BEL Recruitment 2023 : ಡಿಪ್ಲೊಮಾ, ಐಟಿಐ, ಪದವೀಧರರಿಗೆ ಉದ್ಯೋಗಾವಕಾಶ, 90 ಸಾವಿರ ವೇತನ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ (BEL Recruitment 2023) ಅಧಿಕೃತ ಅಧಿಸೂಚನೆಯ ಆಗಸ್ಟ್ 2023 ರ ಮೂಲಕ ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ, ಟೆಕ್ನಿಷಿಯನ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಈ ಹುದ್ದೆಗಳಿಗೆ ಅಗತ್ಯವಿರುವ ವಯಸ್ಸಿನ ಮಿತಿ, ವಿದ್ಯಾರ್ಹತೆ ಮತ್ತು ಅನುಭವ ಸೇರಿದಂತೆ ಎಲ್ಲಾ ಅರ್ಹತಾ ಷರತ್ತುಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.

BEL Recruitment 2023 : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹುದ್ದೆಯ ಅಧಿಸೂಚನೆಯ ಸಂಪೂರ್ಣ ವಿವರ :

ಸಂಸ್ಥೆಯ ಹೆಸರು : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆಗಳ ಸಂಖ್ಯೆ : 63 ಹುದ್ದೆಗಳು
ಉದ್ಯೋಗ ಸ್ಥಳ : ಬೆಂಗಳೂರು
ಹುದ್ದೆಯ ಹೆಸರು : ಇಂಜಿನಿಯರಿಂಗ್ ಸಹಾಯಕ ಟ್ರೈನಿ, ತಂತ್ರಜ್ಞ
ವೇತನ : ರೂ.21500-90000/- ಪ್ರತಿ ತಿಂಗಳು

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹುದ್ದೆಯ ವಿವರ :

  • ಇಂಜಿನಿಯರಿಂಗ್ ಸಹಾಯಕ ಟ್ರೇನಿ : 16 ಹುದ್ದೆಗಳು
  • ತಂತ್ರಜ್ಞ : 44 ಹುದ್ದೆಗಳು
  • ಕಿರಿಯ ಸಹಾಯಕ : 3 ಹುದ್ದೆಗಳು

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವಿದ್ಯಾರ್ಹತೆ ವಿವರ :

  • ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ : ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್/ಸಿವಿಲ್ ಇಂಜಿನಿಯರಿಂಗ್
  • ತಂತ್ರಜ್ಞ : 10ನೇ, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರಿಕಲ್, ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್) ನಲ್ಲಿ ಐಟಿಐ
  • ಕಿರಿಯ ಸಹಾಯಕ : ಬಿ.ಕಾಂ, ಬಿಬಿಎಂ

ವಯೋಮಿತಿ ವಿವರ :
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 01-ಆಗಸ್ಟ್-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು. ಇದನ್ನೂ ಓದಿ : Karnataka Bank Recruitment 2023 : ಕರ್ಣಾಟಕ ಬ್ಯಾಂಕ್ ನೇಮಕಾತಿ 2023 : ಪದವಿ, ಸ್ನಾತಕೋತ್ತರ ಪದವೀಧರರಿಗೆ ಉದ್ಯೋಗಾವಕಾಶ

ವಯೋಮಿತಿ ಸಡಿಲಿಕೆ :

  • OBC (NCL) ಅಭ್ಯರ್ಥಿಗಳು : 03 ವರ್ಷಗಳು
  • SC/ST ಅಭ್ಯರ್ಥಿಗಳು : 05 ವರ್ಷಗಳು
  • PwBD ಅಭ್ಯರ್ಥಿಗಳು : 10 ವರ್ಷಗಳು

ಅರ್ಜಿ ಶುಲ್ಕ :
SC/ST/PwBD/Ex-Servicemen ಅಭ್ಯರ್ಥಿಗಳು : Nil
ಸಾಮಾನ್ಯ/OBC/EWS ಅಭ್ಯರ್ಥಿಗಳು : ರೂ.250/-

ಪಾವತಿ ವಿಧಾನ : ಆನ್‌ಲೈನ್

ಆಯ್ಕೆ ಪ್ರಕ್ರಿಯೆ :
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಬಳ (ತಿಂಗಳಿಗೆ) ವಿವರ :

  • ಇಂಜಿನಿಯರಿಂಗ್ ಸಹಾಯಕ ಟ್ರೇನಿ : ರೂ.24500-90000/-
  • ತಂತ್ರಜ್ಞ : ರೂ.21500-82000/-
  • ಕಿರಿಯ ಸಹಾಯಕ : ರೂ.21500-82000/-

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 16 ಅಗಸ್ಟ್‌ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಸೆಪ್ಟೆಂಬರ್‌ 2023

BEL Recruitment 2023 : Diploma, ITI, Job Opportunity for Graduates, Salary 90 thousand

Comments are closed.