KSET ಪರೀಕ್ಷೆ ಫಲಿತಾಂಶ ಪ್ರಕಟ : ಸಹಾಯಕ ಉಪನ್ಯಾಸ ಹುದ್ದೆಗೆ ಅರ್ಹತೆ ಪಡೆದ 4779 ಮಂದಿ

ಮೈಸೂರು : ಕರ್ನಾಟಕ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ ( KSET ) ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿದ್ದವರ ಪೈಕಿ ಸಹಾಯಕ ಉಪನ್ಯಾಸಕರಾಗಲು 4779 ಮಂದಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಕೆ-ಸೆಟ್‌ ಮುಖ್ಯಸ್ಥರಾಗಿರುವ ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಮೈಸೂರು ವಿಶ್ವ ವಿದ್ಯಾಲಯ ಕಳೆದ ಜುಲೈ 25 ರಂದು ಕೆ-ಸೆಟ್‌ ಪರೀಕ್ಷೆಯನ್ನು ನಡೆಸಿತ್ತು. ರಾಜ್ಯದ ಸುಮಾರು 83,907 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 69,857 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2470 ಪುರುಷರು ಮತ್ತು 2309 ಮಹಿಳೆಯರು ಸೇರಿದಂತೆ ಒಟ್ಟು 4779 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಸಹಾಯಕ ಉಪನ್ಯಾಸಕರಾಗಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ವಾಣಿಜ್ಯ ವಿಷಯದಲ್ಲಿ ಅತೀ ಹೆಚ್ಚು ಮಂದಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಷಯದಲ್ಲಿ 888, ಕನ್ನಡ ವಿಷಯದಲ್ಲಿ 397, ರಾಜ್ಯಶಾಸ್ತ್ರದಲ್ಲಿ 378, ಇತಿಹಾಸ ವಿಷಯದಲ್ಲಿ 325, ಅರ್ಥಶಾಸ್ತ್ರದಲ್ಲಿ 308, ಇಂಗ್ಲಿಷ್‌ ವಿಷಯದಲ್ಲಿ 306 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ರಾಜ್ಯದ 11 ಕೇಂದ್ರಗಳಲ್ಲಿ ಒಟ್ಟು 41 ವಿಷಯಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

( KSET Exams Results announce, 4,799 Candidates Cleared Exams )

Comments are closed.