B Ed Exam schedule announced : ಬಿಎಡ್‌ ಪರೀಕ್ಷಾ ವೇಳಾಪಟ್ಟಿ ಪ್ರಕಟ : ವಿದ್ಯಾರ್ಥಿಗಳಿಗಿಲ್ಲ ಚೌತಿಯ ಸಂಭ್ರಮ

ಮಂಗಳೂರು : ಬಿಎಡ್‌ ಸೆಮಿಸ್ಟರ್ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು (B Ed Exam schedule announced) ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ಅಗಸ್ಟ್‌ 20 ರಂದು ಪರೀಕ್ಷೆ ಆರಂಭ ಗೊಳ್ಳಲಿದ್ದು, ಸಪ್ಟೆಂಬರ್‌ 1 ರಂದು ಅಂತಿಮ ಪರೀಕ್ಷೆ ನಡೆಯಲಿದೆ. ಅಗಸ್ಟ್‌ 20 ರಂದು ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಆರಂಭ ಗೊಳ್ಳಲಿದ್ದು, ಅಗಸ್ಟ್‌ 29 ರಂದು ಮುಕ್ತಾಯಗೊಳ್ಳಲಿದೆ. ಇನ್ನು ಮೂರನೇ ಸೆಮಿಸ್ಟರ್‌ ಪರೀಕ್ಷೆ ಅಗಸ್ಟ್‌ 23 ರಂದು ಆರಂಭ ಗೊಂಡು ಸೆಪ್ಟೆಂಬರ್‌ 1 ರಂದು ಮುಕ್ತಾಯಗೊಳ್ಳಲಿದೆ.

ಮಂಗಳೂರು ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ಬಿಎಡ್‌ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆದರೆ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಪ್ರಕಟವಾಗಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರಿಯಾಗಿ ಶೈಕ್ಷಣಿಕ ಚಟುವಟಿಕೆ ನಡೆದಿರಲಿಲ್ಲ. ಆದ್ರೆ ಕಳೆದ ಒಂದು ವಾರದ ಹಿಂದೆಯಷ್ಟೇ ಸುರಿದ ಭಾರೀ ಮಳೆಯಿಂದಾಗಿ ಸುಮಾರು ಒಂದು ವಾರಗಳ ಕಾಲ ಶೈಕ್ಷಣಿಕ ಚಟುವಟಿಕೆ ಕುಂಠಿತವಾಗಿತ್ತು. ಆದ್ರೀಗ ವಿಶ್ವವಿದ್ಯಾಲಯ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಪ್ರಥಮ ಸೆಮಿಸ್ಟರ್‌ ಪರೀಕ್ಷೆಗಳು ಗಣೇಶ ಚತುರ್ಥಿಯ ಮೊದಲೇ ನಡೆಯುವುದರಿಂದಾಗಿ ವಿದ್ಯಾರ್ಥಿಗಳು ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದಾಗಿದೆ. ಆದ್ರೆ ಈ ಭಾಗ್ಯ ಮೂರನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಇಲ್ಲ. ಮೂರನೇ ಸೆಮಿಸ್ಟರ್‌ ಅಂತಿಮ ಪರೀಕ್ಷೆ ಸೆಪ್ಟೆಂಬರ್‌ 1ರಂದು ನಡೆಯಲಿದೆ. ಅಗಸ್ಟ್‌ 31ರಂದು ಚೌತಿ ನಡೆಯಲಿರುವುದರಿಂದಾಗಿ ಪರೀಕ್ಷೆಯನ್ನು ಮುಂಚಿತವಾಗಿ ಅಥವಾ ಒಂದು ದಿನ ಮುಂದೂಡುವಂತೆಯೂ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆದ್ರೆ ವಿದ್ಯಾರ್ಥಿಗಳು ಹಬ್ಬವನ್ನಾಚರಿಸಲು ಸಾಧ್ಯವಿಲ್ಲ. ಜೊತೆಗೆ ಹಬ್ಬದ ಗುಂಗಿನಲ್ಲಿ ಪರೀಕ್ಷೆ ಬರೆಯುವುದ ಕೂಡ ಕಷ್ಟಕರ ಅನ್ನೋ ಅಭಿಪ್ರಾಯ ಇದೀಗ ವಿದ್ಯಾರ್ಥಿಗಳ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಮಂಗಳೂರು ವಿವಿ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ಮಾಡುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.

Bed xam schedule announced, no students celebrate Ganesh Chaturthi

ಇದನ್ನೂ ಓದಿ : CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : CBSE declares Class 10 results : ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

B Ed Exam schedule announced, no students celebrate Ganesh Chaturthi

Comments are closed.