಅಂತ ನಿಮಗೆ ಗೊತ್ತಾ ? ಅದು ಪಿಜ್ಜಾ.

ಹೌದು, 2020ರ ಕೊರೊನಾದ ನಡುವೆಯೂ ಜನರು ಗೂಗ್ ನಲ್ಲಿ ಪಿಜ್ಜಾವನ್ನು ಸರ್ಚ್ ಮಾಡಿದ್ದಾರೆ. ವಿಶ್ವದ ಅರ್ಧದಷ್ಟು ಮಂದಿ ಈ ಪಿಜ್ಜಾ ವನ್ನು ಸರ್ಚ್ ಮಾಡಿದ್ದಾರೆ ಅಂತ ಸಂಶೋಧನೆವೊಂದರಿಂದ ಬಯಲಾಗಿದೆ. ಭಾರತದಲ್ಲಿಯೂ ಕೂಡಾ ಪಿಜ್ಜಾವನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ಇಂಡಿಯಾ, ಚೀನಾ, ಅಮೆರಿಕಾ ಹಾಗೂ ಐರೋಪ್ಯ ರಾಷ್ಟಗಳ ಜನರು ಇದನ್ನು ಹುಡುಕಾಟ ನಡೆಸಿದ್ದಾರೆ ಅಂತ ರಿಸರ್ಚ್ ಹೇಳಿದೆ.

ಇನ್ನು ಎರಡನೇ ಸ್ಥಾನವನ್ನು ಚೈನೀಸ್ ಫುಡ್ ಆಕ್ರಮಿಸಿಕೊಂಡಿದೆ. ಚೀನಾದ ಹಲವು ಬಗೆಯ ಖಾದ್ಯಗಳನ್ನು ವಿಶ್ವದ ಜನರು ಸರ್ಚ್ ಮಾಡಿದ್ದಾರಂತೆ. ಚೀನಾ, ನೇಪಾಳ, ಆಸ್ಟ್ರೇಲಿಯಾ ಇಂಡಿಯಾದಲ್ಲಿ ಇದು ಅತಿ ಹೆಚ್ಚು ಸರ್ಚ್ ಆಗಿದೆ ಅಂತ ಸಂಶೋಧನೆಯಲ್ಲಿ ಗೊತ್ತಾಗಿದೆ.

ಇನ್ನು ಮೂರನೇ ಆಹಾರವಾಗಿ ಜಪಾನ್ ನ ಸೂಶಿಯನ್ನು ಜನರು ಹುಡುಕಾಟ ನಡೆಸಿದ್ದಾರಂತೆ. ಬ್ರಿಟೀಷ್ ಫಿಷ್, ಚಿಪ್ಸ್, ಚಿಕನ್, ಇಂಡಿಯನ್, ಕೊರಿಯನ್ ಆಹಾರಗಳು ಹುಡುಕಾಟದಲ್ಲಿವೆ ಅಂತ ಗೂಗಲ್ ರಿಸರ್ಚ್ ನಲ್ಲಿ ಹೇಳಲಾಗಿದೆ.

Comments are closed.